- RTO ರಿಂದ PWD ವರೆಗೆ–ಹಲವಾರು ಇಲಾಖೆಗಳ (Lokayukta raids in 10 districts ) ಅಧಿಕಾರಿಗಳ ಮೇಲೆ ಲೋಕಾಯುಕ್ತದ ಹದ್ದಿನ ಕಣ್ಣು
- ಅಕ್ರಮ ಆಸ್ತಿ ಆರೋಪದ ಮೇಲೆ 11 ಅಧಿಕಾರಿಗಳ ಮನೆ–ಕಚೇರಿಗಳಲ್ಲಿ ತಪಾಸಣೆ
- ಧಾರವಾಡದ ನಾಟೀಕರ್ ಮನೆ ಮೇಲೆ ರೇಡ್: ಕುಲಸಚಿವರ ಅಧಿಕಾರ ಸ್ವೀಕಾರಕ್ಕೂ ಮುನ್ನ ಶಾಕ್
Bengalore: ಕರ್ನಾಟಕದಲ್ಲಿ ಭ್ರಷ್ಟಾಚಾರ ನಿರೋಧನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ (Lokayukta raids in 10 districts ) ಲೋಕಾಯುಕ್ತ ಇಲಾಖೆ ಇಂದು ಮತ್ತೊಂದು ಮಹತ್ವದ ರೇಡ್ ನಡೆಸಿದೆ.
ಬೆಂಗಳೂರು, ಮಂಡ್ಯ, ಹಾವೇರಿ ಸೇರಿದಂತೆ 10 ಜಿಲ್ಲೆಗಳಲ್ಲಿ ಬೆಳಗ್ಗಿನ ಜಾವ ಏಕಕಾಲದಲ್ಲಿ ದಾಳಿ ನಡೆದಿದ್ದು, 11 ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪಗಳ ಹಿನ್ನೆಲೆಯಲ್ಲಿ RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ, ಮಂಡ್ಯದ ನಗರ ಪಾಲಿಕೆ CAO ಪುಟ್ಟಸ್ವಾಮಿ ಮತ್ತು ಬೀದರ್ನ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳ ಮನೆಗೆ ರೇಡ್ ಮಾಡಲಾಗಿದೆ.
ಇನ್ನು ಬೀದರ್ ಜಿಲ್ಲೆಯಲ್ಲಿ ಪ್ರೇಮ್ ಸಿಂಗ್ ರಾಥೋಡ್ ಅವರ ವಸತಿ ಮತ್ತು ಕಚೇರಿಗಳ (Lokayukta raids in 10 districts ) ಮೇಲೆ ಲೋಕಾಯುಕ್ತ DYSP ಹನುಮಂತರಾಯ್ ನೇತೃತ್ವದ ತಂಡ ತಪಾಸಣೆ ನಡೆಸಿತು.
ಯಾದಗಿರಿಯ ಶಹಾಪುರ ತಾಲೂಕಿನ ಭೀಮರಾಯನ ಗುಡಿಯಲ್ಲಿಯೂ ಅಧಿಕಾರಿಯ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.
ಶಿವಮೊಗ್ಗದಲ್ಲಿ ಮೆಡಿಕಲ್ ಕಾಲೇಜಿನ ಡೀನ್ ಅವರ ಸ್ಟೇನೋ ಮನೆ ಮೇಲೆ ಲೋಕಾಯುಕ್ತ SP ಮಂಜುನಾಥ್ ಚೌಧರಿ ನೇತೃತ್ವದ ದಾಳಿ ನಡೆಯಿತು.
ಕೊಡಗು, ಮಡಿಕೇರಿ ಹಾಗೂ ಮೈಸೂರಿನಲ್ಲೂ ಲೋಕಾಯುಕ್ತ ತಂಡಗಳು ಅಧಿಕಾರಿಗಳ ಆಸ್ತಿಪಾಸ್ತಿಗಳ ಪರಿಶೀಲನೆ ನಡೆಸಿ ಅನಧಿಕೃತ ಸಂಪಾದನೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ದೆಾವಣಗೆರೆ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳನ್ನೂ ಒಳಗೊಂಡ ಈ ರೇಡ್ ಭ್ರಷ್ಟ ಅಧಿಕಾರಿಗಳಿಗೆ ಆತಂಕದ ವಾತಾವರಣ ಸೃಷ್ಟಿಸಿದೆ.
ದಾವಣಗೆರೆ APMC ಸಹಾಯಕ ನಿರ್ದೇಶಕ ಪ್ರಭು ಅವರ ಮನೆ ಮತ್ತು ಸಂಬಂಧಿಕರ ಮನೆಗಳನ್ನೂ ಪರಿಶೀಲಿಸಲಾಯಿತು.
ಹಾವೇರಿ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಶೇಖಪ್ಪ ಮತ್ತಿಕಟ್ಟಿ ಅವರ ನಿವಾಸ, ಧಾರವಾಡದ ಪ್ರೊ. ಸುಭಾಷ್ಚಂದ್ರ ಅವರ ಮನೆ ಹಾಗೂ ಮೈಸೂರಿನ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಸ್ವಾಮಿ ಅವರ ಮನೆಗಳಲ್ಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲವಾರು ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ತಂಡಗಳು ತನಿಖೆಗೆ ಪಡೆದುಕೊಂಡಿವೆ.
ಈ ದಾಳಿಯ ಪ್ರಮುಖ ಭಾಗವಾಗಿದ್ದು ಧಾರವಾಡದ ಕವಿವಿ ಅಂಬೇಡ್ಕರ್ ಸ್ಟಡೀಸ್ ಸಂಯೋಜಕ ನಾಟೀಕರ್ ಅವರ ಮನೆಯ ಮೇಲೆ ನಡೆದ ದಾಳಿ.
ಯಾಲಕ್ಕಿ ಶೆಟ್ಟರ್ ಕಾಲನಿ, ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ, ಅಂಬೇಡ್ಕರ್ ಸ್ಟಡೀಸ್ ಕಚೇರಿ, ಕೊಪ್ಪಳದ ಮನೆ ಹಾಗೂ ವಿಜಯಪುರದ ತಾಳಿಕೋಟೆಯಲ್ಲಿರುವ ನಾಟೀಕರ್ ಅವರ ಸ್ವಂತ ಮನೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ವಿಶೇಷವೆಂದರೆ ಅವರು ಇದೇ ದಿನ ಮೌಲ್ಯಮಾಪನ ಕುಲಸಚಿವರಾಗಿ ಅಧಿಕಾರ ವಹಿಸಿಕೊಳ್ಳಬೇಕಾಗಿತ್ತು.
ಆದರೆ ಬೆಳಗ್ಗೆ ನಡೆದ ರೇಡ್ ಅವರ ಅಧಿಕಾರ ಸ್ವೀಕಾರದ ಮೇಲೆ ನೇರ ಪರಿಣಾಮ ಬೀರಿದೆ.
ಇದನ್ನು ಓದಿ : ಕರ್ತವ್ಯದ ವೇಳೆ ಸಮವಸ್ತ್ರ ಮತ್ತು ಗುರುತಿನ ಚೀಟಿ ಕಡ್ಡಾಯ : ಸರ್ಕಾರಿ ಚಾಲಕರು ಹಾಗೂ ಗ್ರೂಪ್ ಡಿ ನೌಕರರಿಗೆ ಕರ್ನಾಟಕ ಸರ್ಕಾರದ ಹೊಸ ಆದೇಶ