Visit Channel

ಪ್ರತಿದಿನ ನಿದ್ದೆ ಬಿಟ್ರೆ, ಡಯಾಬಿಟಿಸ್ ಬರಬಹುದು ಎಚ್ಚರಿಕೆ..

14-1387015456-diebetes-18-1489836336

ಜೀವನದ ಅತ್ಯಂತ ಪ್ರಮುಖ ದಿನಚರಿ ಅಂದ್ರೆ ಅದು ನಿದ್ದೆ. ಸರಿಯಾದ ಸಮಯಕ್ಕೆ ಮಲಗುವುದು, ಸರಿಯಾದ ಸಮಯಕ್ಕೆ ಏಳುವುದು ಎಲ್ಲವೂ ಆರೋಗ್ಯಕರ ಜೀವನಶೈಲಿಯ ಪ್ರತೀಕವಾಗಿದೆ. ಇದರಲ್ಲಿ ಸ್ವಲ್ಪ ಆಚೆ-ಇಚೆಯಾದರೂ ನಿಮ್ಮಲ್ಲಿ ಅನಾರೋಗ್ಯ ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಿದ್ದೆ ಕಡಿಮೆ ಮಾಡುವವರೇ ಹೆಚ್ಚು. ಕೆಲವರು ದುಡಿಯುದರಲ್ಲಿ ಮಗ್ನರಾಗಿದ್ದರೆ, ಇನ್ನೂ ಕೆಲವರು ತಮ್ಮ ಮೊಬೈಲ್ ಹಿಡಿದು ತಡರಾತ್ರಿಯವರೆಗೂ ಚಾಟಿಂಗ್‌ನಲ್ಲೇ ಮುಳುಗಿಹೋಗಿರುತ್ತಾರೆ. ಯಾವ್ಯಾವುದೋ ಸಮಯಕ್ಕೆ ಏಳುವುದು, ಇನ್ಯಾವುದೋ ಸಮಯಕ್ಕೆ ಮಲಗುವಂತಹ ರೂಢಿಯನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದು ತಪ್ಪು. ಈ ತಪ್ಪು ನಿಮ್ಮನ್ನು ಮುಂದೆ ಅನಾರೋಗ್ಯ ಕಾಡುವಂತೆ ಮಾಡುತ್ತದೆ.

ಉತ್ತಮ ನಿದ್ರೆ, ವ್ಯಾಯಾಮದಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದರೂ, ಜನರು ಈ ಪ್ರಮುಖ ಅಂಶವನ್ನು ಕಡೆಗಣಿಸುತ್ತಾರೆ. ಇದರಿಂದ ನಿದ್ರಾಹೀನತೆ ಮತ್ತು ಇತರ ನಿದ್ರೆಯ ಕಾಯಿಲೆಗಳು ಎಂದಿಗಿಂತಲೂ ಹೆಚ್ಚು ಸಾಮಾನ್ಯವಾಗಿದೆ. ನಿದ್ದೆಯ ಕಡೆಗಣನೆ ನಿಮ್ಮ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುನದನ್ನು ಅರಿಯಲು ನೀವು ಈ ಲೇಖನವನ್ನು ನೀವು ಓದಲೇಬೇಕು.

ಅಸಮರ್ಪಕ ನಿದ್ದೆಯಿಂದ ಉಂಟಾಗುವ ಸಮಸ್ಯೆಗಳು ಈ ಕೆಳಗಿನಂತಿವೆ.

ಹೃದಯ ಸಂಬಂಧಿ ಸಮಸ್ಯೆಗಳು:
ಅಸಮರ್ಪಕ ನಿದ್ರೆ ನಿಮ್ಮ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅಪಾಯವನ್ನು ಉಂಟುಮಾಡುವ ಸಂಭವವನ್ನು ಹೆಚ್ಚಿಸುತ್ತದೆ. ಹಾಗಂತ ಇಡೀ ಹೊತ್ತು ನಿದ್ರೆ ಮಾಡಿದರೂ ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದೇ. ಅತೀ ಹೆಚ್ಚು ನಿದ್ರೆ ಮಾಡುವುದು ನಿಮಗೆ ಹಾನಿಕಾರಕವಾಗಿದೆ. ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ನಿದ್ರೆಗಾಗಿ ಉತ್ತಮ ವೇಳಾಪಟ್ಟಿಯನ್ನು ಪಾಲಿಸುವುದು ಅತ್ಯಗತ್ಯ.

ತೂಕ ಗಳಿಕೆ:
ತೂಕ ಇಳಿಸುವ ನಿಮ್ಮ ಕಾರ್ಯದಲ್ಲಿ ಬೇರೆಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಿ, ಅಗತ್ಯ ನಿದ್ರೆ ಪಡೆಯದೇ ಇದ್ದರೆ, ನಿಮ್ಮ ಎಲ್ಲಾ ಕಾರ್ಯಗಳು ವ್ಯರ್ಥವಾಗುತ್ತವೆ. ಇದರಿಂದ ಯಾವುದೇ ಫಲಿತಾಂಶಗಳು ದೊರೆಯುವುದಿಲ್ಲ. ನಿದ್ರೆಯ ಕೊರತೆಯಿಂದಾಗಿ ನೀವು ಸಾಮಾನ್ಯವಾಗಿ ಹೆಚ್ಚು ತಿನ್ನಬಹುದು ಇದರಿಂದ ತೂಕ ಹೆಚ್ಚಾಗಬಹುದು.

ಮುಟ್ಟಿನ ಸೆಳೆತ:
ಹಾರ್ಮೋನುಗಳ ಅಸಮತೋಲನವು ಅಸಮರ್ಪಕ ನಿದ್ದೆಯೊಂದಿಗೆ ಸಂಬಂಧ ಹೊಂದಿದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಇದು ಚಯಾಪಚಯ ಕ್ರಿಯೆ ಮತ್ತು ಅಂತಃಸ್ರಾವಕ ಬದಲಾವಣೆಗಳಿಗೆ ಕಾರಣವಾಗಬಹುದು. ಇದು ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮ ತಿಂಗಳ ಸಮಯದಲ್ಲಿ ಸಾಕಷ್ಟು ನೋವು ಹಾಗೂ ಸೆಳೆತಗಳಿಗೆ ಕಾರಣವಾಗುತ್ತದೆ. ನಿಮ್ಮ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ.

ಆಯಾಸ:
ನೀವು ಸಾಕಷ್ಟು ನಿದ್ರೆ ಮಾಡದಿದ್ದಾಗ ನಿಮ್ಮಲ್ಲಿ ಆಲಸ್ಯವು ಅಥವಾ ಜಡತನ ಶುರುವಾಗುತ್ತದೆ. ಇದರಿಂದ ನೀವು ಎಲ್ಲಾ ಸಮಯದಲ್ಲೂ ದಣಿದಿರುವ ಭಾವನೆ ಮೂಡುತ್ತದೆ. ಈ ಭಾವನೆ ಮೂಡಿದರೆ ನಿಮ್ಮ ದೇಹದ ಕಾರ್ಯಗಳು ಸರಿಯಾಗಿ ಕಾರ್ಯನಿರ್ವಹಿಸದೇ ಹೋಗಬಹುದು. ನೀವು ಸರಿಯಾಗಿ ನಿದ್ದೆ ಮಾಡಿದರೆ ಮರುದಿನ ಬೆಳಿಗ್ಗೆ ನೀವು ಫ್ರೆಶ್ ಮತ್ತು ಶಕ್ತಿಯುತ ಭಾವನೆಯನ್ನು ಅನುಭವಿಸುತ್ತೀರಿ.

ಮಧುಮೇಹ:
ನಿಮಗೆ ಸಾಕಷ್ಟು ನಿದ್ರೆ ಬರದಿದ್ದರೆ ಮಧುಮೇಹ ಬರುವ ಅಪಾಯವೂ ಹೆಚ್ಚಬಹುದು. ನಿದ್ರೆಯ ಕೊರತೆಯಿಂದ ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಿದೆ ಎಂಬುದು ಹಲವಾರು ಸಂಶೋಧನಾ ಅಧ್ಯಯನಗಳು ತೋರಿಸಿವೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.