Bengaluru: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಬಿಗ್ ಶಾಕ್! ಚನ್ನಗಿರಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ (Lokayukta raid on madal)ಅವರ ಪುತ್ರ, ಬೆಂಗಳೂರು ಜಲಮಂಡಳಿಯ ಮುಖ್ಯ
ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್(Prashant Madal) 40 ಲಕ್ಷ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಲ್ಲದೆ, ಮನೆಯಲ್ಲಿ 6.10 ಕೋಟಿ ಹಾಗೂ ಕಚೇರಿ 2.02 ಕೋಟಿ ನಗದು ಪತ್ತೆಯಾಗಿದೆ.
ಮೊದಲೇ 40% ಸರ್ಕಾರ ಅನ್ನೋ ಕುಖ್ಯಾತ ಗಳಿಸಿರುವ ಬಿಜೆಪಿಗೆ (BJP)ಇದು ದೊಡ್ಡ ಬಹು ದೊಡ್ಡ ಹೊಡೆತವಾಗಿದೆ. ಭ್ರಷ್ಟ ಸರ್ಕಾರ ಅನ್ನೋ ಮಾತಿಗೆ ಪೂರಕವಾದ ದಾಖಲೆ ಸಿಕ್ಕಂತಾಗಿದೆ.
ಸ್ಯಾಂಟ್ರೋ ರವಿಯ ಬಂಧನ,ಗುತ್ತಿಗೆದಾರರ ಆರೋಪಗಳನ್ನು ಅಲ್ಲಗಳೆಯುತ್ತಾ ಬಂದಿರುವ ಜಿಜೆಪಿಗೆ ಪ್ರಶಾಂತ್ ಮಾಡಾಳ್ (Prashant Madal) ಬಂಧನ ನುಂಗಲಾರದ ತುತ್ತಾಗಿದೆ.
ಮಗನ ಬಂಧನದ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಅವರ ನಿರ್ದೇಶನದ ಮೇರೆಗೆ ವಿರೂಪಾಕ್ಷಪ್ಪ ಅವರು ರಾಜೀನಾಮೆ ನೀಡಿದ್ದಾರೆ. ಆದ್ರೆ ಈಗಾಗಲೇ ವಿರೋಧ ಪಕ್ಷಗಳ ತೀವ್ರ ಟೀಕೆಗೆ ತುತ್ತಾಗಿದೆ. ಅಲ್ಲದೆ ಸಾರ್ವಜನಿಕರೂ ಕೂಡ ಈ ಘಟನೆಯನ್ನು ಕಟು ಶಬ್ದಗಳಲ್ಲಿ
ಖಂಡಿಸುತ್ತಿದ್ದಾರೆ. ಜನ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯದಲ್ಲಿ ಭರ್ಜರಿಯಾಗಿ ಚುನಾವಣಾ ಪ್ರಚಾರಕ್ಕಿಳಿದಿರುವ ಭಾರತೀಯ ಜನತಾ ಪಕ್ಷಕ್ಕೆ ಈ ಘಟನೆಯಿಂದ ಭಾರೀ ಹಿನ್ನಡೆಯಾಗಿರೋದು ಸತ್ಯ.
ಕೇಂದ್ರ ನಾಯಕರನ್ನು, ಖುದ್ದು ಪ್ರಧಾನಿ ಮೋದಿಯವರನ್ನೇ ರಾಜ್ಯಕ್ಕೆ ನಾನಾ ಕಾರ್ಯಕ್ರಮಗಳಿಗೆ ಕರೆಸಿ ಪ್ರಚಾರ ನಡೆಸಿ ಪಕ್ಷವನ್ನು ಗೆಲುವಿನತ್ತ ಒಯ್ಯಲು ಸಕಲ ಸಿದ್ಧತೆ ನಡೆಸಿರುವ
ಬಿಜೆಪಿಗೆ (BJP) ಈ ಲೋಕಾ ದಾಳಿ ಗಂಟಲಲ್ಲಿ ಸಿಲುಕಿಕೊಂಡಿರುವ ಕಡುಬಿನಂತಾಗಿದೆ.
ಮನೆ, ಕಚೇರಿಯಲ್ಲಿ 8.12 ನಗದು ವಶ: ಶಾಸಕ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಬರೋಬ್ಬರಿ 6.10 ಕೋಟಿ ರೂ. ನಗದನ್ನು ಲೋಕಾಯುಕ್ತ ಪೊಲೀಸರು ಗುರುವಾರ ತಡರಾತ್ರಿ
ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಅವರ ಖಾಸಗಿ ಕಚೇರಿಯಲ್ಲಿ ಇನ್ನೂ 1.62 ಕೋಟಿ ನಗದು (Lokayukta raid on madal) ವಶಪಡಿಸಿಕೊಳ್ಳಲಾಗಿತ್ತು.
ಬಳಿಕ ಡಾಲರ್ಸ್ ಕಾಲೋನಿಯ ಪ್ರಶಾಂತ್ ಮನೆಯ ಮೇಲೆ ದಾಳಿ ಮಾಡಿ ಲೋಕಾಯುಕ್ತ ಪೊಲೀಸರು ಶೋಧ ನಡೆಸಿದ್ದಾರೆ.
ಪ್ರಶಾಂತ್ ಮಾಡಾಳ್ ವಿರುದ್ಧ ಲೋಕಾಯುಕ್ತ ಪೊಲೀಸರು FIR ದಾಖಲಿಸಿದ್ದಾರೆ. ಕೆಮಿಕಲ್ ಕಾರ್ಪೋರೇಶನ್‌ನ ಶ್ರೇಯಸ್ (Shreyas) ಅವರ ದೂರಿನನ್ವಯ ಪ್ರಶಾಂತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.
ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 7(ಎ)(ಬಿ) ಅಡಿ ಪ್ರಕರಣ ದಾಖಲಿಸಲಾಗಿದೆ. ಒಟ್ಟು ಆರು ಮಂದಿ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದ್ದು ಬಿಜೆಪಿ
ಶಾಸಕ ವಿರೂಪಾಕ್ಷ ಅವರನ್ನು ಎ1 ಹಾಗೂ ಪ್ರಶಾಂತ್ ಮಾಡಾಳ್ ಎ2, ಜಲಮಂಡಳಿ ಲೆಕ್ಕಾಧಿಕಾರಿ ಸುರೇಂದ್ರ ಎ3, ವಿರೂಪಾಕ್ಷ ಸಂಬಂಧಿ ಸಿದ್ದೇಶ್ ಎ4, ಫೀಲ್ಡ್ ವರ್ಕರ್ ಅಲ್ಬಟ್ ನಿಕೋಲ್
ಎ5, ಫೀಲ್ಡ್ ವರ್ಕರ್ ಗಂಗಾಧರ್ ಎ6 ಎಂದು ಗುರುತಿಸಲಾಗಿದೆ.
ಇದನ್ನು ಓದಿ:ಈ ವರ್ಷ ಕರುನಾಡನ್ನು ಕಾಡಲಿದೆ ಅತೀ ಹೆಚ್ಚು ತಾಪಮಾನ ! ಅಪಾಯ ಎದುರಿಸಲು ರೆಡಿಯಾಗಿ
ಕೆಎಸ್‌ಡಿಎಲ್ (KSBL) ಗುತ್ತಿಗೆಗೆ 81 ಲಕ್ಷದ ಬೇಡಿಕೆ: ಕರ್ನಾಟಕ ಸೋಪು ಮತ್ತು ಮಾರ್ಜಕ ಲಿಮಿಟೆಡ್ ಕೆಎಸ್‌ಡಿಎಲ್ ಸಂಸ್ಥೆಯಲ್ಲಿ ಕಚ್ಚಾ ವಸ್ತು ಖರೀದಿ ಟೆಂಡರ್ ಗುತ್ತಿಗೆ ಪಡೆಯಲು ಬೆಂಗಳೂರು ಜಲಮಂಡಳಿಯ ಮುಖ್ಯ
ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಮಾಡಾಳ್ ಒಟ್ಟು 81 ಲಕ್ಷ ರೂಪಾಯಿಯ ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ಆ ಪೈಕಿ 40 ಲಕ್ಷ ರೂಪಾಯಿಯನ್ನು ಗುರುವಾರ ಸಂಜೆ ಕೆಮಿಕಲ್ ಕಾರ್ಪೋರೇಶನ್‌ನ ಶ್ರೇಯಸ್ ಅವರಿಂದ ಸ್ವೀಕರಿಸುವಾಗ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರೋಪಿಗೆ ಲಂಚ ಕೊಡಲು 500 ರೂಪಾಯಿ ಕಂತೆ ಕಂತೆಗಳನ್ನು ಬ್ಯಾಗ್‌ಗಳಲ್ಲಿ, ಚೀಲಗಳಲ್ಲಿ ತುಂಬಿಸಿ ತರಲಾಗಿತ್ತು.
ತನ್ನ ತಂದೆಯ ಪ್ರಭಾವವನ್ನು ಬಳಸಿ ಪ್ರಶಾಂತ್ ಮಾಡಾಳ್ ಅವರು ಈ ಭಾರೀ ಭ್ರಷ್ಟಾಚಾರವನ್ನು ಎಸಗಿದ್ದಾರೆ.