
Florida: ಆಫೀಸ್ ಗೆ ಹೋಗುವಾಗ ಕೆಲವೊಮ್ಮೆ ತಡವಾಗುವುದು ಸಹಜ. ಯಾವುದೇ ಕೆಲಸವಾಗಲಿ, ಸಮಯ ಪಾಲನೆ ಬಹಳ ಮುಖ್ಯವಾಗುತ್ತದೆ. ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ತಡವಾಗಿ ಹೋಗುವ ಪರಿಸ್ಥಿತಿ ಬರುತ್ತದೆ.
ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ತಡವಾಗಿ (late) ಆಫೀಸಿಗೆ (office)ಬರಬಹುದು. ಆದರೆ ಪ್ರತಿದಿನ ಯಾರಾದರೂ ತಡವಾಗಿ ಬರುತ್ತಿದ್ದರೆ ಬಾಸ್ ಅಥವಾ ಹಿರಿಯ ಅಧಿಕಾರಿಗಳು ಅಸಮಾಧಾನಗೊಳ್ಳುವುದು ಖಂಡಿತ.
https://vijayatimes.com/bjp-congress-sarcasm-with-each-other/
ಆದರೆ ತನ್ನ ಕಾರ್ಯಾವಧಿಯಲ್ಲಿ ಕೇವಲ ಒಂದೇ ಒಂದು ಬಾರಿ ತಡವಾಗಿ ಆಫೀಸ್ ಗೆ ಬಂದದ್ದಕ್ಕೆ, ನೌಕರನನ್ನು (employee)ವಜಾಗೊಳಿಸಿದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.
ಹೌದು, ಬರೋಬ್ಬರಿ 7 ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ ಮೊತ್ತ ಮೊದಲ (first time)ಬಾರಿಗೆ, ವ್ಯಕ್ತಿಯೊಬ್ಬರು 20 ನಿಮಿಷ ತಡವಾಗಿ ಕಚೇರಿಗೆ ಬಂದಿದ್ದಾರೆ. ಈ ತಪ್ಪಿಗಾಗಿ ಕಂಪನಿಯು ಅವರನ್ನು ಉದ್ಯೋಗದಿಂದ ವಜಾಗೊಳಿಸಿದೆ.
ಇದರಿಂದ ಕೋಪಗೊಂಡ ಇತರ ಉದ್ಯೋಗಿಗಳು, ಆ ವ್ಯಕ್ತಿಯನ್ನು ಪುನಃ ಕೆಲಸಕ್ಕೆ (work)ಸೇರಿಸುವಂತೆ ಆಗ್ರಹಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ವಜಾಗೊಂಡ ವ್ಯಕ್ತಿಗೆ ಕೆಲಸವನ್ನು ನೀಡುವಂತೆ ಇತರ ಉದ್ಯೋಗಿಗಳು ಆಗ್ರಹಿಸಿದ್ದಾರೆ. https://vijayatimes.com/bjp-congress-sarcasm-with-each-other/
‘ನೋ ಸ್ಟಾಪ್ ಇಟ್ ಸ್ಟೆಪ್ ಬ್ರೋ’ ಹೆಸರಿನ ಬಳಕೆದಾರನೊಬ್ಬ, ಸೋಮವಾರ ರೆಡ್ಡಿಟ್‌ನ ‘ಆಂಟಿವರ್ಕ್ ಫೋರಂ’ ನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟನ್ನು ಬರೆದಿದ್ದಾರೆ.
ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದುವರೆಗೆ 78 ಸಾವಿರಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಮತ್ತು 4 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದೆ.
ಈ ಪೋಸ್ಟ್ ನ ವಿವರಣೆ ಹೀಗಿದೆ, “ನಮ್ಮ ಸಹೋದ್ಯೋಗಿಯೊಬ್ಬರು 7 ವರ್ಷಗಳಲ್ಲಿ ಒಮ್ಮೆಯೂ ತಡವಾಗಿ ಬಂದಿಲ್ಲ. ಮೊತ್ತ ಮೊದಲ ಬಾರಿಗೆ ತಡವಾಗಿ ಬಂದಿದ್ದಕ್ಕಾಗಿ ಅವರನ್ನು ವಜಾ ಮಾಡಲಾಗಿದೆ.

ಇದು ಕಳೆದ ವಾರ ನಡೆದಿತ್ತು. ಸೋಮವಾರದ ದಿನ 20 ನಿಮಿಷ (20 minutes)ತಡವಾಗಿ ಬಂದಿದ್ದಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಾಳೆ ನಾನು ಮತ್ತು ನನ್ನ ಉಳಿದ ಸಹೋದ್ಯೋಗಿಗಳು ತಡವಾಗಿ ಬರುತ್ತೇವೆ, ಮತ್ತು ವಜಾಗೊಂಡ ಸಹೋದ್ಯೋಗಿ ಮತ್ತೆ ನೇಮಕಗೊಳ್ಳುವವರೆಗೂ ನಾವು ತಡವಾಗಿ ಬರುತ್ತೇವೆ” ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್ ನ ಬಗ್ಗೆ, ನೂರಾರು ಬಳಕೆದಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು, ಕೇವಲ 20 ನಿಮಿಷಗಳ ವಿಳಂಬದ ಕಾರಣದಿಂದ ವಜಾ ಮಾಡುವುದು ಸರಿಯಲ್ಲ ಎಂದು ಹೇಳಿದರು.
ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ತಡವಾಗಿದ್ದಕ್ಕೆ ವಜಾ ಮಾಡಿದ್ದು ತಪ್ಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಕೆಲವು ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
“ನಾವು ತಡವಾಗಿ ಬಂದಾಗ ಎಚ್ಚರಿಕೆ ನೀಡುತ್ತಾರೆ, ಪದೇ ಪದೇ ಇದು ಪುನರಾವರ್ತನೆಯಾದರೆ ಸಂಬಳ ಕಡಿತವಾಗುತ್ತಿತ್ತು. ಆದರೆ ಕೆಲಸದಿಂದ ವಜಾ ಮಾಡುವುದು ಸರಿಯಲ್ಲ” ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಪವಿತ್ರ