Visit Channel

ಹಿಜಾಬ್‌ ಅನ್ನೇ ಸಮವಸ್ತ್ರವನ್ನಾಗಿ ಮಾಡಲಿ ಸಿ.ಟಿ. ರವಿ!

ct ravi

ಹಿಜಾಬ್‌ ವಿವಾದ ನಿನ್ನೆಯಿಂದ ಗಲಭೆ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಇಂದಿನಿಂದ 3 ದಿನಗಳ ಕಾಲ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಷ್ಟು ವರ್ಷ ಇಲ್ಲದ ವಿವಾದ ಈಗೇಕೆ ಬಂತು. ಹಿಜಾಬ್ ಅನ್ನೇ ಶಾಲಾ-ಕಾಲೇಜುಗಳಲ್ಲಿ ಯೂನಿಫಾರ್ಮ್ ಮಾಡಿ ಎಂದು ಹಿಜಾಬ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಜಾಬ್ ವಿಷಯದಲ್ಲಿ ಬಹುಸಂಖ್ಯಾತರು ಸಮಾನತೆ ಇರಲಿ ಎಂದು ಹೇಳುತ್ತಿದ್ದಾರೆ. ಅಲ್ಪಸಂಖ್ಯಾತರು ನಮ್ಮದೇ ಬೇರೆ, ನಮ್ಮದೇ ನಡೀಬೇಕು ಎಂದು ಹೇಳುತ್ತಿದ್ದಾರೆ.

ct ravi

ಜಗತ್ತಿನಲ್ಲಿ ಎಲ್ಲೂ ನಡೆಯಲು ಸಾಧ್ಯವಾಗದ್ದು ಭಾರತದಲ್ಲಿ ಮಾತ್ರ ನಡೀತಿದೆ. ಅದಕೊಸ್ಕರನೇ ಶಾಲೆಯಲ್ಲಿ ಯೂನಿಫಾರ್ಮ್ ಇರುವುದು. ಅಲ್ಲಿ ನಾನು ಬೇರೆ ಎಂದರೆ ಅಲ್ಲಿಂದಲೇ ಪ್ರತ್ಯೇಕತೆ ಹುಟ್ಟಿಕೊಳ್ಳುತ್ತದೆ. ನಾನೇ ಬೇರೆ ನೀನೇ ಬೇರೆ ಎನ್ನುವುದು ಜಾತ್ಯಾತೀತತೆ ಅಲ್ಲ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರ ನಾನೇ ಬೇರೇ ಎನ್ನುವ ಮನಸ್ಥಿತಿ ಅಪಾಯಕಾರಿ. ಬಹಳ ಸಂಕಷ್ಟವನ್ನು ಅನುಭವಿಸಿರುವ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಸಂಕಷ್ಟ ಅನುಭವಿಸಿ ಪ್ರತೀಕಾರ ಮಾಡದಿರುವ ರಾಷ್ಟ್ರ ಕೂಡ ಭಾರತ. ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುವ ಘಟನೆಗಳು ಜಗತ್ತಿನೆಲ್ಲೆಡೆ ಕಂಡುಬರುತ್ತದೆ. ಜಗತ್ತಿನಾದ್ಯಂತ ಅಲ್ಪಸಂಖ್ಯಾತರು ನಮಗೆ ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಾರೆ. ಆದರೆ, ದುರ್ದೈವ, ನಮ್ಮ ದೇಶದಲ್ಲಿ ಬಹುಸಂಖ್ಯಾತರು ಸಮಾನ ಹಕ್ಕು ಕೊಡಿ ಎಂದು ಹೋರಾಟ ಮಾಡುತ್ತಿದ್ದಾರೆ.

hijab


ಹಿಜಾಬ್‌ ಸಂಘರ್ಷ : ಹಿಜಾಬ್ ಸಂಘರ್ಷಕ್ಕೆ ಕರ್ನಾಟಕದ 18 ಜಿಲ್ಲೆಗಳ 54 ಕಾಲೇಜುಗಳಲ್ಲಿ ನಡೆಯುತ್ತಿದ್ದು, 4 ಜಿಲ್ಲೆಗಳ 6 ಕಾಲೇಜುಗಳಲ್ಲಿ ಘರ್ಷಣೆ ಜೊತೆಗೆ ಕಲ್ಲುತೂರಾಟವಾದ ಬಗ್ಗೆ ವರದಿಯಾಗಿದೆ.
ರಾಜ್ಯಾದ್ಯಂತ 12 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಬಸ್ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದೆ. ಬಾಗಲಕೋಟೆ, ದಾವಣಗೆರೆಯ ಹರಿಹರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಬನಹಟ್ಟಿ ಕಾಲೇಜಿನಲ್ಲಿ ಕಲ್ಲು ತೂರಾಟದಿಂದ ಉಪನ್ಯಾಸಕರಿಗೆ ಗಾಯವಾಗಿದೆ. ಬಾಗಲಕೋಟೆಯ ಬನಹಟ್ಟಿ ಪಿಯು ಕಾಲೇಜು ಬಳಿ ಲಾಠಿ ಚಾರ್ಜ್ ಮಾಡಲಾಗಿದ್ದು, ದಾವಣಗೆರೆಯ ಹರಿಹರದಲ್ಲಿ ಅಶ್ರುವಾಯು ಸಿಡಿತ.

ದಾವಣಗೆರೆ ಡಿಗ್ರಿ ಕಾಲೇಜು ಬಳಿ ನಿನ್ನೆ ಲಾಠಿಚಾರ್ಜ್ ಮಾಡಲಾಗಿದ್ದು, ಹರಿಹರದ ಕಾಲೇಜು ಬಳಿ ಪೋಷಕರಿಂದಲೂ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಶಿವಮೊಗ್ಗದ ಶಿಕಾರಿಪುರ, ಸಾಗರದಲ್ಲೂ ಪ್ರತಿಭಟನೆ ನಡೆಸಿದ್ದು, ಶಿವಮೊಗ್ಗದಲ್ಲಿ ಚಾಕು ಇಟ್ಟುಕೊಂಡು ಓಡಾಡ್ತಿದ್ದ ವ್ಯಕ್ತಿ ಬಂಧಿಸಲಾಗಿದ್ದು, ಸಾಗರದಲ್ಲಿ ಹಿಂಸಾಚಾರಕ್ಕೆ 10 ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.