ಪಾಟ್ನಾ : ಬಿಹಾರ(Bihar) ಮುಖ್ಯಮಂತ್ರಿ(ChiefMinister) ನಿತೀಶ್ ಕುಮಾರ್(Nithish Kumar) ನೇತೃತ್ವದ ಮಹಾಘಟಬಂಧನ್ ಸರ್ಕಾರದ 31 ಸಚಿವರ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ತೇಜಸ್ವಿ ಯಾದವ್(Tejaswi Yadav) ನೇತೃತ್ವದ ಆರ್ಜೆಡಿ(RJD) 16 ಸಚಿವ ಸ್ಥಾನಗಳನ್ನು ಮತ್ತು ಜೆಡಿಯು(JDU) 11 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್ ಪಕ್ಷಕ್ಕೆ(Congress Party) ಕೇವಲ 2 ಸಚಿವ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.

ಇನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೃಹ ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ತಾವೇ ಉಳಿಸಿಕೊಳ್ಳುವ ಸಾಧ್ಯತೆಯಿದ್ದರೂ, ಈ ಹಿಂದೆ ಬಿಜೆಪಿಯೊಂದಿಗೆ ಇದ್ದ ಹೆಚ್ಚಿನ ಖಾತೆಗಳನ್ನು ಆರ್ಜೆಡಿ ಪಡೆಯಬಹುದು. ಆರ್ಜೆಡಿ ನಾಯಕರಾದ ತೇಜ್ ಪ್ರತಾಪ್ ಯಾದವ್, ಅಲೋಕ್ ಮೆಹ್ತಾ, ಲಲಿತ್ ಯಾದವ್, ಸುರೇಂದ್ರ ಯಾದವ್ ಮತ್ತು ಕುಮಾರ್ ಸರ್ವಜೀತ್ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ. ಇನ್ನೊಂದೆಡೆ ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್ಎಎಂ) ಒಂದು ಸಚಿವ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ.
ಸಚಿವರ ಸಂಭಾವ್ಯ ಪಟ್ಟಿ :
ಜನತಾ ದಳ (ಯುನೈಟೆಡ್) :
- ಬಿಜೇಂದರ್ ಯಾದವ್
- ವಿಜಯ್ ಚೌಧರಿ
- ಶ್ರವಣ್ ಕುಮಾರ್
- ಜಯಂತ್ ರಾಜ್
- ಅಶೋಕ್ ಚೌಧರಿ
- ಮದನ್ ಸಾಹ್ನಿ
- ಸುನಿಲ್ ಕುಮಾರ್
- ಸಂಜಯ್ ಝಾ
- ಜಮಾ ಖಾನ್
- ಸುಮಿತ್ ಕುಮಾರ್ ಸಿಂಗ್
- ಲೆಸಿ ಸಿಂಗ್

ರಾಷ್ಟ್ರೀಯ ಜನತಾ ದಳ :
- ತೇಜ್ ಪ್ರತಾಪ್ ಯಾದವ್
- ಸುರೇಂದ್ರ ಯಾದವ್
- ಚಂದ್ರಶೇಖರ್
- ರಮಾನಂದ್ ಯಾದವ್
- ಲಲಿತ್ ಯಾದವ್
- ಕುಮಾರ್ ಸರಬ್ಜಿತ್
- ಕುಮಾರ್ ಸರ್ವಜಿತ್
- ಕಾರ್ತಿಕೆ ಶರ್ಮಾ
- ಶಾನವಾಜ್
- ಸಮೀರ್ ಮಹಾಸೇತ್
- ಅನಿತಾ ದೇವಿ
- ಅಲೋಕ್ ಮೆಹ್ತಾ
- ಭಾರತ್ ಭೂಷಣ್ ಮಂಡಲ್
- ಸುಧಾಕರ್ ಸಿಂಗ್
- ಶಮೀಮ್ ಅಹ್ಮದ್
16 ಜಿತೇಂದ್ರ ರೈ

ಕಾಂಗ್ರೆಸ್ :
- ಮುರಾರಿ ಲಾಲ್ ಗೌತಮ್
- ಅಫಾಕ್ ಆಲಂ
ಹಿಂದೂಸ್ತಾನಿ ಅವಾಮ್ ಮೋರ್ಚಾ :
- ಸಂತೋಷ್ ಮಾಂಝಿ