ನವದೆಹಲಿ, ಜ. 01: ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ರೂಪಿಸಿರುವ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜಿಂಗ್ (ಜೆಎಚ್‌ಟಿಸಿ) ಇಂಡಿಯಾ ಅಡಿಯಲ್ಲಿ ಲೈಟ್ ಹೌಸ್ ಪ್ರಾಜೆಕ್ಟನ್ನು ಶಂಕುಸ್ಥಾಪನೆ ಮಾಡಿದರು.
ಈ ಯೋಜನೆ ಜಗತಿನಾದ್ಯಂತ ಸುಸ್ಥಿರ ಮತ್ತು ವಿಪತ್ತು ನಿವಾರಕ ಹೊಸ ತಂತ್ರಜ್ಞಾನಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ ಎಂದು ಹೇಳಿದರು. ಈ ಯೋಜನೆಯ ಅಡಿಯಲ್ಲಿ ಅರರ್ತಲಾ, ಲಕ್ನೋ, ಇಂದೋರ್, ರಾಜ್‌ಕೋಟ್, ಚೆನ್ನೈ ಮತ್ತು ರಾಂಚಿಗಳಲ್ಲಿ ಎಲ್‌ಎಚ್‌ಪಿಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಸ್ಥಳ ಕೂಡಾ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಎಡಬ್ಲ್ಯೂಎಸ್ 1,000ಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.