• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

6 ಸಲ ಸೋತರು, 60 ಸಲ ಸೋತರು ಆರ್.ಸಿ.ಬಿ ನೇ ; ಈ ಸಲ ಚೆನೈ ತಂಡವನ್ನು ಹಿಂದಿಕ್ಕಿ ಹೇಳುತ್ತೀವಿ ‘ಈ ಸಲ ಕಪ್ ನಮ್ದೇ’!

Mohan Shetty by Mohan Shetty
in Sports, ಮನರಂಜನೆ
6 ಸಲ ಸೋತರು, 60 ಸಲ ಸೋತರು ಆರ್.ಸಿ.ಬಿ ನೇ ; ಈ ಸಲ ಚೆನೈ ತಂಡವನ್ನು ಹಿಂದಿಕ್ಕಿ ಹೇಳುತ್ತೀವಿ ‘ಈ ಸಲ ಕಪ್ ನಮ್ದೇ’!
0
SHARES
0
VIEWS
Share on FacebookShare on Twitter

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಐಪಿಎಲ್ ಕ್ರಿಕೆಟ್ ಟೂರ್ನಿಗಿರುವ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಸೇರುವ ಜನಸಾಗರದಷ್ಟೇ ಈ ಪಂದ್ಯಗಳಿಗೆ ಸೇರುತ್ತಾರೆ.

ಆದರೆ ಅದಕ್ಕಿಂತ ಹೆಚ್ಚಾಗಿ ಐಪಿಎಲ್ ತಂಡಗಳಲ್ಲಿ ಎರಡು ವಿಶೇಷ ತಂಡಗಳಿಗೆ ಮಾತ್ರ ಜನಸಾಗರವೇ ಅಬ್ಬರಿಸಿ, ಕಿಕ್ಕಿರಿದ್ದು ಸೇರುತ್ತಾರೆ. ಕಿರುಚಿ ಧೂಳೆಬ್ಬಿಸುತ್ತಾರೆ! ಆ ಎರಡು ತಂಡಗಳು ಪೈಪೋಟಿಗೆ ನಿಂತು ಅಖಾಡಕ್ಕೆ ಬಂದರೆ ಸಾಕು ಅಭಿಮಾನಿಗಳು ರೊಚ್ಚಿಗೇಳುವುದಂತೂ ಅಕ್ಷರಶಃ ಸತ್ಯ. ಆ ಎರಡು ತಂಡಗಳಲ್ಲಿ ಒಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಚೆನೈ ಸೂಪರ್ ಕಿಂಗ್ಸ್ ತಂಡಗಳು.

dhoni

ಇಡೀ ಐಪಿಎಲ್ ಲೀಗ್ ಪಂದ್ಯಗಳಲ್ಲಿ ಯಾವ ತಂಡಗಳು ಸೆಣಸಾಟಕ್ಕೆ ನಿಂತರು ಅಭಿಮಾನಿಗಳು ಅಷ್ಟು ಸಂತಸದಿಂದ, ಅಷ್ಟು ಉತ್ಸಾಹದಿಂದ ಇರುವುದಿಲ್ಲ. ಆದರೆ ಅದೇ ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಂಡಗಳು ಮುಖಾಮುಖಿಯಾಗಿ ಅಖಾಡಕ್ಕೆ ಇಳಿದರೆ ಸಾಕು ಅವತ್ತು ಮೊದಲು ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಪಂದ್ಯ ಮುಗಿಯುವವರೆಗೂ ಕುಳಿತಿರುವ ಜಾಗದಿಂದ ತುತ್ತ ತುದಿಯವರೆಗೂ ಬಂದರೂ ಜಾರುವುದಿಲ್ಲ. ಅಷ್ಟು ಗಟ್ಟಿಯಾಗಿ ಬೇರೂರಿ ಪಂದ್ಯ ವೀಕ್ಷಿಸುತ್ತಾರೆ ಅಭಿಮಾನಿಗಳು. ಪಂದ್ಯ ಮುಗಿಯುವವರೆಗೂ ಊಟವೂ ಮಾಡುವುದಿಲ್ಲ, ನಿದ್ದೆಯೂ ಮಾಡುವುದಿಲ್ಲ. ಇಂಥ ಪಕ್ಕ ಅಭಿಮಾನಿಗಳನ್ನು ಪಡೆದಿರುವುದು ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡಗಳು ಮಾತ್ರ.

rcb

ಈ ಎರಡು ತಂಡಗಳ ನಡುವೆ ಇರುವುದು ಕೇವಲ ಸೆಣಸಾಟವಲ್ಲ, ಅದು ಒಂದು ರೀತಿಯ ವೈರತ್ವ ಎಂದೇ ಹೇಳಬಹುದು. ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಸಿ.ಎಸ್.ಕೆ ತಂಡ ಕಂಡರೆ ಆರ್.ಸಿ.ಬಿ ಅಭಿಮಾನಿಗಳಿಗೆ ಕೆಂಡಾಮಂಡಲ! ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಇಷ್ಟಪಡುತ್ತಾರೆ ವಿನಃ ಸಿ.ಎಸ್.ಕೆ ತಂಡವನ್ನಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಕಳೆದ 14 ವರ್ಷಗಳಿಂದ ಐಪಿಎಲ್ ಸೀಸನ್ ಗಳು ಯಶಸ್ವಿಯಾಗಿ ನಡೆದುಕೊಂಡು ಬಂದಿವೆ.

ಅವತ್ತಿನ ದಿನದಿಂದ ಇವತ್ತಿನವರೆಗೂ ಕೂಡ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ಅಭಿಮಾನಿಗಳು ತಮ್ಮ ವೈರತ್ವವನ್ನು ಹಾಗೆಯೇ ಸಾಗಿಸಿಕೊಂಡು ಬಂದಿದ್ದಾರೆ. ಇದು ಅಶ್ಚರ್ಯ ಪಡುವ ಸಂಗತಿಯಂತು ಅಲ್ಲವೇ ಅಲ್ಲ ಬಿಡಿ. ಈ ಎರಡು ತಂಡಗಳು ಮುಖಾಮುಖಿಯಾಗಿ ಬಂದರೆ ಸಾಕು ಆರ್.ಸಿ.ಬಿ ತಂಡದ ಅಭಿಮಾನಿಗಳು ಪಂದ್ಯ ಪ್ರಾರಂಭವಾಗುವ ಮುನ್ನವೇ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ಪ್ರಸಾದ ತೆಗೆದುಕೊಂಡು ಬರುತ್ತಾರೆ.

rcb fans

ಪಂದ್ಯ ನಮ್ಮವರು ಗೆಲ್ಲಲಿ ಎಂದು ಕಾದು ಕೂರುತ್ತಾರೆ. ಗೆದ್ದರೇ ವಿಜೃಂಭಣೆಯಿಂದ ಹಬ್ಬದಂತೆ ಸಂಭ್ರಮಿಸುತ್ತಾರೆ. ಅದೇ ಸೋತರೇ ಹ್ಯಾಪೇ ಮೊರೆ ಹಾಕಿಕೊಂಡು, ಊಟ ಮಾಡದೇ ಮಲಗುತ್ತಾರೆ ಅಂಥ ಕಟ್ಟ ಅಭಿಮಾನಿಗಳು ಆರ್.ಸಿ.ಬಿ ತಂಡಕ್ಕೆ ಇದ್ದಾರೆ ಎಂಬುದು ಒಂದು ಮುಖ್ಯ ವಿಷಯ! ಈ ಅಂಶವನ್ನು ಗುರುತಿಸಿ ಕ್ರಿಕೆಟ್ ಸಂಸ್ಥೆಯೆ ವರದಿಯಲ್ಲಿ ತಿಳಿಸಿದೆ ಆರ್.ಸಿ.ಬಿ ತಂಡಕ್ಕಿರುವ ದೊಡ್ಡ ಅಭಿಮಾನಿಗಳ ದಂಡು ಯಾವ ತಂಡಗಳಿಗೂ ಇಲ್ಲ ಎಂಬುದನ್ನು. ಆದರೆ ಒಂದು ವಿಷಯ ಆರ್.ಸಿ.ಬಿ ತಂಡದ ಅಭಿಮಾನಿಗಳಿಗೆ ಇರುವ ಬೇಸರ ನಾವು ಒಮ್ಮೆಯೂ ಕೂಡ ಐಪಿಎಲ್ ಕಪ್ ಗೆದ್ದಿಲ್ಲ ಎಂಬುದು. ಆದರೂ ಕೂಡ ಪ್ರತಿ ವರ್ಷ ಐಪಿಎಲ್ ಶುರುವಾಗುವ ಮುನ್ನ ನಾವು ಈ ಬಾರಿ ಕಪ್ ಗೆಲ್ಲುತ್ತೇವೆ ಎಂಬ ಆಶಯ ಹೊಂದಿರುತ್ತಾರೆ. ಆದರೆ ಗೊತ್ತಿಲ್ಲದಂತೆ ಟೂರ್ನಿಯಿಂದ ಹೊರೆಗೆ ನಡೆದಿರುತ್ತಾರೆ. ಸೋತರೂ ಕೂಡ ಈ ಬಾರಿ ಕಪ್ ನಮ್ದೇ ಎಂದು ಘೋಷಣೆ ಕೂಗುತ್ತಾರೆ. ಇದು ಆರ್.ಸಿ.ಬಿ ತಂಡದ ಅಭಿಮಾನಿಗಳ ನಿಷ್ಠೆ, ಪ್ರತಿಜ್ಞೆ, ಪಾಲನೆಯಾಗಿದೆ. ಇಷ್ಟು ವರ್ಷದ ಆರ್.ಸಿ.ಬಿ ಮತ್ತು ಸಿ.ಎಸ್.ಕೆ ತಂಡಗಳ ಸೆಣಸಾಟದಲ್ಲಿ ಲಭ್ಯವಾಗಿರುವ ವಿವರ ಹೀಗಿದೆ.

captains

ಎರಡೂ ಫ್ರಾಂಚೈಸಿಗಳ ನಾಯಕರಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಗಳನ್ನು ಮುನ್ನಡೆಸಿದ್ದಾರೆ. ನಾಯಕತ್ವದ ಜೊತೆಗೆ, ಎಂ.ಎ.ಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರನ್ನೂ ಭಾರತ ನಿರ್ಮಿಸಿದ ಅತ್ಯುತ್ತಮ ಪ್ರತಿಭೆಗಳೆಂದು ಪರಿಗಣಿಸಲಾಗಿದೆ. ಇಬ್ಬರೂ ನಾಯಕರ ನಾಯಕತ್ವದ ದಾಖಲೆಗಳು ಹೆಚ್ಚು ಗಮನಾರ್ಹವಾಗಿದೆ. ಇವರಿಬ್ಬರೂ ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರೆಂದು ಪರಿಗಣಿಸಲ್ಪಟ್ಟಿದೆ ಮತ್ತು ಪಂದ್ಯಗಳ ನಡುವೆ ಪೈಪೋಟಿಯನ್ನು ಇನ್ನಷ್ಟು ರೋಮಾಂಚನಗೊಳಿಸುತ್ತದೆ. ಈ ಎರಡು ತಂಡಗಳ ನಡುವಿನ ಕೆಲವು ಪ್ರಸಿದ್ಧ ಮುಖಾಮುಖಿಗಳು ಇಲ್ಲಿವೆ ಮುಂದೆ ಓದಿ.

ipl

4ನೇ ಆವೃತ್ತಿಯ ಐಪಿಎಲ್ : ಅಂಕಪಟ್ಟಿಯಲ್ಲಿ RCB ಮತ್ತು CSK ಕ್ರಮವಾಗಿ 1 ಮತ್ತು 2ನೇ ಸ್ಥಾನದಲ್ಲಿ ಮುಕ್ತಾಯವಾಯಿತು. ಮೊದಲ ಲೀಗ್ ನ ಕ್ವಾಲಿಫೈಯರ್ ಪಂದ್ಯದಲ್ಲಿ CSK ಮೇಲೆ ಹೆಚ್ಚಿನ ಒತ್ತಡವನ್ನು ಹೇರಿತ್ತು. ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುವುದರೊಂದಿಗೆ, ವಿರಾಟ್ ಕೊಹ್ಲಿ ನೇತೃತ್ವದ 70 ರನ್ಗಳ ಇನ್ನಿಂಗ್ಸ್ ಮತ್ತು ಪೊಮರ್ಸ್ಬ್ಯಾಕ್ ಅವರ ಪ್ರದರ್ಶನವೂ ಆರ್ಸಿಬಿಯನ್ನು 175 ಕ್ಕೆ ಕೊಂಡೊಯ್ದಿತು. 2ನೇ ಇನ್ನಿಂಗ್ಸ್ನಲ್ಲಿ ಸಿಎಸ್ಕೆ ಆರಂಭಿಕರು ಬೇಗನೆ ಔಟಾಗಿದ್ದರು. ಆದರೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸುರೇಶ್ ರೈನಾ ಅವರ 73 ರನ್ ಮತ್ತು ಅಲ್ಬಿ ಮಾರ್ಕೆಲ್ ಅವರ 10 ಎಸೆತಗಳಲ್ಲಿ 3 ಸಿಕ್ಸರ್ಗಳನ್ನು ಒಳಗೊಂಡ 23 ರನ್ ಗಳಿಸಿ ಸಿಎಸ್ಕೆಗೆ ಫೈನಲ್ನಲ್ಲಿ ಸ್ಥಾನವನ್ನು ಖಚಿತಪಡಿಸಿತು. ಇದು ಉಭಯ ತಂಡಗಳ ನಡುವಿನ ಪೈಪೋಟಿಗೆ ನಾಂದಿ ಹಾಡಿತ್ತು. ಕ್ವಾಲಿಫೈಯರ್ 1 ಮತ್ತು ಫೈನಲ್ನಲ್ಲಿ CSK ಗೆ ಸೋತ ನಂತರ, ಇದು ಐಪಿಎಲ್ನ 5ನೇ ಆವೃತ್ತಿಯಲ್ಲಿ ಅವರ ಮೊದಲ ಮುಖಾಮುಖಿಯಾಗಿತ್ತು.

chennai

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಯುವ ಆಟಗಾರ ಮಯಾಂಕ್ ಅಗರ್ವಾಲ್ 51 ರನ್ ಗಳಿಸಿದರು ಮತ್ತು ವಿರಾಟ್ ಕೊಹ್ಲಿ ಮತ್ತು ಗೇಲ್ ಅವರ 105 ರನ್ಗಳ ಜೊತೆಯಾಟವು ತಂಡವನ್ನು ಒಟ್ಟು 105 ರನ್ಗಳಿಗೆ ಮುನ್ನಡೆಸಿತು. ಚೆನ್ನೈನಲ್ಲಿ ನಡೆದ ಬಿಗುವಿನ ಪಂದ್ಯದ ದಿನದಂದು ಕ್ಯಾಪ್ಟನ್ ಕೂಲ್ ಜೊತೆಗೆ ಫಾಫ್ ಡು ಪ್ಲೆಸಿಸ್ ನೇತೃತ್ವದಲ್ಲಿ ಸಿಎಸ್ಕೆ ದಾಳಿ ನಡೆಸಿತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ವಿರಾಟ್ ಅವರ ಅಂತಿಮ ಓವರ್ನಲ್ಲಿ ಆಲ್ಬಿ ಮಾರ್ಕೆಲ್ 28 ರನ್ ಗಳಿಸಿ ಐಪಿಎಲ್ ಕಿಂಗ್ ಆಗಿ ಗೆಲುವನ್ನು ಮುಡಿಗೇರಿಸಿಕೊಂಡರು. ಅಂತಿಮ ಓವರ್ನಲ್ಲಿ, ಡಿಜೆ ಬ್ರಾವೋ ಸಿಕ್ಸರ್ನೊಂದಿಗೆ ಹಾರಿದರು ಮತ್ತು ಕೊನೆಯ ಎಸೆತದಲ್ಲಿ ರವೀಂದ್ರ ಜಡೇಜಾ ಅವರ 2 ರನ್ ಆತಿಥೇಯ ತಂಡಕ್ಕೆ ಜಯವನ್ನು ಖಚಿತಪಡಿಸಿತು.

dhoni

2013 :
6 ನೇ ಐಪಿಎಲ್ ಆವೃತ್ತಿಯ 16 ನೇ ಪಂದ್ಯವು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯ ಕ್ರಿಕೆಟ್ ಚೇಸಿಂಗ್ಗಳಲ್ಲಿ ಒಂದಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ 165 ರನ್ಗಳ ಯೋಗ್ಯ ಮೊತ್ತವನ್ನು ಕಲೆ ಹಾಕಿತು. ವಿರಾಟ್ ಮತ್ತು ಡಿ ವಿಲಿಯರ್ಸ್ ಒಟ್ಟು 122 ರನ್ ಕೊಡುಗೆ ನೀಡಿದರು ಮತ್ತು ಕ್ರಿಸ್ ಮೋರಿಸ್ 3 ವಿಕೆಟ್ ಪಡೆದರು. ಎರಡನೇ ಇನಿಂಗ್ಸ್ ಕೂಡ ನಿಧಾನಗತಿಯಲ್ಲಿ ಸಾಗಿತ್ತು. ಮಧ್ಯಮ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ಗಳು ತಮ್ಮ 30ರ ದಶಕದಲ್ಲಿ ರನ್ ಗಳಿಸಿದರು. ಕೊನೆಯ ಎರಡು ಎಸೆತಗಳಿಗೆ ಮೂರು ರನ್ಗಳ ಅಗತ್ಯವಿತ್ತು ಮತ್ತು ಅದು ಮೋರಿಸ್ ಮತ್ತು ಜಡೇಜಾ ಬ್ಯಾಟಿಂಗ್ ಆಗಿತ್ತು.

royal challengers
ಇವರಿಬ್ಬರು ಇನ್ನಿಂಗ್ಸ್ನ ಅಂತಿಮ ಬಾಲ್ನಲ್ಲಿ ಸಿಂಗಲ್ ತೆಗೆದುಕೊಂಡರು ಮತ್ತು ಕೊನೆಯ ಎಸೆತದಲ್ಲಿ 2 ರನ್ ಆಗಿತ್ತು. ಜಡೇಜಾ ಥರ್ಡ್ ಮ್ಯಾನ್ನಲ್ಲಿ ನೇರವಾಗಿ ರವಿ ರಾಂಪಾಲ್ ಅವರ ಕೈಗೆ ಕ್ಯಾಚ್ ಕೊಟ್ಟು ಆರ್ಸಿಬಿ ತಂಡವನ್ನು ವಿಜಯದ ಹಾದಿಗೆ ನೂಕಿತು. ಇದೇ ರೀತಿ ಅದೆಷ್ಟೋ ಪಂದ್ಯಗಳಲ್ಲಿ ಮುಖಾಮುಖಿಯಾಗಿ ಸೆಣಸಾಡಿರುವ ಈ ಎರಡು ಬಲಿಷ್ಠ ತಂಡಗಳ ಇತಿಹಾಸ ಬಹಳ ದೊಡ್ಡದು, ಜೊತೆಗೆ ಈ ತಂಡಗಳ ಅಭಿಮಾನಿಗಳ ಬಳಗವೂ ಅಷ್ಟೇ ದೊಡ್ಡದಾಗಿದೆ. ಈ ಬಾರಿಯ ಐಪಿಎಲ್ 15ರ ಸೀಸನ್ ನಲ್ಲಿ ಆರ್.ಸಿ.ಬಿ, ಚೆನೈ ತಂಡವನ್ನು ಮಣಿಸಿ ಕಪ್ ಗೆಲ್ಲಬೇಕೆಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಆರ್.ಸಿ.ಬಿ ಅಭಿಮಾನಿಗಳು ಹೇಳುವ ಮಾತು ಒಂದೇ 6 ಸಲ ಸೋತರು ಆರ್.ಸಿ.ಬಿ ನೇ, 60 ಸಲ ಸೋತರು ಆರ್.ಸಿ.ಬಿ ನೇ ಎಂದು ಕೂಗಿ ಜೈಕಾರ ಹಾಕುತ್ತಾರೆ ಆರ್.ಸಿ.ಬಿ ಅಭಿಮಾನಿಗಳ ಬಳಗ. ಈ ವರ್ಷವಾದರೂ ಆರ್.ಸಿ.ಬಿ ಕಪ್ ಗೆಲ್ಲಲಿ ಎಂದು ಆಶಿಸೋಣ.
  • ಮೋಹನ್ ಶೆಟ್ಟಿ

Tags: bengaluruchennaiDhoniIPLleaguercbvirat

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು
Sports

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು

March 17, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.