• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಅಕ್ರಮ ಆಸ್ತಿ ಮೇಲೆ ಲೋಕಾಯುಕ್ತ ಬಿರುಸಿನ ದಾಳಿ: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಕಾರ್ಯಾಚರಣೆ

Shwetha Mohan by Shwetha Mohan
in ರಾಜ್ಯ, ವಿಜಯ ಟೈಮ್ಸ್‌
ಅಕ್ರಮ ಆಸ್ತಿ ಮೇಲೆ ಲೋಕಾಯುಕ್ತ ಬಿರುಸಿನ ದಾಳಿ: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಕಾರ್ಯಾಚರಣೆ
0
SHARES
100
VIEWS
Share on FacebookShare on Twitter
  • ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ಆಪರೇಷನ್ ಕ್ಲೀನ್ ಅಪ್
  • ಕರ್ನಾಟಕದ ವಿವಿಧೆಡೆ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ದಾಳಿ
  • ಬೆಂಗಳೂರು,ಹಾಸನ , ಚಿತ್ರದುರ್ಗ ಸೇರಿದಂತೆ ಹಲವೆಡೆ ದಾಳಿ

Bengaluru: ಇಂದು ಬೆಳ್ಳಂಬೆಳಿಗ್ಗೆ ಕರ್ನಾಟಕದಲ್ಲಿ ಮತ್ತೊಮ್ಮೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು(Lokayukta officials) ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು ಸೇರಿ ಹಾಸನ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಆರು ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿಯನ್ನು ಉಲ್ಲಂಘಿಸಿ ಅಧಿಕಾರವನ್ನು ದುರುಪಯೋಗ ಪಡಿಸಿ ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿಯೇ ಈ ದಾಳಿಗಳು ನಡೆದಿವೆ.

Lokayukta raid
Lokayukta raids against corruption

ಬೆಂಗಳೂರು ಜಿಲ್ಲೆಯ ಕಂದಾಯ ಅಧಿಕಾರಿ ವೆಂಕಟೇಶ್, ಬಿಡಿಎ ಕಚೇರಿಯ ಹಿರಿಯ ತೋಟಗಾರಿಕಾ ನಿರ್ದೇಶಕ ಓಂ ಪ್ರಕಾಶ್,

ಹಾಸನ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ, ಚಿಕ್ಕಬಳ್ಳಾಪುರದ ಜೆಇ ಆಂಜನೇಯಮೂರ್ತಿ ಮತ್ತು

ಚಿತ್ರದುರ್ಗದ ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಎಂಬವರ ವಿರುದ್ಧ ದಾಳಿಯು ಕೇಂದ್ರಿತವಾಗಿತ್ತು.

ಈ ಅಧಿಕಾರಿಗಳ ಮನೆ, ಕಚೇರಿ, ವೈಯಕ್ತಿಕ ಕ್ಲಿನಿಕ್, ಅಂಗಡಿ, ಭದ್ರಪಡಿಸಿದ ಆಸ್ತಿ ಸೇರಿ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಯರಗುಂಟೇಶ್ವರ ಬಡಾವಣೆಯಲ್ಲಿರುವ ಡಾ. ವೆಂಕಟೇಶ್ ಮನೆ, ಆದಿವಾಲ ಗ್ರಾಮದಲ್ಲಿನ ಅವರ ನಿವಾಸ ಮತ್ತು ಕ್ಲಿನಿಕ್ ಮೇಲೆ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ಹಾಗೂ ಡಿವೈಎಸ್‌ಪಿ ಮೃತ್ಯುಂಜಯ ನೇತೃತ್ವದ ತಂಡ ದಾಳಿ ನಡೆಸಿದೆ.

ಅವರ ಮೇಲೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪವಿದೆ. ಪರಿಶೀಲನೆ ವೇಳೆ ಆರ್ಥಿಕ ದಾಖಲೆಗಳು, ಆಸ್ತಿ ದಾಖಲೆಗಳು ಹಾಗೂ ಲೆಕ್ಕಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗೌರಿಬಿದನೂರು ತಾಲ್ಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜೆಇ ಆಂಜನೇಯಮೂರ್ತಿ ಮನೆ ಮೇಲೆ ದಾಳಿ ನಡೆದಿದೆ.

ಈತನ ಯಲಹಂಕ ನ್ಯೂ ಟೌನ್ ನಿವಾಸ ಹಾಗೂ ಸ್ವಗ್ರಾಮ ತುಮಕೂರಿನ ಮನೆಗಳಲ್ಲೂ ತಪಾಸಣೆ ನಡೆದಿದೆ. ಅವರ ಕಚೇರಿ ಮೇಲೆ ದಾಳಿ ನಡೆಸಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಹಾಸನ ಜಿಲ್ಲೆಯಲ್ಲೂ ಬಹುಮುಖ್ಯ ದಾಳಿ ನಡೆದಿದೆ. ಎನ್‌ಎಚ್‌ಎಐ ಕಾರ್ಯಪಾಲಕ ಇಂಜಿನಿಯರ್ ಜಯಣ್ಣ ಅವರ ನಿವಾಸ, ಪತ್ನಿಯ ಮನೆ, ಹಾರ್ಡ್ವೇರ್ ಅಂಗಡಿ ಸೇರಿ ಹಲವು ಸ್ಥಳಗಳಲ್ಲಿ ದಾಳಿ ನಡೆದಿದೆ.

ಜೊತೆಗೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿನ ಫಾರ್ಮ್‌ಹೌಸ್‌ ಮೇಲೆ ಕೂಡ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌ಪಿ ಸ್ನೇಹಾ ನೇತೃತ್ವದ ತಂಡ ಈ ಶೋಧನೆ ನಡೆಸಿದ್ದು, ಹೆಚ್ಚಿನ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ಚಿನ್ನದ ಬಿಸ್ಕತ್‌ಗಳು, ಬೆಳ್ಳಿ ಪಾತ್ರೆಗಳು, ನಗದು ಹಣ, ಆಭರಣಗಳು ಸೇರಿದಂತೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ವಶಪಡಿಸಿಕೊಳ್ಳಲಾಗಿತ್ತು.

ಇದನ್ನು ಓದಿ :  ಐಎಎಸ್ ಅಧಿಕಾರಿ ಬಿ.ವಿ. ವಾಸಂತಿ ಅಮರ್‌ ಸೇರಿ 8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: 9 ಕೋಟಿ ಆಸ್ತಿ ಪತ್ತೆ

ಇದೀಗ ಮತ್ತೊಮ್ಮೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಲೋಕಾಯುಕ್ತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ದಾಳಿಯ ಕುರಿತಾಗಿ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.

Tags: AntiCorruptionbengaluruCorruptionCrackdownCorruptOfficialsIllegalAssetsLokayukta raidPublicServantsvijaya times

Related News

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ
ಪ್ರಮುಖ ಸುದ್ದಿ

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಹರಿಸಲು CWRC ಸೂಚನೆ

October 8, 2026
ಅಕ್ಟೋಬರ್ 15ರಿಂದ UPI ಪಾವತಿಯಲ್ಲಿ ಹೊಸ ನಿಯಮ: ₹2,000 ಮೀರಿದ ವಹಿವಾಟಿಗೆ ಶುಲ್ಕ
ದೇಶ-ವಿದೇಶ

ಅಕ್ಟೋಬರ್ 15ರಿಂದ UPI ಪಾವತಿಯಲ್ಲಿ ಹೊಸ ನಿಯಮ: ₹2,000 ಮೀರಿದ ವಹಿವಾಟಿಗೆ ಶುಲ್ಕ

October 8, 2026
ಬರದಿಂದ ತತ್ತರಿಸಿದ ರೈತರ ನೆರವಿಗೆ ನಿಂತ ಸರ್ಕಾರ: ₹1,250 ಕೋಟಿ ಪರಿಹಾರದ ಮೊದಲ ಕಂತು ಬಿಡುಗಡೆ
ಪ್ರಮುಖ ಸುದ್ದಿ

ಬರದಿಂದ ತತ್ತರಿಸಿದ ರೈತರ ನೆರವಿಗೆ ನಿಂತ ಸರ್ಕಾರ: ₹1,250 ಕೋಟಿ ಪರಿಹಾರದ ಮೊದಲ ಕಂತು ಬಿಡುಗಡೆ

October 8, 2026
ಕಸದ ಮಾದರಿಯಲ್ಲಿ ಬಳಸಿದ ಅಡುಗೆ ಎಣ್ಣೆ ಸಂಗ್ರಹಕ್ಕೆ ಪ್ಲ್ಯಾನ್: ನಗರಗಳಲ್ಲಿ ಮನೆ ಮನೆಗೆ ಬರಲಿದ್ದಾರೆ ಸಿಬ್ಬಂದಿ
ಪ್ರಮುಖ ಸುದ್ದಿ

ಕಸದ ಮಾದರಿಯಲ್ಲಿ ಬಳಸಿದ ಅಡುಗೆ ಎಣ್ಣೆ ಸಂಗ್ರಹಕ್ಕೆ ಪ್ಲ್ಯಾನ್: ನಗರಗಳಲ್ಲಿ ಮನೆ ಮನೆಗೆ ಬರಲಿದ್ದಾರೆ ಸಿಬ್ಬಂದಿ

October 8, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.