ನವದೆಹಲಿ, ಆ. 06: ಕೊರೊನಾ ಮೂರನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಆದರೆ, ಪಾಸಿಟಿವಿಟಿ ದರ ಶೇ 5ಕ್ಕಿಂತ ಹೆಚ್ಚಾದರೆ ತಕ್ಷಣವೇ ಲಾಕ್ಡೌನ್ ಘೋಷಿಸಲಾಗುವುದು ಎಂದು ನವದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.
ಸಂಭಾವ್ಯ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ಸೋಂಕಿತರಿಗಾಗಿ 37,000 ಹಾಸಿಗೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಒಂದು ವೇಳೆ ಮೂರನೇ ಅಲೆಯು ತೀರಾ ಕೆಟ್ಟ ಪರಿಸ್ಥಿತಿ ಉಂಟುಮಾಡಿದರೆ ಅದನ್ನು ಎದುರಿಸಲು ಬೇಕಾದ ಎಲ್ಲ ಸಿದ್ಧತೆಯನ್ನೂ ಸರ್ಕಾರ ಮಾಡಿಕೊಂಡಿದೆ ಎಂದು ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ವರ್ಚುವಲ್ ಸಭೆಯಲ್ಲಿ ಜೈನ್ ಹೇಳಿದ್ದಾರೆ.
ಗುರುವಾರ ದೆಹಲಿಯಲ್ಲಿ 61 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ 0.08ರಷ್ಟಿತ್ತು.