ನವದೆಹಲಿ, ಡಿ. 15: ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ದೇಶದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದ್ದು, ದೇಶಾದ್ಯಂತ ಎಲ್ಪಿಜಿ ಸಿಲಿಂಡರ್ ದರವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ.
ದೇಶೀಯ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ (ಸಬ್ಸಿಡಿ ರಹಿತ) ಬೆಲೆಯನ್ನು 50 ರೂಪಾಯಿ ಹೆಚ್ಚಿಸಲಾಗಿದ್ದು, 5 ಕೆಜಿ ಸಿಲಿಂಡರ್ ಬೆಲೆಯನ್ನ 18 ರೂಪಾಯಿ ಏರಿಸಲಾಗಿದೆ. ಅದೇ ರೀತಿ 19 ಕೆಜಿ ಸಿಲಿಂಡರ್ ದರವನ್ನ 36.50 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಅಂದಹಾಗೆ, ಈ ಬೆಲೆ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಈ ಹಿಂದೆ 594 ರೂಪಾಯಿಯಿದ್ದ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್ ಬೆಲೆ ಈಗ 644 ರೂಪಾಯಿಯಾಗಿದೆ. ಹಾಗೆಯೇ ಕೋಲ್ಕತದಲ್ಲಿ 620.50 ರೂಪಾಯಿಯಿದ್ದ ಸಿಲಿಂಡರ್ ಬೆಲೆ 670.50 ರೂಪಾಯಿಯನ್ನು ನಿಗದಿಪಡಿಸಿದೆ.