ರಾಜ್ಯದಲ್ಲಿ ಲೋಡ್‍ಶೆಡ್ಡಿಂಗ್ ಮಾಡುವುದಿಲ್ಲ ಎಂದು ಅನಗತ್ಯ ಲೋಡ್ ಶೆಡ್ಡಿಂಗ್ ಮುಂದುವರಿಕೆ! ಇದಕ್ಕೆ ಕಾರಣವೇನು?

`ದ ಬೆಂಗಳೂರು ವೈರ್’(The Bengaluru Wire) ಪತ್ರಿಕೆ ನೀಡಿರು ವರದಿಯ ಅನುಸಾರ ರಾಜ್ಯದಲ್ಲಿ ಸರ್ಕಾರ(Government) ಈ ಹಿಂದೆಯೂ ಅನೇಕ ಬಾರಿ ಹೇಳಿತ್ತು ಲೋಡ್‍ಶೆಡ್ಡಿಂಗ್(Loadshedding) ಮಾಡುವುದಿಲ್ಲ ಎಂದು. ಆದ್ರೆ, ತಾಂತ್ರಿಕ ಅಡಚಣೆ ಸೇರಿದಂತೆ ನಾನಾ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅನಧಿಕೃತವಾಗಿ ಲೋಡ್‍ಶೆಡ್ಡಿಂಗ್ ಮಾಡಲಾಗುತ್ತಿದೆ. ರಾಜ್ಯ ಹಿಂದೆಂದೂ ಕಾಣದ ವಿದ್ಯುತ್(Current) ಬಳಕೆಯೂ ದಾಖಲೆ ಮಟ್ಟಕ್ಕೆ ತಲುಪಿದೆ ಎಂಬ ಅಶ್ಚರ್ಯಕರ ಸುದ್ದಿಯನ್ನು ತಿಳಿಸಿದೆ.

ಹೌದು, ಮಾರ್ಚ್ 18 ರಂದು ಒಂದೇ ದಿನದಲ್ಲಿ 14,818 ಮೆಗಾವ್ಯಾಟ್(Mega Watt) ವಿದ್ಯುತ್(Current) ಬಳೆಕೆಯಾಗಿದೆ. ಇದೊಂದು ಬೇಡಿಕೆಯಾಗಿ ಪರಿವರ್ತಿಸಿದ್ದು, ಇಂಧನ ಇಲಾಖೆ ಇತಿಹಾಸದಲ್ಲಿ ಇದು ನೂತನ ದಾಖಲೆಯಾಗಿ ಹೊರಹೊಮ್ಮಿದೆ. ಒಂದೆಡೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಕಲ್ಲಿದ್ದಲು ಪೂರೈಕೆ ಕೊರೆತೆ ಎದುರಾಗಿದೆ! ಇದರೊಟ್ಟಿಗೆ ರಾಜ್ಯದಲ್ಲಿರುವ ಪ್ರಮುಖ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲಿದ್ದಲು ಅಗತ್ಯ ಕಂಡಿದ್ದು, ಕೊರೆತೆಯನ್ನು ನೀಗಿಸುವುದು ಅತ್ಯಗತ್ಯವಾಗಿದೆ.

ವರ್ಷದಲ್ಲಿ ವಿದ್ಯುತ್ ಮಳೆಗಾಲದಲ್ಲಿ ತೆಗೆಯುವುದು ಸಾಮಾನ್ಯ ಅದನ್ನು ಜನಸಾಮಾನ್ಯರು ಒಪ್ಪುತ್ತಾರೆ ಮತ್ತು ನಿರೀಕ್ಷಿಸಿರುತ್ತಾರೆ. ಆದರೆ, ವರ್ಷ ಪೂರ ಅವಧಿಯಲ್ಲಿ ಅತೀ ಹೆಚ್ಚು ವಿದ್ಯುತ್ ಕಡಿತ ಉಂಟಾಗುವುದು ತಾಪಮಾನ ಹೆಚ್ಚಿರುವ ಬೇಸಿಗೆಯ ಸಮಯದಲ್ಲಿ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿದ್ಯುತ್ ಕಡಿತ ಒಂದು ರೀತಿ ಪ್ರವೃತ್ತಿಯಾಗಿದೆ. ಮಾರ್ಚ್ ತಿಂಗಳಲ್ಲಿ ಈ ಬಾರಿ 15 ಸಾವಿರ ಮೆಗಾವ್ಯಾಟ್ ವಿದ್ಯುತ್ ಬರಬಹುದು ಎಂಬುದನ್ನು ಅಂದಾಜಿಸಲಾಗಿತ್ತು.

ಆದರೆ, ಮಾರ್ಚ್ 18 ರಂದು ವಿದ್ಯುತ್ ಬೇಡಿಕೆ ಏರಿಕೆಯಾಗಿದ್ದು, ಈ ಬಾರಿ 14,818 ಮೆಗಾವ್ಯಾಟ್ ತಲುಪಿದೆ. ಕಳೆದ ಒಂದೆರೆಡು ದಿನಗಳಿಂದ ಮಳೆ ಸಂಭವಿಸುತ್ತಿರುವ ಹಿನ್ನಲೆ, ಒಂದು ದಿನದ ವಿದ್ಯುತ್ ಬಳಕೆ ಪ್ರಮಾಣ 240 ದಶಲಕ್ಷ ಯೂನಿಟ್ ನಿಂದ 263 ದಶಲಕ್ಷ ಯೂನಿಟ್ ಸಮೀಪದಲ್ಲಿದೆ ಎಂಬುದು ವರದಿ ಹೇಳುತ್ತದೆ.

Latest News

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.

ದೇಶ-ವಿದೇಶ

8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.