- 300ಕ್ಕೂ ಹೆಚ್ಚು ಹೋಟೆಲ್, ಪಬ್‌ಗಳಿಗೆ ನೋಟಿಸ್
- ಮೊದಲು ಎಚ್ಚರಿಕೆ – ನಂತರ ಭಾರೀ ದಂಡ (licenses cancelled if there is no smoking zone)
- ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಕಠಿಣ ಕ್ರಮ
ಬೆಂಗಳೂರು: ಸಿಲಿಕಾನ್ ಸಿಟಿಯ ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗಂಭೀರ ಎಚ್ಚರಿಕೆ ನೀಡಿದೆ.
ಸ್ಮೋಕಿಂಗ್ ಝೋನ್ (Smoking Zone) ನಿರ್ಮಿಸದೇ ನಿಯಮ ಉಲ್ಲಂಘನೆ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸುಮಾರು ಎರಡು ವಾರಗಳ ಹಿಂದೆ, ನಗರದಲ್ಲಿನ 300ಕ್ಕೂ ಹೆಚ್ಚು ಹೋಟೆಲ್, ಪಬ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು.
ಪ್ರತಿಯೊಂದು ವಾಣಿಜ್ಯ ಆಹಾರ ಕೇಂದ್ರ(Commercial Food Centre) ಹಾಗೂ ಮನರಂಜನಾ ಸ್ಥಳದಲ್ಲಿ(Entertainment venue) ಪ್ರತ್ಯೇಕ ಸ್ಮೋಕಿಂಗ್ ಏರಿಯಾ(Smoking area) ಇರಲೇಬೇಕು
ಎಂದು ಸರ್ಕಾರ ಈಗಾಗಲೇ ಕಾನೂನು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಹಲವಾರು ಹೋಟೆಲ್‌ಗಳು ಹಾಗೂ ಪಬ್‌ಗಳು ಈ ನಿಯಮ ಪಾಲನೆಗೆ ವಿಫಲವಾಗಿದ್ದವು.

ನೋಟಿಸ್ ನೀಡಿದರೂ ಕೂಡಾ ಸಂಸ್ಥೆಗಳು ತಕ್ಷಣ ಕ್ರಮ ಕೈಗೊಂಡಿಲ್ಲ ಎಂಬುದು ಪಾಲಿಕೆ ಅಧಿಕಾರಿಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಬಿಬಿಎಂಪಿ ಮತ್ತಷ್ಟು ಗಂಭೀರ ಕ್ರಮ ಕೈಗೊಳ್ಳಲು ಸಜ್ಜಾಗಿದೆ.
ನಿಯಮ ಉಲ್ಲಂಘನೆ ಮಾಡಿದ ಸಂಸ್ಥೆಗಳಿಗೆ ಮೊದಲಿಗೆ ನೋಟಿಸ್ ನೀಡಲಾಗುತ್ತದೆ. ಆದರೂ ಕೂಡಾ ಸರಿಪಡಿಸದಿದ್ದರೆ ಕಾನೂನು ಪ್ರಕಾರ ದಂಡ ವಿಧಿಸಲಾಗುತ್ತದೆ.
ಆದರೆ, ದಂಡ ಪಾವತಿಸಿದರೂ ಕ್ರಮ ಕೈಗೊಳ್ಳದವರ ವಿರುದ್ಧ ಅಂತಿಮ ಹಂತದಲ್ಲಿ ಪರವಾನಗಿ ರದ್ದು ಮಾಡುವ ಬಿಗಿ ಕ್ರಮ ಪಾಲಿಕೆ ಮುಂದಿಟ್ಟಿದೆ.ಬಿಬಿಎಂಪಿ ಮೂಲಗಳ ಪ್ರಕಾರ,
ಕೆಲ ಸಂಸ್ಥೆಗಳು “ಸ್ಮೋಕಿಂಗ್ ಝೋನ್ ನಿರ್ಮಿಸಲು ನಾವು ಸ್ಥಳಾವಕಾಶ ಹೊಂದಿಲ್ಲ” ಎಂಬ ನೆಪ ತಂದುಕೊಳ್ಳುತ್ತಿದ್ದರೂ, ನಿಯಮದ ಪ್ರಕಾರ ಕನಿಷ್ಠ ಒಂದು ಸ್ಮೋಕಿಂಗ್ ಏರಿಯಾ ಕಡ್ಡಾಯವಾಗಿರಬೇಕು.
ಇಲ್ಲದಿದ್ದರೆ ಸಂಸ್ಥೆ ಮುಂದುವರಿಯಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಬಿಬಿಎಂಪಿ ಈಗಾಗಲೇ ಮೊದಲ ಹಂತದಲ್ಲಿ ನೋಟಿಸ್ ನೀಡಿದ ಸ್ಥಳಗಳನ್ನು ಮತ್ತೆ ಪರಿಶೀಲನೆ ಮಾಡಲು ಸಜ್ಜಾಗಿದೆ.
ಮುಂದಿನ ವಾರದಿಂದ ಅಧಿಕಾರಿಗಳು ನಗರದೆಲ್ಲೆಡೆ ದಾಳಿ ನಡೆಸಲಿದ್ದಾರೆ. ನೋಟಿಸ್ ಪಡೆದಿದ್ದರೂ ಕ್ರಮ ಕೈಗೊಳ್ಳದ ಸಂಸ್ಥೆಗಳನ್ನು ನೇರವಾಗಿ ಬ್ಲ್ಯಾಕ್ಲಿಸ್ಟ್ ಮಾಡಿ, ಅವುಗಳ ಪರವಾನಗಿ ರದ್ದುಪಡಿಸುವ(Cancellation of licence) ಕ್ರಮ ಕೈಗೊಳ್ಳಲಾಗುತ್ತದೆ.
ಸಾರ್ವಜನಿಕ ಆರೋಗ್ಯ(Public health) ಕಾಪಾಡುವುದು ಈ ಕ್ರಮದ ಮುಖ್ಯ ಉದ್ದೇಶ. ಮುಚ್ಚಿದ ಹಾಲ್‌ಗಳಲ್ಲಿ ಅಥವಾ ಸಾಮಾನ್ಯ ಊಟದ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಅನೇಕ ನಿರಪರಾಧ ಗ್ರಾಹಕರಿಗೆ ಆರೋಗ್ಯ ಹಾನಿ(Health damage) ಉಂಟಾಗುತ್ತದೆ.
ಪ್ಯಾಸಿವ್ ಸ್ಮೋಕಿಂಗ್(Passive smoking) ಪರಿಣಾಮದಿಂದ ಉಸಿರಾಟದ ತೊಂದರೆ, ಹೃದ್ರೋಗ, ಕ್ಯಾನ್ಸರ್ ಮುಂತಾದವುಗಳ ಅಪಾಯ ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪಾಲಿಕೆ ಈ ಕ್ರಮದ ಮೂಲಕ ಎಲ್ಲಾ ಹೋಟೆಲ್ ಮತ್ತು ಪಬ್ ಮಾಲೀಕರಿಗೆ ಸ್ಪಷ್ಟ ಸಂದೇಶವನ್ನು ನೀಡಿದೆ – “ನಿಯಮ ಪಾಲನೆ ಕಡ್ಡಾಯ, ಇಲ್ಲದಿದ್ದರೆ ಲೈಸನ್ಸ್ ಕಳೆದುಕೊಳ್ಳುವಿರಿ.”
ಇದನ್ನು ಓದಿ : ಕರ್ನಾಟಕದಲ್ಲಿ ಟೀನೇಜ್ ಗರ್ಭಧಾರಣೆ ಪ್ರಕರಣಗಳ ಏರಿಕೆ: ಕೇವಲ ಆರು ತಿಂಗಳಲ್ಲಿ 22,000 ಪ್ರಕರಣ!
ಹೀಗಾಗಿ ಇನ್ನೂ ಕ್ರಮ ಕೈಗೊಳ್ಳದ ಸಂಸ್ಥೆಗಳು ತಕ್ಷಣ ಸ್ಮೋಕಿಂಗ್ ಏರಿಯಾ ನಿರ್ಮಿಸಿ ಕಾನೂನು ಪಾಲಿಸದಿದ್ದರೆ ಭಾರೀ ನಷ್ಟ ಎದುರಿಸಬೇಕಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. (licenses cancelled if there is no smoking zone)