Bengaluru: ಕಳೆದ ಕೆಲ ದಿನಗಳಿಂದ ಹಲವು ಸರ್ಕಾರಿ ಅಧಿಕಾರಿಗಳ (Government officials) ಅವ್ಯವಹಾರದ ಕುರಿತು ಸಾಕಷ್ಟು ದೂರುಗಳು (Complaints) ಕೇಳಿ ಬಂದ ಹಿನ್ನಲೆಯಲ್ಲಿ ಲೋಕಾಯುಕ್ತ (Lokayukta) ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಧಾರವಾಡದ (Dharwad) ಮೂರು ಕಡೆ, ಬೆಳಗಾವಿ ಜಿಲ್ಲೆಯ (Belgaum district) ಸವದತ್ತಿ ತಾಲೂಕಿನ ಎರಡು, ಗದಗ ಜಿಲ್ಲೆ (Gadag District) ನರಗುಂದದಲ್ಲಿ (Naragunda) ಒಂದು, ಬೀದರ್ (Bidar) , ದಾವಣಗೆರೆ ಮತ್ತು ಮೈಸೂರಿನ (Davangere and Mysore) ಒಂದು ಕಡೆ ದಾಳಿ ಮಾಡಿ, ದಾಖಲೆಗಳನ್ನು (Documents) ಪರಿಶೀಲನೆ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ (Government officials) ವಿರುದ್ಧ ಅಕ್ರಮ ಆಸ್ತಿ (illegal property) ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಇಂದು ಬೆಳಿಗ್ಗೆ ಬೀದರ್ ಜಿಲ್ಲಾ (Bidar District) ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ (Rabindra Rotte) ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಪರಿಶೀಲಿಸುತ್ತಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ (Lokayukta Dysp) ಹನುಮಂತ ನೇತೃತ್ವದಲ್ಲಿ ದಾಳಿ ನಡೆದಿದೆ. ರವೀಂದ್ರ ರೊಟ್ಟೆ (Rabindra Rotte) ಈ ಹಿಂದೆ ಬೀದರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿರಸ್ತಾದಾರ (Headmaster in office) ಹಾಗೂ ಬಿಬಿಎಂಪಿಯಲ್ಲಿ (BBMP) ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಇನ್ನು ಬೆಳಗಾವಿ ಜಿಲ್ಲೆಯ (Belgaum district) ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ್ ಡವಳೇಶ್ವರ (Vitthal Davaleshwar) ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta officials) ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ವಿಠ್ಠಲ್ ಡವಳೇಶ್ವರ (Vitthal Davaleshwar) ಈ ಹಿಂದೆ ಅಕ್ರಮವಾಗಿ 1.10 ಕೋಟಿ ಹಣವನ್ನು (crores of money) ಚಿಕ್ಕೋಡಿಯಿಂದ ಬಾಗಲಕೋಟೆಗೆ ಸಾಗಿಸುವಾಗ ಸಿಕ್ಕಿಬಿದ್ದಿದ್ದರು. ಇದರ ಮುಂದುವರೆದ ಭಾಗವಾಗಿ ದಾಳಿ ನಡೆದಿದೆ ಎನ್ನಲಾಗಿದೆ.
ದಾವಣಗೆರೆಯ (Davanagere) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಾಯ ನಿರ್ದೇಶಕ ಕಮಲ್ ರಾಜ್ (Kamal Raj) ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ದಾವಣಗೆರೆ ನಗರದ ಡಿಸಿಎಂ ಪಕ್ಕದಲ್ಲಿ ಬರುವ ಶಕ್ತಿನಗರದ ಮೂರನೇ ಕ್ರಾಸ್ನಲ್ಲಿ ಕಮಲ್ ರಾಜ್ ಮನೆ ಇದೆ. ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ (SP MS) ಕೌಲಾಪುರೆ (Kaulapure) ನೇತ್ರತ್ವದಲ್ಲಿ ಇನ್ಸ್ ಪೆಕ್ಟರ್ಗಳಾದ ಮಧುಸೂದನ್ ಹಾಗೂ ಪ್ರಭು ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳಿಂದ ದಾಳಿ (Attacked by staff) ನಡೆದಿದೆ.