Bengaluru:ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ. ಭ್ರಷ್ಟಾಚಾರದ ಕೂಪ ಅಂತಲೇ ಕುಖ್ಯಾತಿ ಗಳಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ಕೆಎಸ್‌ಡಿಎಲ್ (lokayukta raid)ಗೆ
ಲಗ್ಗೆ ಇಟ್ಟಿರುವ ಲೋಕಾಯುಕ್ತ (Lokayuktha) ಒಂದೊಂದೇ ತಿಮಿಂಗಲನ್ನು ಹಿಡಿದು ಬಲೆಗೆ ಹಾಕುತ್ತಿದ್ದಾರೆ.

ಕೆಎಸ್‌ಡಿಎಲ್ ಅಧ್ಯಕ್ಷ, ಬಿಜೆಪಿಯ ಚೆನ್ನಗಿರಿ ಶಾಸಕ ವಿರೂಪಾಕ್ಷಪ್ಪ(Virupakshappa) ಅವರ ಮಗ ಪ್ರಶಾಂತ್ ಮಾಡಾಳ್ 40 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರಿಗೆ ರೆಡ್‌ಹ್ಯಾಂಡ್ (Redhand)ಆಗಿ
ಸಿಕ್ಕಿಬಿದ್ದ ಬೆನ್ನಲ್ಲೇ, ಕೆಎಸ್‌ಡಿಎಲ್‌ಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹೇಶ್ ಅವರ ಮನೆ ಮೇಲೂ ದಾಳಿ ಮಾಡಿದ್ದಾರೆ.
ನಗರದ ಬಸವನಗುಡಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದಾಳಿದ ಲೋಕಾಯುಕ್ತ ಪೊಲೀಸರು ಸಾಕಷ್ಟು ದಾಖಲೆಗಳನ್ನು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ.
ಇದನ್ನು ಓದಿ: ಕೆಎಸ್ ಡಿಎಲ್ ಅನ್ನೋ ಲಂಚದ ಕೂಪಕ್ಕೆ ಲಗ್ಗೆ ಇಟ್ಟ ಲೋಕಾಯುಕ್ತ: ಎಂ.ಡಿ.ಮನೆ ಮೇಲೂ ಲೋಕಾಯುಕ್ತ ದಾಳಿ
ಇನ್ನು ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್ ಅವರ ಮನೆ (lokayukta raid) ಮೇಲೂ ಲೋಕಾಯುಕ್ತ ಪೊಲೀಸರು ದಾಳಿಮಾಡುವ ಸಾದ್ಯತೆ ಇದೆ.
ವಿರೂಪಾಕ್ಷಪ್ಪ(Virupakshappa) ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇನ್ನೂ ಮೂರು ಕಂಪನಿಗಳು ಈ ಟೆಂಡರ್ ಪಡೆಯಲು 40 ಲಕ್ಷ ಹಣ ತೆಗೆದುಕೊಂಡು ಬಂದಿರುವುದು ಪತ್ತೆಯಾಗಿತ್ತು.
ಹಣವನ್ನು ಖಾಸಗಿ ಕಚೇರಿಗೆ ತಂದು ಕೊಡುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ ಎಲ್ಲರೂ ಹಣ ನೀಡಲು ಖಾಸಗಿ ಕಚೇರಿಯಾದ ಎಂ ಸ್ಟುಡಿಯೋಗೆ ಲಕ್ಷ ಲಕ್ಷ ಹಣ ತಂದಿದ್ದರು.
ಹೀಗೆ ತಂದಿರುವ ಒಟ್ಟು 1 ಕೋಟಿ 62 ಲಕ್ಷ ರೂಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ತಂದೆ ವಿರೂಪಾಕ್ಷಪ್ಪ ಅವರ ಪರವಾಗಿ ಮಗ ಮಾಡಾಳ್ ಪ್ರಶಾಂತ್ (Prashant) ಹಣ ಪಡೆಯಲು ಬಂದಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್’ಗಳಲ್ಲಿ 2 ಸಾವಿರ
ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಮಾಡಾಳ್ ಪ್ರಶಾಂತ್ ಕಚೇರಿ ಕಲೆಕ್ಷನ್ ಸೆಂಟರ್ ಆಗಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿಯಿಂದ ಸುಮಾರು 9 ಗಂಟೆ 30 ನಿಮಿಷಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ. ಸಂಜಯನಗರ ಬಳಿ ಇರುವ ಶಾಸಕ
ಮಾಡಾಳ್ ವಿರೂಪಾಕ್ಷಪ್ಪ ಒಡೆತನದ ಕೆ.ಎಂ.ವಿ ಮಾನ್ಷಿಯನ್ ನಿವಾಸದಲ್ಲಿ ಡಿವೈ ಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ. ಹಣದ ಬ್ಯಾಗ್’ಗಳು ಪತ್ತೆ:
2008ರಲ್ಲಿ ತಂದೆಯ ಆದಾಯ ಕೇವಲ 1.2 ಲಕ್ಷ ರೂ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿಕೊಂಡು ಪ್ರಶಾಂತ್ ಮಾಡಾಳ್ ಕೆಎಎಸ್‌ನಲ್ಲಿ ತೇರ್ಗಡೆ ಆಗಿದ್ದ. ಮಾಡಾಳ್ ವಿರೂಪಾಕ್ಷಪ್ಪಗೆ ಮೂವರು ಗಂಡು ಮಕ್ಕಳಿದ್ದು,
ಈ ಪೈಕಿ ಪ್ರಶಾಂತ್ ಎರಡನೇ ಪುತ್ರ.