ಲಾಕ್ಡೌನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ತಂಬಾಕು ಬೆಳೆಗಾರರಿಗೆ ಭಾರೀ ಸಂಕಷ್ಟ ತಂದೊಡ್ಡಿದೆ. ಅದು ಹೇಗೆ ತಂಬಾಕು ನಾಟಿ ಮಾಡಿ ಐದು ದಿನದೋಳಗೆ ರಸಗೊಬ್ಬರವನ್ನು ಕೊಡಬೇಕು ಮಾನ್ಸೂನ್ ಗಿಂತ ಮುಂಚಿತವಾಗಿ ತಂಬಾಕು ಬೇರೂರಬೇಕು ಇಲ್ಲವಾದರೆ ಇಳುವರಿ ಪಡೆಯುವುದು ಕಷ್ಟವಾಗುತ್ತದೆ. ಆದ್ರೆ ಲಾಕ್ಡೌನ್‌ನಿಂದಾಗಿ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರವೇ ಸಿಗುತ್ತಿಲ್ಲ.
ತಂಬಾಕು ಮಂಡಳಿ ಈಗಾಗಲೇ ರಸಗೊಬ್ಬರ ಕಂಪನಿಗೆ ಮುಂಗಡವಾಗಿ ಹಣ ಕಟ್ಟಿ ರಸಗೊಬ್ಬರವನ್ನು ಗೊಡೋನ್ ನಲ್ಲಿ ದಾಸ್ತಾನು ಮಾಡಿದ್ದು, ಅದರಲ್ಲಿ 40% ಭಗದಷ್ಟು ರಸಗೊಬ್ಬರ ವಿತರಣೆ ಮಾಡಲಾಗಿದೆ ಉಳಿದ 60% ಬಾಕಿ ಉಳಿದಿದ್ದು,7ಸಾವಿರ ರೈತರಲ್ಲಿ 4ಸಾವಿರ ರೈತರಿಗೆ ವಿತರಣೆ ಆಗಿದ್ದು ಉಳಿದ 3 ಸಾವಿರ ರೈತರಿಗೆ ರಸಗೊಬ್ಬರ ವಿತರಣೆ ಆಗಬೇಕಿದೆ .
ಆದ್ರೆ ಲಾಕ್ ಡೌನ್ ಇರುವ ಕಾರಣ ಸರ್ಕಾರ ಮತ್ತು ಜಿಲ್ಲಾ ಧಿಕಾರಿಯವರ ಆದೇಶದಂತೆ ವಾರದ ಮೂರು ದಿನ ಮಾತ್ರ ಬೆಳಗ್ಗೆ 6 ಗಂಟೆಯಿಂದ10 ಗಂಟೆಯ ವರೆಗೆ ಸಮಯವಿದ್ದು ,ರೈತರಿಗೆ ರಸಗೊಬ್ಬರ ಪಡೆಯಲು ತೊಂದರೆಯಾಗಿದೆ ಪ್ರತಿದಿನ 12ಜನಕ್ಕೆ ಮಾತ್ರ ಸಿಗುವುದರಿಂದ ಹೊರಗಡೆ ಪಡೆಯಲು ಸಾಧ್ಯವಾಗಲಿಲ್ಲ
ಇದರಿಂದ ರೈತ ನಷ್ಟವನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ರೈತರಿಗೆ ವಿಶೇಷ ಪ್ರಕರಣಗಳಲ್ಲಿ ಸೇರಿಸುವ ಮೂಲಕ ಆಂದ್ರ ಸರ್ಕಾರದ ಲ್ಲಿ ಪಡಿತರ ವಿತರಣೆ ಮಾಡುತ್ತಿರುವ ಮಾದರಿಯಲ್ಲಿ ಗೂಡ್ಸ್ ವಾಹನಗಳಲ್ಲಿ ಹಳ್ಳಿಗಳಿಗೆ ರಸಗೊಬ್ಬರಗಳು ವಿತರಣೆ ಮಾಡಬೇಕೆಂದು ರೈತ ಸಂಘದ ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಅವರ ಮನವಿ
ತಂಬಾಕು ಬೆಳೆಗಾರರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳು ತಂಬಾಕು ಬೆಳೆಯುವ ರೈತರಿಗೆ ಬಿತ್ತನೆ ಬೀಜ ನೀಡಲು ಸಿದ್ದತೆ ಮಾಡಿಕೊಳ್ಳಲಾಗಿದೆ . ಈ ಬಾರಿ ಉತ್ತಮ ಮಳೆ ಬಂದಿದ್ದರಿಂದ ಉತ್ತಮ ಇಳುವರಿ ಮತ್ತು ದರದ ನಿರೀಕ್ಷೆ ಯಿಂದಲೇ ರೈತರು ತಂಬಾಕು ಗಿಡಗಳ ನಾಟಿಯಲ್ಲಿ ತೊಡಗಿಸಿಕೊಂಡಿರುವುದು ನಾವು ಕಾಣಬಹುದಾಗಿದೆ.
ತಂಬಾಕು ವಾಣಿಜ್ಯ ಬೆಳೆಯಾಗಿರುವ ಕಾರಣ ಒಂದಷ್ಟು ಹೆಚ್ಚಿನ ಆದಾಯ ಪಡೆಯಬಹುದು ಎಂಬ ನಿರೀಕ್ಷೆ ಯಲ್ಲಿ ಬೆಳೆಗಾರರು ತಂಬಾಕು ಬೆಳೆಯುತ್ತಾರೆ. ಆದರೆ ಕೆಲವೊಮ್ಮೆ ಬೆಳೆ ಕೈಕೊಟ್ಟು ನಷ್ಟ ಹೊಂದಿದವರು ಇದ್ದಾರೆ. ಆದರೂ ಮುಂಗಾರು ಹಂಗಾಮಿಗೆ ಈ ಬೆಳೆ ಸೂಕ್ತವಾಗಿರುವುದರಿಂದ ಬೆಳೆಗಾರರು ಲಾಭವೋ ನಷ್ಟವೋ ಬೆಳೆ ಬೆಳೆಯುವುದನ್ನು ಮಾತ್ರ ಬಿಡುತ್ತಿಲ್ಲ . ಆದ್ರೆ ಸರ್ಕಾರ ರೈತರ ಸಂಕಷ್ಟ ಅರಿತು ಲಾಕ್ಡೌನ್ ನಿಯಮ ರೂಪಿಸಬೇಕಾಗಿ ಮನವಿ ಮಾಡುತ್ತಿದ್ದಾರೆ.
ಅರಕೂಲಗೂಡಿನಿಂದ ವೆಂಕಟೇಶ್, ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್