ಮಸಾಲಾಪುಡಿ, ಅರಿಶಿನಪುಡಿಗಳಲ್ಲಿ (Lead in turmeric and spice powders) ಸೀಸದ ಅಂಶ ಪತ್ತೆ
ರಾಜ್ಯದಾದ್ಯಂತ ಮಾದರಿ ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ರವಾನೆ
FSSAI ಗೆ ದೂರು ದಾಖಲಾದ ಹಿನ್ನಲೆ ಸರ್ಕಾರದಿಂದ ಕಟ್ಟುನಿಟ್ಟಿನ ಪರಿಶೀಲನೆ ಆರಂಭ
Bengaluru : ನಮ್ಮ ದಿನನಿತ್ಯದ ಅಡುಗೆಯಲ್ಲಿ ಅವಿಭಾಜ್ಯ ಸ್ಥಾನ (Lead in turmeric and spice powders) ಪಡೆದಿರುವ ಅರಿಶಿಣ ಪುಡಿ ಮತ್ತು ಮಸಾಲೆ ಪದಾರ್ಥಗಳ ಕುರಿತು ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಸಾಮಾನ್ಯವಾಗಿ ಆರೋಗ್ಯಕರ ಮತ್ತು ಶುದ್ಧವಾದ ಪದಾರ್ಥ ಎಂದು ಪರಿಗಣಿಸಲ್ಪಡುವ ಅರಿಶಿಣದಲ್ಲಿ ಇದೀಗ ಸೀಸದ ಅಂಶ ಇರುವ ಸಾಧ್ಯತೆಗಳ ಬಗ್ಗೆ ದೂರುಗಳು ಕೇಳಿಬರುತ್ತಿವೆ.

ಈ ಹಿನ್ನೆಲೆ, ರಾಜ್ಯದ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆ ಸರ್ಕಾರದ ಸೂಚನೆಯಂತೆ ತಕ್ಷಣವೇ ಕ್ರಮ ಕೈಗೊಂಡಿದೆ. ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ
ರೀತಿಯ ನಿರ್ಲಕ್ಷ್ಯ ತಾಳಲಾಗದು ಎಂಬ ಕಾರಣಕ್ಕೆ ರಾಜ್ಯಾದ್ಯಂತ ಮಸಾಲೆ ಪುಡಿ ಹಾಗೂ ಅರಿಶಿಣ ಪುಡಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ.
ಇತ್ತೀಚೆಗೆ ಆಹಾರ ಇಲಾಖೆಗೆ ಬಂದಿರುವ ದೂರುಗಳಲ್ಲಿ, ಕೆಲವು ವ್ಯಾಪಾರಿಗಳು (Lead in turmeric and spice powders) ಅರಿಶಿಣ ಪುಡಿಗೆ ಬಣ್ಣ ಹೆಚ್ಚಿಸಲು ಮತ್ತು ಗಟ್ಟಿತನ ಹೆಚ್ಚಿಸಲು ಕೃತಕ ಪದಾರ್ಥಗಳನ್ನು ಸೇರಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ವಿಶೇಷವಾಗಿ ಸೀಸದಂತಹ ಹಾನಿಕಾರಕ ಲೋಹಗಳನ್ನು ಸೇರಿಸುವ ಮೂಲಕ ಉತ್ಪನ್ನದ ಗುಣಮಟ್ಟವನ್ನು ಕೃತಕವಾಗಿ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ರೀತಿಯ ಕಲಬೆರಕೆಗಳು ತಕ್ಷಣದ ಆರೋಗ್ಯ ಸಮಸ್ಯೆಗಳಷ್ಟೇ ಅಲ್ಲ, ದೀರ್ಘಕಾಲದಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ರೋಗಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ.
ಅರಿಶಿಣದಂತಹ ಪ್ರಕೃತಿ ಆಧಾರಿತ ಪದಾರ್ಥಗಳಲ್ಲಿ ಕಲಬೆರಕೆ ನಡೆಯುತ್ತಿರುವುದು ಜನರಲ್ಲಿ ಭಯ ಹುಟ್ಟಿಸಿದೆ. ಆಹಾರದಲ್ಲಿ ಬಳಸುವ ಪದಾರ್ಥಗಳ ಮೇಲೆ ಜನರು ಇಡುವ
ನಂಬಿಕೆ ಕುಸಿಯುವಂತಾಗಿದೆ. ವಿಶೇಷವಾಗಿ ಮನೆಮಂದಿಯ ಆರೋಗ್ಯದ ಹೊಣೆ ಹೊತ್ತಿರುವ ಮಹಿಳೆಯರು ಮತ್ತು ಕುಟುಂಬದವರು ಹೆಚ್ಚಿನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ದೊರೆಯುವ ಮಸಾಲೆ ಪುಡಿಗಳ ಗುಣಮಟ್ಟದ ಬಗ್ಗೆ ಅನುಮಾನಗಳು ಹೆಚ್ಚುತ್ತಿರುವ ಹಿನ್ನೆಲೆ, ಸರ್ಕಾರದಿಂದ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವುದು ಅವಶ್ಯಕವಾಗಿದೆ. ಈ ಕ್ರಮದಿಂದ ತಪ್ಪಿತಸ್ಥರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದ ಮಸಾಲೆ ಪುಡಿ ಮತ್ತು ಅರಿಶಿಣದ ಮಾದರಿಗಳನ್ನು ಸಂಗ್ರಹಿಸುವ ಕಾರ್ಯ ಆರಂಭವಾಗಿದೆ.
ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಿ, ಅವುಗಳಲ್ಲಿ ಸೀಸದ ಪ್ರಮಾಣ ಸೇರಿದಂತೆ ಇತರ ಹಾನಿಕಾರಕ ಅಂಶಗಳಿರುವುದನ್ನು ಪರಿಶೀಲಿಸಲಾಗುತ್ತಿದೆ.
ಪರೀಕ್ಷಾ ವರದಿ ಬಂದ ನಂತರ, ಯಾವುದೇ ರೀತಿಯ ಕಲಬೆರಕೆ ದೃಢಪಟ್ಟರೆ ಸಂಬಂಧಿಸಿದ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜೊತೆಗೆ, ಸಾರ್ವಜನಿಕರು ಶುದ್ಧ ಮತ್ತು ನಂಬಿಕೆ ಇರುವ ಬ್ರಾಂಡ್‌ಗಳನ್ನು ಆಯ್ಕೆ ಮಾಡಬೇಕು ಹಾಗೂ ಅನುಮಾನಾಸ್ಪದ ಉತ್ಪನ್ನಗಳ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇನ್ನು ಈ ಘಟನೆಯು ನಮ್ಮ ಆಹಾರ ಪದ್ಧತಿಗಳಲ್ಲಿನ ಲೋಪದೋಷಗಳ ಮತ್ತೊಮ್ಮೆ ನೆನಪಿಸಿದೆ. ಮನೆಮದ್ದಿನಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಜಾಗೃತರಾಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಸಾಧ್ಯವಾದರೆ ಮನೆಮೇಲೆ ಅರಿಶಿಣವನ್ನು ಒಣಗಿಸಿ ಪುಡಿ ಮಾಡಿಕೊಳ್ಳುವುದು ಅಥವಾ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಖರೀದಿಸುವುದು ಉತ್ತಮ.
ಸರ್ಕಾರದ ಈ ಪರಿಶೀಲನಾ ಕ್ರಮವು ಜನರ ಆರೋಗ್ಯವನ್ನು ಕಾಪಾಡುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಲಬೆರಕೆಗಳಿಗೆ ಸಂಪೂರ್ಣ ಕಡಿವಾಣ ಬೀಳಲಿ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.