Bengaluru : ಸಿಲಿಕಾನ್ ಸಿಟಿಯ (Leopard Fear In Bengaluru) ಹಲವು ಕಡೆ ಚಿರತೆ ಹಾವಳಿ ಜೋರಾಗಿದೆ, ಅದಲ್ಲದೆ ಕೆಲವರ ಮೇಲೆ ಚಿರತೆ ದಾಳಿ ಮಾಡಿದೆ.
ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಸೇರಿದಂತೆ ಅಕ್ಕಪಕ್ಕ ಗ್ರಾಮದ ಜನರು (Leopard Fear In Bengaluru) ಕೆಲ ದಿನಗಳಿಂದ ಮನೆಯಿಂದ ಹೊರ ಬರಲು ಭಯ ಪಡುವಂತ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನ ಹಲವೆಡೆ ಚಿರತೆ ಕಾಣಿಸಿಕೊಂಡಿದ್ದು, ಅಲ್ಲಿನ ಜನರ ಪ್ರಕಾರ ನಾಲ್ಕು ಚಿರತೆಗಳನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಬಿಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.
ಈಗಾಗಲೇ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದು ಜನರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಯಾವ ಸಮಯದಲ್ಲಿ ಚಿರತೆ ದಾಳಿ ಮಾಡುತ್ತದೆ ಎಂಬ ಭಯದಲ್ಲಿ ಬೆಂಗಳೂರಿನ ಗ್ರಾಮಂತರ ಜನರು ಬದುಕುತ್ತಿರುವುದು ಕಂಡು ಬರುತ್ತಿದೆ.
ಸಿಸಿ ಕ್ಯಾಮರದಲ್ಲಿ ಚಿರತೆಯ ದೃಶ್ಯಾವಳಿ ರೆಕಾರ್ಡ್ ಆಗಿದ್ದು, ಜಿಂಕೆಯನ್ನು ಕೂಡ ಈ ಚಿರತೆಗಳು ಅರ್ಧ ತಿಂದು ಹಾಕಿದೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ.
ನಾಲ್ಕು ಚಿರತೆಗಳು ಬೆಂಗಳೂರಿನತ್ತ ಹೆಜ್ಜೆ ಇಟ್ಟಿದ್ದು, ಕೆಂಗೇರಿಯ ಉತ್ತರಹಳ್ಳಿಯಲ್ಲಿ ಚಿರತೆ ಸೆರೆಗೆ ಈಗಾಗಲೇ ಬೋನ್ ಗಳನ್ನ ಅರಣ್ಯಾಧಿಕಾರಿಗಳು ಇಟ್ಟಿದ್ದಾರೆ. ಸಿಟಿ ಹೊರವಲಯದಲ್ಲಿ ಇದ್ದರು ಹಗಲು ಹೊತ್ತಿನಲ್ಲೆ ಹೊರಗಡೆ ಓಡಾಡಲು ಜನರು ಹೆದರುತ್ತಿದ್ದಾರೆ.
ಈಗಾಗಲೆ ಹೆಜ್ಜೆ ಗುರುತು ಮೂಲಕ ಚಿರತೆ ಪತ್ತೆಗೆ ಕಾರ್ಯಚರಣೆ ಶುರುವಾಗಿದೆ. ನಡು ರಸ್ತೆಗಳಲ್ಲಿ ಚಿರತೆಗಳ ಹಾವಳಿ ಬಹಳ ಜೋರಾಗಿಯೆ ನಡೆದಿದೆ.
ಇದನ್ನೂ ಓದಿ : https://vijayatimes.com/mangaluru-police-got-fined/