Pager and now chatter blast: 32 killed, over 3250 injured
Lebanon: ಲೆಬನಾನ್ನಲ್ಲಿ (Lebanon) ಪೇಜರ್ಗಳು ಸ್ಫೋಟಗೊಂಡು 12 ಜನ ಸಾವನ್ನಪ್ಪಿ, 280ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರವಷ್ಟೇ ವರದಿಯಾಗಿತ್ತು. ಈ ಬೆನ್ನಲ್ಲೇ ದೇಶಾದ್ಯಂತ ಎಲೆಕ್ಟ್ರಾನಿಕ್ಸ್ ಸಂವಹನ ಸಾಧನಗಳು ಬ್ಲಾಸ್ಟ್ (Blast) ಆಗಿದ್ದು, ಅಪಾರ ಸಾವು-ನೋವು ಸಂಭವಿಸಿದೆ.
ಹಿಜ್ಬುಲ್ಲಾವನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ದಾಳಿ ನಡೆಸಿದ್ದು, ಯುದ್ಧದ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಈ ದೇಶಗಳಲ್ಲಿ ಉಂಟಾಗಿದೆ. ಲೆಬನಾನ್ನಾದ್ಯಂತ ಹಿಜ್ಬುಲ್ಲಾ (Hezbollah) ಭದ್ರಕೋಟೆಗಳಲ್ಲಿ ವಾಕಿ-ಟಾಕಿಗಳು ಸ್ಫೋಟಗೊಂಡಿದ್ದು, ಈಗಾಗಲೇ 32 ಜನರು ಸಾವನ್ನಪ್ಪಿದ್ದಾರೆ ಮತ್ತು 3250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ವಾಕಿ-ಟಾಕಿಗಳು ಸ್ಫೋಟಗೊಂಡ ಪರಿಣಾಮ 60 ಮನೆಗಳು ಮತ್ತು ಅಂಗಡಿಗಳಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟುಹೋಗಿವೆ. ಒಂದು ಲಿಥಿಯಂ ಬ್ಯಾಟರಿ ಹೊತ್ತು ಉರಿದಿದೆ. ಸುಮಾರು 15 ಕಾರುಗಳು ಮತ್ತು ಡಜನ್ಗಟ್ಟಲೆ ಮೋಟರ್ಸೈಕಲ್ಗಳು (Motor Cycle) ಬೆಂಕಿಗೆ ಆಹುತಿಯಾದವು ಮತ್ತು ಎರಡು ಫಿಂಗರ್ಪ್ರಿಂಟ್ ಸಾಧನಗಳು ಸುಟ್ಟು ಹೋಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ ಈವರೆಗೆ ಒಟ್ಟು ಎಷ್ಟು ವಾಕಿ-ಟಾಕಿಗಳು (Walkie-Talkies) ಸ್ಫೋಟಗೊಂಡವು ಎಂಬುದು ತಿಳಿದು ಬಂದಿಲ್ಲ. ಆದರೆ ಎಣಿಕೆಯು ನೂರಾರು ಎಂದು ಅಂದಾಜಿಸಲಾಗಿದೆ. ಪೂರ್ವ ಲೆಬನಾನ್ನ ವಿವಿಧ ಸ್ಥಳಗಳಲ್ಲಿ ಸ್ಥಿರ ದೂರವಾಣಿಗಳು ಸಹ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.
ಈ ಸ್ಫೋಟಗಳು ದಕ್ಷಿಣ ಲೆಬನಾನ್ ಮತ್ತು ಬೈರುತ್ನ ಉಪನಗರಗಳಲ್ಲಿ ಸಂಭವಿಸಿವೆ. ನಿನ್ನೆಯ ಪೇಜರ್ (Pager) ಸ್ಫೋಟಗಳಲ್ಲಿ ಸಾವನ್ನಪ್ಪಿದ ಸದಸ್ಯರಿಗೆ ಹಿಜ್ಬುಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆ ಸ್ಥಳದಲ್ಲೂ ಒಂದು ಸ್ಫೋಟ ಸಂಭವಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ದಕ್ಷಿಣ ಲೆಬನಾನ್, ಬೈರುತ್ನ ದಕ್ಷಿಣ ಉಪನಗರಗಳು ಮತ್ತು ಮಧ್ಯ ಬೆಕಾ ಕಣಿವೆಯಲ್ಲಿ 30ಕ್ಕೂ ಹೆಚ್ಚು ಲೆಬನಾನಿನ ರೆಡ್ಕ್ರಾಸ್ ತುರ್ತು ವೈದ್ಯಕೀಯ ತಂಡಗಳು ಕೆಲಸ ಮಾಡುತ್ತಿವೆ. ಹೆಚ್ಚುವರಿಯಾಗಿ, ಮೌಂಟ್ ಲೆಬನಾನ್ ಮತ್ತು ಬೈರುತ್ನಲ್ಲಿ ಜನರನ್ನು ಸ್ಥಳಾಂತರಿಸಲು 50ಕ್ಕೂ ಆಂಬ್ಯುಲೆನ್ಸ್ (Ambulance) ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ.ಇಸ್ರೇಲ್ನ ಉತ್ತರ ಭಾಗದ ಜನರು ಸುರಕ್ಷಿತವಾಗಿ ಮನೆಗೆ ಮರಳಲು ಎಲ್ಲ ಕ್ರಮ ಕೈಗೊಳ್ಳಲು ಭದ್ರತಾ ವ್ಯವಸ್ಥೆ ಬಲಿಷ್ಠಗೊಳಿಸಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಪೋಸ್ಟ್ ಮಾಡಿದ್ದಾರೆ.