Bengaluru : ದೇಶದ ಇತರ ಭಾಗಗಳಿಗಿಂತ ಕರ್ನಾಟಕದಲ್ಲಿಯೇ ಮದ್ಯದ ಬೆಲೆ ಹೆಚ್ಚಾಗಿದ್ದು, ಮದ್ಯದ ಬೆಲೆಯಲ್ಲಿ ಕರ್ನಾಟಕವು (Karnataka) ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೇಲಿನ ತೆರಿಗೆ ಕೂಡ ಹೆಚ್ಚಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಮದ್ಯದ ನೈಜ ಬೆಲೆಗೆ 83% ತೆರಿಗೆಯನ್ನು ವಿಧಿಸುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾದ (Times of India) ವರದಿ ತಿಳಿಸಿದೆ.

ವರದಿಯ ಪ್ರಕಾರ, ಗೋವಾದಲ್ಲಿ (Goa) ₹ 100 ಬೆಲೆಯ ಸ್ಪಿರಿಟ್ (ನಾನ್-ಬಿಯರ್) ಕರ್ನಾಟಕದಲ್ಲಿ ಸುಮಾರು ₹513 ಬೆಲೆಯಾಗುತ್ತದೆ. ಹೆಚ್ಚಿನ ತೆರಿಗೆಗಳು ಮತ್ತು ಇತ್ತೀಚಿನ ಮದ್ಯದ ಬೆಲೆಗಳ ಹೆಚ್ಚಳವು ಮದ್ಯದ ಮೌಲ್ಯವನ್ನು ಹೆಚ್ಚಿಸಿ, ಕರ್ನಾಟಕವನ್ನು ಅಗ್ರಸ್ಥಾನದಲ್ಲಿ ಇರಿಸಿದೆ. ಇನ್ನೊಂದೆಡೆ ಇತರ ರಾಜ್ಯಗಳಿಗಿಂತ ಮದ್ಯದ ಬೆಲೆ ಅಗ್ಗವಾಗಿರುವ ರಾಜ್ಯವಾಗಿ ಗೋವಾ ಹೊರಹೊಮ್ಮಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊದಲ ಮೊದಲ ಬಜೆಟ್ನಲ್ಲಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಎಲ್ಲಾ 18 ಸ್ಲ್ಯಾಬ್ಗಳ ಮೇಲೆ 20% ಮತ್ತು ಬಿಯರ್ನ ಮೇಲಿನ ಸುಂಕವನ್ನು 10% ರಷ್ಟು ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆಯ ಆದಾಯದ ಗುರಿಯನ್ನೂ ₹36,000 ಕೋಟಿಗೆ ಹೆಚ್ಚಿಸಲಾಗಿದೆ.
ಇನ್ನು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಕಾರ, ಆಗಸ್ಟ್ನ (August) ಮೊದಲ ಎರಡು ವಾರಗಳಲ್ಲಿ ಮದ್ಯ ಮಾರಾಟ ಮತ್ತು ಆದಾಯ ಎರಡರಲ್ಲೂ ಗಮನಾರ್ಹ ಕುಸಿತ ಕಂಡುಬಂದಿದೆ. ಜುಲೈನಲ್ಲಿ ಸಕಾರಾತ್ಮಕ ಅಂಕಿಅಂಶಗಳ ಹೊರತಾಗಿಯೂ, ಆಗಸ್ಟ್ನ ಮೊದಲಾರ್ಧದಲ್ಲಿ, ಕೇವಲ 21.87 ಲಕ್ಷ ಬಾಕ್ಸ್ಗಳ IML ಮಾರಾಟವಾಗಿದೆ, ಇದು ಆಗಸ್ಟ್ 2022 ರಲ್ಲಿ ಅದೇ ಅವಧಿಯಲ್ಲಿ ದಾಖಲಾದ ಮಾರಾಟಕ್ಕಿಂತ 14.25% ಇಳಿಕೆಯಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಮದ್ಯದ ಮೇಲೆ ಭಾರೀ ತೆರಿಗೆಯನ್ನು ವಿಧಿಸಿರುವುದರಿಂದ ಮದ್ಯ ಮಾರಾಟವು ಕಡಿಮೆಯಾಗಿರುವುದರಿಂದ ಅಬಕಾರಿ ಆದಾಯವೂ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಮದ್ಯದ ಆದಾಯ ಪ್ರಸಕ್ತ ವರ್ಷ ಭಾರೀ ಕುಸಿತ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.