• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಇಪಿಎಫ್ ಹಣದಿಂದ ಎಲ್‌ಐಸಿ ಪ್ರೀಮಿಯಮ್ ಪಾವತಿ: ಉದ್ಯೋಗಿಗಳಿಗೆ ದೊಡ್ಡ ಹಣಕಾಸು ರಿಲೀಫ್

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಇಪಿಎಫ್ ಹಣದಿಂದ ಎಲ್‌ಐಸಿ ಪ್ರೀಮಿಯಮ್ ಪಾವತಿ: ಉದ್ಯೋಗಿಗಳಿಗೆ ದೊಡ್ಡ ಹಣಕಾಸು ರಿಲೀಫ್
0
SHARES
9
VIEWS
Share on FacebookShare on Twitter
  • ಸಾಲ ಮಾಡದೇ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟುವ (LIC payment from EPF money) ಅವಕಾಶ; EPFO ನೀಡಿರುವ ಹೊಸ ಸೌಲಭ್ಯದ ಸಂಪೂರ್ಣ ವಿವರಗಳು
  • ಸಕ್ರಿಯ EPF ಖಾತೆ ಇದ್ದರೆ ಸಾಕು; ಫಾರ್ಮ್-14 ಮೂಲಕ ಪ್ರೀಮಿಯಮ್ ಪಾವತಿ ಸುಲಭ
  • EPFO ಪ್ಯಾರಾಗ್ರಾಫ್ 68 ಅಡಿಯಲ್ಲಿ ಲಭ್ಯವಿರುವ ಸೌಲಭ್ಯದಿಂದ ಸಾಲದ ಅಗತ್ಯವಿಲ್ಲ

ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಲ್ಲಿ ಇರುವ ಹಣವನ್ನು (LIC payment from EPF money) ಈಗ ಎಲ್‌ಐಸಿ (LIC) ಪಾಲಿಸಿಯ ಪ್ರೀಮಿಯಮ್ ಪಾವತಿಗೆ ಬಳಸಿಕೊಳ್ಳಬಹುದು.

ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಸಾಲ ಮಾಡದೇ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಈ ಸೌಲಭ್ಯ ಉದ್ಯೋಗಿಗಳಿಗೆ ದೊಡ್ಡ ಸಹಾಯವಾಗುತ್ತಿದೆ.

ಉದ್ಯೋಗಿಗಳ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ EPFO ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

LIC payment from EPF money

ಸಕ್ರಿಯ EPF ಖಾತೆ ಹೊಂದಿರುವವರು, ತಮ್ಮದೇ ಹೆಸರಿನ ಎಲ್‌ಐಸಿ (LIC payment from EPF money) ಪಾಲಿಸಿಗೆ ಈ ಸೌಲಭ್ಯವನ್ನು ಬಳಸಬಹುದು.

EPFO ಯ EPF ಸ್ಕೀಮ್‌ನ ಪ್ಯಾರಾಗ್ರಾಫ್ (Paragraph) 68ರ ಅಡಿಯಲ್ಲಿ ಈ ಅವಕಾಶ ಲಭ್ಯವಿದೆ. ಇದರ ಮೂಲಕ ಒಮ್ಮೆ ಮಾತ್ರ ಪ್ರೀಮಿಯಮ್ ಪಾವತಿಸುವುದು ಮಾತ್ರವಲ್ಲದೆ, ಇಡೀ ಪಾಲಿಸಿ ಅವಧಿಗೆ ಸ್ವಯಂಚಾಲಿತವಾಗಿ EPF ಖಾತೆಯಿಂದ ಪ್ರೀಮಿಯಮ್ (Premium) ಹಣ ಕಡಿತವಾಗುವ ವ್ಯವಸ್ಥೆಯನ್ನೂ ಮಾಡಿಕೊಳ್ಳಬಹುದು.

ವರ್ಷಕ್ಕೆ ದೊಡ್ಡ ಮೊತ್ತದ ಪ್ರೀಮಿಯಮ್ ಪಾವತಿಸಬೇಕಾದ ಪಾಲಿಸಿಗಳಿಗೆ ಇದು ಹೆಚ್ಚು ಅನುಕೂಲಕರವಾಗಿದೆ. ಪ್ರೀಮಿಯಮ್ ಮಿಸ್ ಆಗುವ ಆತಂಕವೂ ಇದರಿಂದ ಕಡಿಮೆಯಾಗುತ್ತದೆ.

ಆದರೆ EPF ಹಣದಿಂದ LIC ಪ್ರೀಮಿಯಮ್ ಕಟ್ಟಲು ಕೆಲವು ನಿಯಮಗಳು ಅನ್ವಯಿಸುತ್ತವೆ. ಉದ್ಯೋಗಿಯ ಬಳಿ ಸಕ್ರಿಯ EPF ಖಾತೆ ಇರಬೇಕು ಮತ್ತು ಖಾತೆಯಲ್ಲಿ ಕನಿಷ್ಠ ಎರಡು ತಿಂಗಳ ವೇತನದಷ್ಟು ಬ್ಯಾಲನ್ಸ್ ಇರಬೇಕು. LIC ಪಾಲಿಸಿ ಉದ್ಯೋಗಿಯ ಸ್ವಂತ ಹೆಸರಿನಲ್ಲೇ ಇರಬೇಕು.

ಈ ಸೌಲಭ್ಯ ಕೇವಲ LIC ಪಾಲಿಸಿಗಳಿಗೆ ಮಾತ್ರ ಅನ್ವಯವಾಗುತ್ತದೆ; ಖಾಸಗಿ ಇನ್ಷೂರೆನ್ಸ್ ಕಂಪನಿಗಳ ಪಾಲಿಸಿಗಳಿಗೆ ಇದು ಲಭ್ಯವಿಲ್ಲ.

EPF ಖಾತೆಯಿಂದ LIC ಪ್ರೀಮಿಯಮ್ ಪಾವತಿಸಲು EPFOಗೆ ಫಾರ್ಮ್-14 ಸಲ್ಲಿಸಬೇಕು. EPFO ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ UAN ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ, KYC ವಿಭಾಗದಲ್ಲಿ LIC ಪಾಲಿಸಿಯನ್ನು ಆಯ್ಕೆ ಮಾಡಬೇಕು.

ನಂತರ ಪಾಲಿಸಿ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನೀಡಿ ವೆರಿಫಿಕೇಶನ್ ಪೂರ್ಣಗೊಳಿಸಬೇಕು. ಪಾಲಿಸಿ ಯಶಸ್ವಿಯಾಗಿ EPF ಖಾತೆಗೆ ಲಿಂಕ್ ಆದ ಬಳಿಕ, ನಿಗದಿತ ದಿನಾಂಕಕ್ಕೆ ಪ್ರೀಮಿಯಮ್ ಹಣ ಸ್ವಯಂ ಪಾವತಿಯಾಗುತ್ತದೆ.

EPF ಒಂದು ನಿವೃತ್ತಿ ಉಳಿತಾಯ ಯೋಜನೆಯಾಗಿರುವುದರಿಂದ, ಅದರಲ್ಲಿರುವ ಹಣವನ್ನು ಅಗತ್ಯವಿಲ್ಲದೆ ಬಳಸುವುದು ಸರಿಯಲ್ಲ.

ಉತ್ತಮ ಬಡ್ಡಿ ದೊರೆಯುವ ಕಾರಣ EPF ಹಣವನ್ನು ನಿವೃತ್ತಿವರೆಗೆ ಉಳಿಸಿಕೊಳ್ಳುವುದು ಜಾಣತನ. ಹೀಗಾಗಿ, ತೀವ್ರ ಹಣಕಾಸಿನ ತೊಂದರೆ ಅಥವಾ ಅನಿವಾರ್ಯ ಪರಿಸ್ಥಿತಿ ಇದ್ದಾಗ ಮಾತ್ರ LIC ಪ್ರೀಮಿಯಮ್ ಪಾವತಿಗೆ EPF ಹಣ ಬಳಸುವುದು ಒಳಿತು ಎಂದು ತಜ್ಞರು ಸಲಹೆ ನೀಡುತ್ತಾರೆ.

Tags: epfepfoLICmoneypremium

Related News

ಮ್ಯೂಚುವಲ್ ಫಂಡ್ : ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಮ್ಯೂಚುವಲ್ ಫಂಡ್ : ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಯಾವುದು ಬೆಸ್ಟ್

January 21, 2026
ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ
ಪ್ರಮುಖ ಸುದ್ದಿ

ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ

January 21, 2026
ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.