ಬೆಂಗಳೂರು : ಕೇಂದ್ರ ಚುನಾವಣಾ ಆಯೋಗವು ರಾಜ್ಯದ ವಿಧಾನ ಪರಿಷತ್ತಿಗೆ (Legislative council election announced) ಚುನಾವಣಾ ದಿನಾಂಕವನ್ನು ಘೋಷಿಸಿದೆ. ರಾಜ್ಯದಲ್ಲಿ ಮೂರು ವಿಧಾನಪರಿಷತ್ ಸ್ಥಾನಗಳು
ಖಾಲಿ ಉಳಿದಿವೆ. ಈ ಖಾಲಿ ಸ್ಥಾನಗಳಿಗೆ ಮತದಾನ ಪ್ರಕ್ರಿಯೆಯನ್ನು ಜೂನ್ 30 ರಂದು ನಿಗದಿಪಡಿಸಲಾಗಿದೆ. ರಾಜ್ಯದಲ್ಲಿ ಲಕ್ಷ್ಮಣ ಸವದಿ, ಆರ್ ಶಂಕರ್ ಮತ್ತು ಬಾಬುರಾವ್ ಚಿಂಚನಸೂರ್ ಅವರ ರಾಜೀನಾಮೆಯಿಂದ
ತೆರವಾದ ಸ್ಥಾನಗಳಿಗೆ ಪ್ರಸ್ತುತ ಚುನಾವಣೆ ನಡೆಯುತ್ತಿದೆ. ಈ ಮೂವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಪಕ್ಷದಿಂದ ಸ್ಪರ್ಧಿಸಿದ್ರು. ಇವರ ಪೈಕಿ ಲಕ್ಷ್ಮಣ ಸವದಿ ಮಾತ್ರ ಶಾಸಕರಾಗಿ
ಆಯ್ಕೆಯಾಗಿದ್ರು, ಆರ್.ಶಂಕರ್ ಮತ್ತು ಬಾಬುರಾವ್ ಚಿಂಚನಸೂರ್ ಸೋಲು ಕಂಡಿದ್ದಾರೆ.ಈ ಮೂರು ಸ್ಥಾನಗಳನ್ನು ಗೆಲ್ಲಲು ರಾಜ್ಯದ ಪ್ರಮುಖ ಪಕ್ಷಗಳು ಭಾರೀ ಪೈಪೋಟಿ ನಡೆಸುತ್ತಿವೆ. ಅದ್ರಲ್ಲೂ ವಿಧಾನ ಸಭಾ
ಚುನಾವಣೆಯಲ್ಲಿ ಸೋಲುಂಡ ಬಿಜೆಪಿ ಮೂರೂ ಸ್ಥಾನಗಳನ್ನು ಗೆಲ್ಲಲು (Legislative council election announced) ಸ್ಕೆಚ್ ಹಾಕಿದೆ.

ಜೂ.30ರಂದು ಮತದಾನ ಪ್ರಕ್ರಿಯೆ:
ಮತದಾನ ಪ್ರಕ್ರಿಯೆಯ ಅಧಿಸೂಚನೆಯು ಜೂನ್ 13 ರಂದು ಜಾರಿಗೆ ಬರಲಿದೆ. ಸ್ಪರ್ಧಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಜೂನ್ 20 ರೊಳಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಬೇಕು.
ಜೂನ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅರ್ಜಿ ಸಲ್ಲಿಸಿದವರು ಜೂನ್ 23 ರವರೆಗೆ ನಾಮಪತ್ರ ಹಿಂಪಡೆಯಬಹುದು.
ಇದನ್ನೂ ಓದಿ : ಯಾವುದೇ ಸಮಯದಲ್ಲಿ ಬಿಬಿಎಂಪಿ ಚುನಾವಣೆ ಆಗಬಹುದು: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಜೂನ್ 30 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಶುಕ್ರವಾರ ಜೂನ್ 30 ರ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ ಹಾಗೂ ಮತ ಎಣಿಕೆ ಪ್ರಕ್ರಿಯೆ ಸಂಜೆ 5 ಗಂಟೆಯೊಳಗೆ ನಡೆಯಲಿದೆ.
ಚುನಾವಣಾ ಪ್ರಕ್ರಿಯೆ ಜುಲೈ 4ರಂದು ಪೂರ್ಣಗೊಳ್ಳಲಿದೆ.
ಜಗದೀಶ್ ಶೆಟ್ಟರ್‌ಗೆ ಸ್ಥಾನ:
ಬಿಜೆಪಿಯಿಂದ (BJP) ಮುಖ್ಯಮಂತ್ರಿ ಪದವಿಯನ್ನೂ ಅನುಭವಿಸಿದ್ದ,ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಾಗೂ ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ (Jagadeesh Shetter) ಇತ್ತೀಚೆಗೆ ಬಿಜೆಪಿ
ಬಿಟ್ಟು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆಸಿದ್ದರು. ಆದರೆ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡು ಯಾವುದೇ ಅಧಿಕಾರವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ.
ಆದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡಿ ಅವರ ಪಾತ್ರವೂ ಮುಖ್ಯವಾಗಿದೆ.ವಿಧಾನಪರಿಷತ್ ಸ್ಥಾನಕ್ಕೆ ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಜಗದೀಶ್ ಶೆಟ್ಟರ್‌ಗೆ ಅವಕಾಶ ಸಿಗಲಿದೆ.

ಸಚಿವರ ಖಾತೆ ಹಂಚಿಕೆ ಅಧಿಕೃತ ಪಟ್ಟಿ ಇಲ್ಲಿದೆ :
- ಸಿಎಂ ಸಿದ್ದರಾಮಯ್ಯ: ಹಣಕಾಸು ಖಾತೆ,ಗುಪ್ತಚರ ಹಂಚಿಕೆಯಾದ ಖಾತೆಗಳು
- ಡಿಸಿಎಂ ಡಿಕೆ ಶಿವಕುಮಾರ್: ಸಣ್ಣ ಮತ್ತು ಬೃಹತ್ ನೀರಾವರಿ ಖಾತೆ,ಬೆಂಗಳೂರು ಅಭಿವೃದ್ಧಿ ಖಾತೆ
- ಎಂ.ಬಿ.ಪಾಟೀಲ್: ಬೃಹತ್-ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
- ಜಿ.ಪರಮೇಶ್ವರ್: ಗೃಹ ಇಲಾಖೆ ಖಾತೆ
- ಕೆ.ಹೆಚ್.ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು
- ಹೆಚ್ ಕೆ ಪಾಟೀಲ್: ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ ಇಲಾಖೆ
- ಕೆ.ಜೆ.ಜಾರ್ಜ್: ಇಂಧನ ಇಲಾಖೆ
- ರಾಮಲಿಂಗರೆಡ್ಡಿ: ಸಾರಿಗೆ ಮತ್ತು ಮುಜರಾಯಿ
- ಸತೀಶ್ ಜಾರಕಿಹೊಳಿ: ಲೋಕೋಪಯೋಗಿ ಇಲಾಖೆ
- ದಿನೇಶ್ ಗುಂಡೂರಾವ್: ಆರೋಗ್ಯ ಇಲಾಖೆ
- ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ ಇಲಾಖೆ
- ಶಿವಾನಂದ ಪಾಟೀಲ್: ಜವಳಿ ಮತ್ತು ಸಕ್ಕರೆ ಇಲಾಖೆ
- ಕೃಷ್ಣ ಬೈರೇಗೌಡ: ಕಂದಾಯ ಇಲಾಖೆ
- ಪ್ರಿಯಾಂಕ್ ಖರ್ಗೆ: ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ
- ಈಶ್ವರ್ ಖಂಡ್ರೆ: ಅರಣ್ಯ ಇಲಾಖೆ
- ಜಮೀರ್ ಅಹ್ಮದ್ ಖಾನ್: ವಸತಿ ಇಲಾಖೆ
- ಶರಣುಬಸಪ್ಪ ದರ್ಶನಾಪುರ್: ಸಣ್ಣ ಕೈಗಾರಿಕೆ
- ರಹೀ ಖಾನ್: ಪೌರಾಡಳಿತ ಮತ್ತು ಹಜ್ ಇಲಾಖೆ
- ಚಲುವರಾಯಸ್ವಾಮಿ: ಕೃಷಿ
- ಎಸ್.ಎಸ್.ಮಲ್ಲಿಕಾರ್ಜುನ: ಗಣಿ
- ಡಾ.ಶರಣುಪ್ರಕಾಶ್ ಪಾಟೀಲ್: ವೈದ್ಯಕೀಯ ಇಲಾಖೆ
- ಸಂತೋಷ ಲಾಡ್: ಕಾರ್ಮಿಕ
- ಡಿ.ಸುಧಾಕರ್: ಯೋಜನೆ
- ಆರ್.ಬಿ.ತಿಮ್ಮಾಪುರ: ಅಬಕಾರಿ
- ಶಿವರಾಜ್ ತಂಗಡಗಿ: ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಕೆ.ವೆಂಕಟೇಶ್: ಪಶುಸಂಗೋಪನೆ
- ಬಿ.ಎಸ್.ಸುರೇಶ್: ನಗರಾಭಿವೃದ್ಧಿ ಇಲಾಖೆ
- ಬಿ.ನಾಗೇಂದ್ರ: ಕ್ರೀಡೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
- ಕೆ.ಎನ್.ರಾಜಣ್ಣ: ಸಹಕಾರ ಇಲಾಖೆ
- ಮಂಕಾಳ್ ವೈದ್ಯ: ಮೀನುಗಾರಿಕೆ ಮತ್ತು ಬಂದರು ಇಲಾಖೆ
- ಲಕ್ಷ್ಮಿ ಹೆಬ್ಬಾಳ್ಕರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
- ಡಾ.ಎಂ.ಸಿ.ಸುಧಾಕರ್: ಉನ್ನತ ಶಿಕ್ಷಣ ಇಲಾಖೆ
- ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
- ಎನ್.ಎಸ್.ಬೋಸರಾಜ್: ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ
ರಶ್ಮಿತಾ ಅನೀಶ್