• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಪವರ್ ಸ್ಟಾರ್ ಕೈಗಳಲ್ಲಿ ‘ಲವ್ ಬರ್ಡ್ಸ್’!

Preetham Kumar P by Preetham Kumar P
in ಮನರಂಜನೆ
ಪವರ್ ಸ್ಟಾರ್ ಕೈಗಳಲ್ಲಿ ‘ಲವ್ ಬರ್ಡ್ಸ್’!
0
SHARES
0
VIEWS
Share on FacebookShare on Twitter

ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಚಂದ್ರು ಕಡ್ಡಿಪುಡಿ ನಿರ್ಮಿಸಿ ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ ಚಿತ್ರ ‘ಲವ್ ಬರ್ಡ್ಸ್’ನ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಪಿ.ಸಿ.ಶೇಖರ್ ನನಗೆ ಹೇಳಿದ ಕಥೆ ನನಗೆ ಇಷ್ಟವಾಯಿತು. ಕಥೆ ಕೇಳಿದ ಕೆಲವೇ ದಿನಗಳಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸುತ್ತಿದ್ದಾರೆ. ಮತ್ತೊಬ್ಬ ನಾಯಕಿ ಇರುತ್ತಾರೆ. ಯಾರೆಂಬುದು ಇಷ್ಟರಲ್ಲೇ ತಿಳಿಯಲಿದೆ. ಸಾಧುಕೋಕಿಲ, ತಾರಾ, ಅವಿನಾಶ್, ರಂಗಾಯಣ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ ಎಂದರು ನಿರ್ಮಾಪಕ ಚಂದ್ರು ಕಡ್ಡಿಪುಡಿ.

ಮೊದಲು ನಿರ್ಮಾಪಕ ಚಂದ್ರು ಅವರಿಗೆ ಕಥೆ ಹೇಳಿದೆ. ಇಷ್ಟಪಟ್ಟರು. ರೋಮಿಯೋ ಚಿತ್ರದ ನಂತರ ಲವ್ ಸಬ್ಜೆಕ್ಟ್ ಕಥೆ ಸಿದ್ದ ಮಾಡಿಕೊಂಡಿದ್ದೇನೆ. ಈ ಕಥೆಗೆ ಡಾರ್ಲಿಂಗ್ ಕೃಷ್ಣ ಅವರೆ ಸೂಕ್ತ ನಾಯಕ ಅನಿಸಿತು. ಆಶಿಕಾ ರಂಗನಾಥ್ ಈ ಚಿತ್ರದ ನಾಯಕಿ. ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ಅರ್ಜುನ್ ಜನ್ಯ ಅವರ ರಾಗ ಸಂಯೋಜನೆಯಲ್ಲಿ ಉತ್ತಮ ಹಾಡುಗಳು ಮೂಡಿಬರತ್ತದೆ. ಎರಡು, ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲ ಹಂತ ಬೆಂಗಳೂರಿನಲ್ಲಿ ನಡೆದರೆ, ಮುಂದಿನ ಹಂತದ ಚಿತ್ರೀಕರಣ ಮಂಡ್ಯ ಮುಂತಾದ ಕಡೆ ನಡೆಯಲಿದೆ ಎಂದರು ನಿರ್ದೇಶಕ ಪಿ.ಸಿ.ಶೇಖರ್.

ನಾನು ಜಾಕಿ ಚಿತ್ರದ ಸಮಯದಿಂದಲೂ ಕಡ್ಡಿಪುಡಿ ಚಂದ್ರು ಅವರನ್ನು ಬಲ್ಲೆ. ಒಟ್ಟಾಗಿ ಅಭಿನಯ ಕೂಡ ಮಾಡಿದ್ದೇವೆ. ಆಗ ಅವರು ಒಂದು ಚಿತ್ರ ಮಾಡೋಣ ಅನ್ನುತ್ತಿದ್ದರು. ಈಗ ಸಮಯ ಕೂಡಿ ಬಂದಿದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನಗೆ ಅವರ ನಿರ್ದೇಶನದ ‘ರೋಮಿಯೋ’ ಮೆಚ್ಚುಗೆಯ ಚಿತ್ರ. ನಿರ್ದೇಶಕರು ಹೇಳಿದಂತೆ ಇದೊಂದು ಕಾರ್ಪೊರೇಟ್ ಶೈಲಿಯ ಚಿತ್ರ. ನನ್ನದು ಸಾಫ್ಟ್ ವೇರ್ ಎಂಜಿನಿಯರ್ ಪಾತ್ರ ಎಂದು ಡಾರ್ಲಿಂಗ್ ಕೃಷ್ಣ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ಚಿತ್ರದಲ್ಲಿ ಅಭಿನಯಿಸುತ್ತಿರುವ ಹಿರಿಯ ನಟ ರಂಗಾಯಣ ರಘು ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಮುಹೂರ್ತದ ದೃಶ್ಯಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಕ್ಯಾಮೆರಾ ಚಾಲನೆ ಮಾಡಿದರು. ಪ್ರಜ್ವಲ್ ದೇವರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

Related News

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!
ದೇಶ-ವಿದೇಶ

‘ಜವಾನ್’ ಅಬ್ಬರ: ವಿಶ್ವಾದ್ಯಂತ ತೆರೆಯ ಮೇಲೆ ‘ಜವಾನ್‌’, ದಾಖಲೆ ಬರೆಯಲು ಶಾರುಖ್ ಖಾನ್‌ ರೆಡಿ!

September 8, 2023
ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ
ಪ್ರಮುಖ ಸುದ್ದಿ

ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

September 7, 2023
ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ
Vijaya Time

ರಮ್ಯಾ ಆಘಾತ: ರಮ್ಯಾಗೆ ಹೃದಯಾಘಾತ ಸುದ್ದಿ ವೈರಲ್ ! ಈ ಸುದ್ದಿ ಸುಳ್ಳಾಗಿದ್ದು ಯೂರೋಪ್ ಪ್ರವಾಸದಲ್ಲಿ ರಮ್ಯಾ

September 6, 2023
ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!
ಪ್ರಮುಖ ಸುದ್ದಿ

ನಟ ಶಾರುಖ್ ಖಾನ್ ನಿವಾಸ ʼಮನ್ನತ್ʼ ಮುಂದೆ ಭಾರೀ ಪ್ರತಿಭಟನೆ ; ಕಾರಣವೇನು..?!

August 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.