Mumbai : ಮುಂಬರುವ 2023ರ ಫೆಬ್ರವರಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (list of IIFA awards) ನ ಅಬುಧಾಬಿಯಲ್ಲಿರುವ ನಡೆಯಲಿರುವ ಐಐಎಫ್‌ಎ ಪ್ರಶಸ್ತಿಗಳ ಜನಪ್ರಿಯ ವಿಭಾಗಗಳಿಗೆ ಇತ್ತೀಚಿಗೆ ನಡೆದಿರುವ ನಾಮನಿರ್ದೇಶನಗಳನ್ನು ಸೋಮವಾರ ಪ್ರಕಟಿಸಲಾಗಿದೆ.
ಯಾವ ನಟ-ನಟಿಯರು ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂಬುದರ ಮಾಹಿತಿ (list of IIFA awards) ಇಲ್ಲಿದೆ ನೋಡಿ.

2022 ರಲ್ಲಿ ವಿವಾದಗಳ ಮಧ್ಯೆ ಬಿಡುಗಡೆಗೊಂಡ ಗಂಗೂಬಾಯಿ ಕಠಿಯಾವಾಡಿ ಚಿತ್ರದಲ್ಲಿ ನಟಿ ಆಲಿಯಾ ಭಟ್(Alia Bhatt) ತಮ್ಮ ನಟನೆಗೆ ಅತ್ಯುತ್ತಮ ನಟಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡರು. ಇನ್ನು ಈ ಚಿತ್ರದ ಸಂಜಯ್ ಲೀಲಾ ಬನ್ಸಾಲಿ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕ ವಿಭಾಗದಲ್ಲಿ ಹೆಚ್ಚು ಗುರುತಿಸಿಕೊಂಡರು.
ಇನ್ನು ಅತ್ಯುತ್ತಮ ಹಿನ್ನೆಲೆ ಗಾಯಕ (ಮಹಿಳೆ), ಅತ್ಯುತ್ತಮ ಕಥೆ ಮತ್ತು ಅತ್ಯುತ್ತಮ ಸಾಹಿತ್ಯಕ್ಕಾಗಿ ಅತ್ಯುತ್ತಮ ಪೋಷಕ ನಟ (ಪುರುಷ) ಸ್ಪರ್ಧೆಗೆ ಕೂಡ ನಾಮನಿರ್ದೇಶನಗೊಂಡಿದೆ. ಆಲಿಯಾ ಭಟ್ ನಟನೆಯ ಮತ್ತೊಂದು ಬ್ಲಾಕ್ ಬಸ್ಟರ್(Blockbuster) ಚಿತ್ರವಾದ ಬ್ರಹ್ಮಾಸ್ತ್ರ ಭಾಗ ಒಂದು ಆಲಿಯಾ ಹೆಸರಿಗೆ ಪ್ರಮುಖ ಕಾರಣವಾಗಿದೆ ಎಂದೇ ಹೇಳಬಹುದು. ಈ ಚಿತ್ರವೂ ಕೂಡ ನಟಿ ಆಲಿಯಾ ಭಟ್ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾಗಳಲ್ಲಿ ಒಂದಾಗಿದೆ.
ಇದನ್ನೂ ನೋಡಿ : https://youtu.be/Hs5MzUW4c_Y ಬ್ರೋಕರ್ಸ್ ಭವನ ! ಕಂದಾಯ ಭವನ ಅಲ್ಲ ಬ್ರೋಕರ್ಸ್ ಭವನ!
ಅತ್ಯುತ್ತಮ ಚಿತ್ರ ಎಂಬ ಟ್ರೋಫಿ(trophy) ಪಡೆಯಲು ಪೈಪೋಟಿ ನಡೆಸುತ್ತಿರುವ ಇತರ ಭಾಷೆಯ ಸಿನಿಮಾ ಹಾಗೂ ಚಿತ್ರತಂಡದವರು ಯಾರು ಎಂಬುದನ್ನು ನೋಡುವುದಾದರೇ ಹೀಗಿದೆ : ಸದ್ಯ ಬಾಲಿವುಡ್ ಚಿತ್ರರಂಗದ ಟಾಪ್ ನಟ ಕಾರ್ತಿಕ್ ಆರ್ಯನ್ ನಟಿಸಿದ ಭೂಲ್ ಭುಲೈಯಾ 2 ಸಿನಿಮಾ ಪೈಪೋಟಿ ನೀಡುವ ಸಾಲಿನಲ್ಲಿರೆ.
- ಡಾರ್ಲಿಂಗ್ಸ್, ದೃಶ್ಯಂ 2 ಮತ್ತು ವಿಕ್ರಮ್ ವೇದಾ ಕೂಡ ಸೇರಿವೆ. ಅತ್ಯುತ್ತಮ ನಿರ್ದೇಶಕ ರೇಸ್‌ನಲ್ಲಿ,
- ಬನ್ಸಾಲಿ ಮತ್ತು ಬ್ರಹ್ಮಾಸ್ತ್ರ ಭಾಗ ಒಂದರ ಅಯಾನ್ ಮುಖರ್ಜಿ,
- ಶಿವ ಖ್ಯಾತಿಯ ಅನೀಸ್ ಬಜ್ಮಿ (ಭೂಲ್ ಭುಲೈಯಾ 2),
- ಜಸ್ಮೀತ್ ಕೆ ರೀನ್ (ಡಾರ್ಲಿಂಗ್ಸ್),
- ವಾಸನ್ ಬಾಲಾ (ಮೋನಿಕಾ ಓ ಮೈ ಡಾರ್ಲಿಂಗ್)
- ನಟ ಆರ್. ಮಾಧವನ್ (ರಾಕೆಟ್ರಿ : ದಿ. ನಂಬಿ ಎಫೆಕ್ಟ್) ಇದ್ದಾರೆ.
ಇದನ್ನೂ ಓದಿ : https://vijayatimes.com/20-films-will-be-released/
ಅತ್ಯುತ್ತಮ ನಟಿ(ಮಹಿಳೆ) ವಿಭಾಗದಲ್ಲಿ :
- ಟಬು ಅತ್ಯುತ್ತಮ ಪೋಷಕ ನಟಿ(ಮಹಿಳೆ) ಪ್ರಶಸ್ತಿಗೆ ನಾಮನಿರ್ದೇಶನಕ್ಕೆ ಆಯ್ಕೆ
- ಶೀಬಾ ಚಡ್ಡಾ (ಬಧಾಯಿ ದೋ),
- ಮೌನಿ ರಾಯ್ (ಬ್ರಹ್ಮಾಸ್ತ್ರ ಭಾಗ 1),
- ನಿಮ್ರತ್ ಕೌರ್ (ದಾಸ್ವಿ)
- ರಾಧಿಕಾ ಆಪ್ಟೆ (ಮೋನಿಕಾ ಓ ಮೈ ಡಾರ್ಲಿಂಗ್) ಅವರು ಸ್ಪರ್ಧೆಯ ಅಖಾಡದಲ್ಲಿದ್ದಾರೆ.

ಅತ್ಯುತ್ತಮ ನಟ ಪುರುಷರ ವಿಭಾಗದಲ್ಲಿ ನೋಡುವುದಾದರೆ :
- ನಟ ಕಾರ್ತಿಕ್ ಆರ್ಯನ್ ಜೊತೆಗೆ ಹೃತಿಕ್ ರೋಷನ್ (ವಿಕ್ರಮ್ ವೇದಾ),
- ಅಭಿಷೇಕ್ ಬಚ್ಚನ್ (ದಾಸ್ವಿ),
- ಅಜಯ್ ದೇವಗನ್ (ದೃಶ್ಯಂ 2),
- ರಾಜ್‌ಕುಮಾರ್ ರಾವ್ (ಮೋನಿಕಾ ಓ ಮೈ ಡಾರ್ಲಿಂಗ್)
- ಅನುಪಮ್ ಖೇರ್ (ದಿ ಕಾಶ್ಮೀರ್ ಫೈಲ್ಸ್) ನಾಮನಿರ್ದೇಶನಗೊಂಡಿದ್ದಾರೆ.