ತಮಿಳುನಾಡಿನ(Tamilnadu) ಮಧುರೈನ(Madhurai) ವಿರಾಗನೂರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ 10 ಲಕ್ಷ ಮೌಲ್ಯದ ಮದ್ಯದ(Liquor) ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿಯ ರಸ್ತೆಯ ಮಧ್ಯೆ ಉರುಳಿಬಿದ್ದಿದೆ.
ಮದ್ಯ ಸಾಗಿಸುತ್ತಿದ್ದ ಲಾರಿ ಉರುಳಿಬಿದ್ದದ್ದೇ ತಡ ಸ್ಥಳೀಯರು ಓಡಿ ಬಂದು ಬಾಟಲಿಗಳನ್ನು ಬಾಚಿಕೊಂಡು ಹೋಗಿದ್ದಾರೆ. ಕೇರಳದ ಮಣಲೂರಿನಲ್ಲಿರುವ ಗೋದಾಮಿನಿಂದ ಮದ್ಯದ ಬಾಟಲಿಗಳನ್ನು ತುಂಬಿಸಲಾಗಿತ್ತು. ಇದನ್ನು ಲೋಡ್ ಮಾಡಿಕೊಂಡು ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಲಾರಿ ಬಿದ್ದ ರಭಸಕ್ಕೆ ಹೆದ್ದಾರಿಯುದ್ದಕ್ಕೂ ಮದ್ಯದ ಬಾಟಲಿಗಳಿರುವ ಪೆಟ್ಟಿಗೆಗಳು ಚೆಲ್ಲಾಪಿಲ್ಲಿಯಾಗಿದೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ಮದ್ಯದ ಬಾಟಲಿಗಳನ್ನು ಎತ್ತಿಕೊಳ್ಳಲು ಮುಂದಾಗಿದ್ದಾರೆ.
ಇದು ಸಾಕಷ್ಟು ಗದ್ದಲವನ್ನು ಸೃಷ್ಟಿಸಿದೆ. ಅಪಘಾತಕ್ಕೀಡಾದ ವಾಹನದಿಂದ ಪ್ರಯಾಣಿಕರು ಮದ್ಯದ ಬಾಟಲಿಗಳನ್ನು ಎತ್ತಿಕೊಂಡು ಹೋಗುತ್ತಿರುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಏಪ್ರಿಲ್ 20 ರಂದು ಮಧ್ಯಪ್ರದೇಶದ ಬರ್ವಾನಿಯಲ್ಲಿ ಸೇತುವೆಯ ಮೇಲೆ ಬಿಯರ್ ಪೆಟ್ಟಿಗೆಗಳನ್ನು ತುಂಬಿದ ವಾಹನವು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯ ನಂತರ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸೇತುವೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಹೋಗಿದ್ದರು. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಉಳಿದ ಮದ್ಯದ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದರು