ಇರಾನ್ ಸಂಘರ್ಷದ ನಡುವೆ ತೈಲ (Limpet mine attack on oil tanker) ಟ್ಯಾಂಕರ್‌ಗೆ ಲಿಂಪೆಟ್ ಮೈನ್ ದಾಳಿ
ಸಮುದ್ರ ಮಧ್ಯೆ ಭಾರೀ ಸ್ಫೋಟ, ಹೊತ್ತಿ ಉರಿದ ಟ್ಯಾಂಕರ್
ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ
ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆ ಹಡಗಿನ ಮೇಲೆ ಸ್ಫೋಟಕ (Limpet mine attack on oil tanker) ದಾಳಿ ನಡೆದಿದ್ದು, ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಪನಾಮ ಧ್ವಜ ಹೊಂದಿರುವ ‘ಎಂ.ಟಿ. ಲೂಯಿಸ್ 1’ (MT Louise 1) ಎಂಬ ಕಚ್ಚಾ ತೈಲ ಟ್ಯಾಂಕರ್ (Oil Tanker) ಮೇಲೆ ಲಿಂಪೆಟ್ ಮೈನ್‌ಗಳನ್ನು ಬಳಸಿ ದಾಳಿ ನಡೆಸಲಾಗಿದೆ.
ಈ ಹಡಗಿನಲ್ಲಿ 27 ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದರು. ಅದೃಷ್ಟವಶಾತ್, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯೂ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಬಳಿಕ ಹಾರ್ಮುಜ್ ಜಲಸಂಧಿಯಲ್ಲಿ (Limpet mine attack on oil tanker) ಲಿಂಪೆಟ್ ಮೈನ್ ಬಳಸಿ ವಾಣಿಜ್ಯ ಹಡಗಿನ ಮೇಲೆ ನಡೆದ ಮೊದಲ ದಾಳಿ ಇದಾಗಿದೆ ಎಂದು ವರದಿಯಾಗಿದೆ.
ಕಡಲ ಭದ್ರತಾ ಮೂಲಗಳ ಪ್ರಕಾರ, ಸಣ್ಣ ದೋಣಿಯೊಂದು ತೈಲ ಟ್ಯಾಂಕರ್ ಸಮೀಪಕ್ಕೆ ಬಂದು ಹಡಗಿನ ಹೊರಭಾಗಕ್ಕೆ ಎರಡು ಲಿಂಪೆಟ್ ಮೈನ್‌ಗಳನ್ನು (Limpet Mine)
ಅಳವಡಿಸಿ ಅಲ್ಲಿಂದ ತೆರಳಿದೆ. ಸ್ವಲ್ಪ ಸಮಯದ ಬಳಿಕ ಈ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ ಹಡಗಿನ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದರಿಂದ ಹಡಗಿನ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾದ ನಾವಿಕರು ಸಮಯಪ್ರಜ್ಞೆ ಮೆರೆದು ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಪರಿಸರ ಹಾನಿಯಾಗಿಲ್ಲ.
ಅಗತ್ಯ ಕ್ರಮಗಳ ಬಳಿಕ ಹಡಗು ಮತ್ತೆ ತನ್ನ ಪ್ರಯಾಣವನ್ನು ಮುಂದುವರಿಸಿ ಮುಂದಿನ ಬಂದರಿನತ್ತ ಸಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಘಟನೆ ಓಮನ್‌ನ ಖಸಾಬ್ (Khasab Oman) ಪ್ರದೇಶದಿಂದ ಸುಮಾರು 25 ನಾಟಿಕಲ್ ಮೈಲುಗಳಷ್ಟು ಈಶಾನ್ಯ ಭಾಗದಲ್ಲಿ ನಡೆದಿದೆ ಎಂದು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಮಾಹಿತಿ ನೀಡಿದೆ.
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ (Sarbananda Sonowal) ಅವರು 27 ಭಾರತೀಯ ನಾವಿಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದ್ದಾರೆ.
ಅಲ್ಲದೆ, ಹಡಗಿನ ನಿರ್ವಹಣಾ ಕಂಪನಿಯೊಂದಿಗೆ ಸರ್ಕಾರ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ತಿಳಿಸಿದ್ದಾರೆ.
ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಹೇಳಿದ್ದಾರೆ.
ಇದೇ ಪ್ರದೇಶದಲ್ಲಿ ಅಕ್ಟೋಬರ್ 29ರಂದು ಮತ್ತೊಂದು ತೈಲ ಸಾಗಣೆ ಹಡಗಿನ ಮೇಲೂ ದಾಳಿ ನಡೆದಿತ್ತು. ಲೈಬೀರಿಯಾ ಧ್ವಜ ಹೊಂದಿದ್ದ ‘ಎಂ.ಟಿ. ಅರ್ಜಾನಾ’
(MT Arzanah) ಎಂಬ ಬೃಹತ್ ಕಚ್ಚಾ ತೈಲ ಟ್ಯಾಂಕರ್ ಮೇಲೆ ಉತ್ಕ್ಷೇಪಕ ದಾಳಿ ನಡೆದಿತ್ತು. ಈ ಹಡಗಿನಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಹಲವು ಸಿಬ್ಬಂದಿ ಇದ್ದರು.
ಈ ಎರಡು ಘಟನೆಗಳಲ್ಲಿ ಒಟ್ಟು 29 ಭಾರತೀಯ ನಾವಿಕರು ಅಪಾಯದಿಂದ ಪಾರಾಗಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಆದರೆ, ಲೂಯಿಸ್ 1 ಹಡಗಿನ ಮೇಲಿನ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸೆಪ್ಟೆಂಬರ್‌ನಲ್ಲಿಯೂ ಇದೇ ರೀತಿಯ ಸ್ಫೋಟಕಗಳನ್ನು ಬಳಸುವ ಪ್ರಯತ್ನ ನಡೆದಿತ್ತು ಎಂದು ಕಡಲ ಭದ್ರತಾ ಮೂಲಗಳು ತಿಳಿಸಿವೆ.
ಲಿಂಪೆಟ್ ಮೈನ್‌ಗಳು ಹಡಗಿನ ಹೊರಭಾಗಕ್ಕೆ ಕಾಂತೀಯವಾಗಿ ಅಂಟಿಕೊಳ್ಳುವ ಸ್ಫೋಟಕ ಸಾಧನಗಳಾಗಿವೆ. ಇವುಗಳನ್ನು ಸಣ್ಣ ದೋಣಿಗಳ ಮೂಲಕ ಹಡಗಿನ ತಳಭಾಗಕ್ಕೆ ಅಳವಡಿಸಬಹುದಾಗಿದೆ.
ಇಂತಹ ದಾಳಿಗಳು ವಾಣಿಜ್ಯ ಹಡಗುಗಳ ಸುರಕ್ಷತೆಗೆ ದೊಡ್ಡ ಸವಾಲಾಗಿವೆ. ಪರ್ಷಿಯನ್ ಕೊಲ್ಲಿಯನ್ನು (Persian Gulf) ಓಮನ್ ಕೊಲ್ಲಿ ಮತ್ತು ಅರಬ್ಬಿ (Arabic)
ಸಮುದ್ರದೊಂದಿಗೆ ಸಂಪರ್ಕಿಸುವ ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗವಾಗಿದೆ.
ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ದಾಳಿಗಳು ಅಂತರರಾಷ್ಟ್ರೀಯ ಕಡಲ ವ್ಯಾಪಾರ ಮತ್ತು ಇಂಧನ ಪೂರೈಕೆಯ ಮೇಲೆ ಆತಂಕ ಮೂಡಿಸಿವೆ. ಭಾರತೀಯ ನಾವಿಕರು
ಸುರಕ್ಷಿತವಾಗಿ ಪಾರಾಗಿರುವುದು ಸಮಾಧಾನಕರ ಸಂಗತಿಯಾದರೂ, ಸಮುದ್ರ ಮಾರ್ಗಗಳ ಭದ್ರತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನು ಓದಿ : https://vijayatimes.com/new-feature-for-mobile-users-starting-november-1/