ಹೆದ್ದಾರಿಯಲ್ಲಿ ಕಾರಿನ ಬಾನೆಟ್‍ಗೆ ಸಿಲುಕಿದ ಚಿರತೆ ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಹೆದ್ದಾರಿಯಲ್ಲಿ(National Highway) ಚಿರತೆ(Leopard) ರಸ್ತೆ ದಾಟುವಾಗ ಕಾರಿನ ವೇಗಕ್ಕೆ ಸಿಲುಕಿಕೊಂಡಿದೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಕಾರಿನ ಬಾನೆಟ್‌ನಡಿ ಸಿಲುಕಿಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.


ಘಟನೆ ನಡೆದ ಸ್ಥಳ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ(Social Media) ಭಾರಿ ವೈರಲ್(Viral)ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ(Bollywood Actress) ರವೀನಾ ಟಂಡನ್(Raveena Tandon) ಕೂಡ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇದು ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ನಂತರ ಚಿರತೆ ಕಾರಿನ ಬಾನೆಟ್ ಅಡಿ ಸಿಲುಕಿಕೊಂಡು ನರಳಾಡಿದೆ, ಕಾರಿನ ಚಾಲಕ ಕಾರನ್ನು ಹಿಂಬದಿ ಚಲಿಸಿದಾಗ ಬಾನೆಟ್ ನಿಂದ ಬಿಡಿಸಿಕೊಂಡ ಚಿರತೆ ಸ್ಥಳದಿಂದ ಕೂಡಲೇ ಓಡಿ ಹೋಗಿದೆ.

ಈ ಚಿರತೆಗಾಗಿ ಪ್ರಾರ್ಥನೆಗಳು, ಅದು ಬದುಕುಳಿಯುತ್ತದೆ ಎಂದು ಭಾವಿಸುತ್ತೇನೆ, ಕಾರಿನ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದರೂ, ಬಿಡಿಸಿಕೊಂಡು ಕಾಡಿಗೆ ಓಡಿಹೋಗಿದೆ ಎಂದು ನಟಿ ರವೀನಾ ಟಂಡನ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ರೀತಿ ಶೀರ್ಷಿಕೆ ಕೊಟ್ಟು ವೀಡಿಯೋ ಹಂಚಿಕೊಂಡಿದ್ದಾರೆ. ವನ್ಯಜೀವಿ(Wildlife) ಕಾರ್ಯಕರ್ತರೊಬ್ಬರು ಈ ವೀಡಿಯೋ ಹಂಚಿಕೊಂಡ ಮತ್ತೊಂದು ಕ್ಲಿಪ್‌ನಲ್ಲಿ, ಚಿರತೆ ವಾಹನದ ಬಾನೆಟ್ ಅಡಿಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಕಾಡು ಪ್ರಾಣಿಯನ್ನು ಉಳಿಸಲು ಚಾಲಕ ಕಾರನ್ನು ಹಿಂಬದಿ ಚಲಿಸಿದಾಗ,

ಚಿರತೆ ತನ್ನನ್ನು ಬಿಡಿಸಿಕೊಳ್ಳಲು ಪರದಾಡಿದೆ, ಹಿಂದಕ್ಕೆ ದಾಳಿ ಮಾಡುವ ಮೊದಲು ವಾಹನದಿಂದ ಒಂದು ಸೆಕೆಂಡ್ ಹಿಂದೆ-ಮುಂದೆ ಎಳೆದಾಡುತ್ತಿರುವ ದೃಶ್ಯವನ್ನು ವೀಡಿಯೊದಲ್ಲಿ ಕಾಣಬಹುದು. ಸ್ವಲ್ಪ ಸಮಯದ ನಂತರ, ಗಾಯಗೊಂಡ ಚಿರತೆ ರಕ್ಷಣೆ ಸಿಕ್ಕ ಬೆನ್ನಲ್ಲೇ ಸ್ಥಳದಿಂದ ಓಡಿ ಕಾಡಿಗೆ ಮರಳಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಹಿನ್ನಲೆ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇಂಟರ್ನೆಟ್ ಅನ್ನು ಬಿರುಗಾಳಿಯಿಂದ ತೆಗೆದುಕೊಂಡಿದೆ. ನೆಟ್ಟಿಗರೊಬ್ಬರು “ಈ ವೀಡಿಯೋವನ್ನು ವೀಕ್ಷಿಸಲು ನನ್ನಿಂದ ಸಾಧ್ಯವಾಗಲಿಲ್ಲ.

ನನ್ನ ಬಳಿ ಪದಗಳಿಲ್ಲ. ಇದು ಒಂದು ಕ್ರಿಮಿನಲ್ ಆಕ್ಟ್ ಎಂದು ಬರದುಕೊಂಡಿದ್ದಾರೆ. ಮತ್ತೊಬ್ಬರು, ಈ ರೀತಿ ಅನೇಕ ಘಟನೆಗಳು ನಡೆಯುತ್ತಲೇ ಇವೆ. ವನ್ಯಜೀವಿ ಪ್ರಾಣಿಗಳಿಗೆ ತಮ್ಮದೇ ಜಾಗದಲ್ಲಿ ವಾಹನಗಳು ಸಂಚರಿಸಲು ಹೆದ್ದಾರಿಗಳನ್ನು ಸೃಷ್ಟಿಸಿರುವುದು ಪ್ರಾಣಿಗಳ ಸಂಚಾರಕ್ಕೆ ಅಡ್ಡಿಪಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.