16ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) 2025-26ನೇ ಸಾಲಿನಲ್ಲಿ ಒಟ್ಟು 4,09,549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ಬಾರಿ 3,71,383 ಕೋಟಿ ರೂ. ಬಜೆಟ್ ಗಾತ್ರಕ್ಕೆ ಹೋಲಿಸಿದರೆ, ಈ ಬಾರಿಯ ಬಜೆಟ್ 38,166ಕೋಟಿ ರೂ. ಹೆಚ್ಚಳವಾಗಿದೆ. (List of departmental grants) ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು (State Government Guarantee Schemes) ಸೀಮಿತವಾಗಿರುವುದಿಲ್ಲ ಎಲ್ಲಾ ಇಲಾಖೆಗಳಿಗೆ ಸಮಾನವಾದ ಅನುದಾನ ನೀಡುವುದಾಗಿ ಹೇಳಿ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ.

ಇಲಾಖಾವಾರು ಅನುದಾನಗಳ ಪಟ್ಟಿ
ಕೃಷಿ ಮತ್ತು ತೋಟಗಾರಿಕೆ: 7,145 ಕೋಟಿ
ಶಿಕ್ಷಣ ಇಲಾಖೆ: 45,286 ಕೋಟಿ
ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ: 34,955ಕೋಟಿ
ಇಂಧನ ಇಲಾಖೆ: 26,896 ಕೋಟಿ
ಸಮಾಜ ಕಲ್ಯಾಣ ಇಲಾಖೆ :16,955 ಕೋಟಿ
ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್: 26,735 ಕೋಟಿ
ನೀರಾವರಿ ಇಲಾಖೆ: 22,181 ಕೋಟಿ
ನಗರಾಭಿವೃದ್ಧಿ & ವಸತಿ ಇಲಾಖೆ : 21,405 ಕೋಟಿ
ಒಳಾಡಳಿತ & ಸಾರಿಗೆ : 20,625 ಕೋಟಿ
ಲೋಕಪಯೋಗಿ ಇಲಾಖೆ :11,841 ಕೋಟಿ
ಆಹಾರ ಮತ್ತು ನಾಗರಿಕ ಸರಬಾರಜು : 8,275 ಕೋಟಿ
ಪಶು ಸಂಗೋಪನೆ ಮತ್ತು ಮೀನುಗಾರಿಕೆ: 3,977 ಕೋಟಿ
ಕಂದಾಯ ಇಲಾಖೆ : 17,201 ಕೋಟಿ (List of departmental grants)
ಇತರೆ ಅನುದಾನ : 1,49,857 ಕೋಟಿ