19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆಯನ್ನು 171.50 ರೂ. ಕಡಿತಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು (LPG Cylinder price increased) ವರದಿ ಮಾಡಿದೆ.

ಪ್ರಸ್ತುತ ಅಡುಗೆ ಅನಿಲ ಸಿಲಿಂಡರ್ ಬೆಲೆ ಗಗನಕ್ಕೇರಿದೆ ಈ ಸಂದರ್ಭದಲ್ಲಿ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಜನಸಾಮಾನ್ಯರಿಗೆ ಈ ಬಾರಿಯೂ ಕೂಡ ನಿರಾಸೆಯಾಗಿದೆ.
ಏಕೆಂದರೆ ಗೃಹಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಕೂಡ ಆಗಿಲ್ಲ.
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹೋಲಿಸಿದರೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆ ಹೆಚ್ಚು (LPG Cylinder price increased) ಏರಿಳಿತಗೊಳ್ಳುತ್ತವೆ.
ಸೋಮವಾರದಿಂದಲೇ ಜಾರಿಗೆ ಬರುವಂತೆ ಪೆಟ್ರೋಲಿಯಂ (Petroleum) ಮತ್ತು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಿವೆ.
ಇದನ್ನೂ ಓದಿ : https://vijayatimes.com/bjp-manifesto-release/
ಅಡುಗೆಗೆ ಬಳಸುವ 14.2 ಕೆಜಿ ತೂಕದ ಅಡುಗೆ ಅನಿಲ ದರವನ್ನು 2022ರಲ್ಲಿನಾಲ್ಕು ಬಾರಿ ಹೆಚ್ಚಿಸಲಾಗಿತ್ತು.
ನಂತರ ಮೂರು ಬಾರಿ ದರ ಕಡಿಮೆಗೊಳಿಸಲಾಗಿತ್ತು.ಕಳೆದ ವರ್ಷದ 2022 ಸೆಪ್ಟೆಂಬರ್ 1 ರಂದು ವಾಣಿಜ್ಯ ಬಳಕೆಯ ಗ್ಯಾಸ್(Gas) ಸಿಲಿಂಡರ್‌ಗಳ ಬೆಲೆಯನ್ನು
91.50 ರೂ. ಇಳಿಕೆ ಮಾಡಿದ್ದರು ನಂತರ , ಆಗಸ್ಟ್‌ನಲ್ಲಿ 36 ರೂ ಮತ್ತೆ ಇಳಿಕೆ ಮಾಡಲಾಗಿತ್ತು.
https://youtube.com/shorts/RLfENVSN1B8?feature=share
19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ವಾಣಿಜ್ಯ ನಗರಿ ಮುಂಬೈನಲ್ಲಿ(Mumbai) 1,980 ರೂ.ನಿಂದ 1,808 ರೂ.ಗೆ ಇಳಿಕೆಯಾಗಿದೆ.
ಕೋಲ್ಕತ್ತಾದಲ್ಲಿ 2,132 ರೂ.ನಿಂದ 1,960.50 ರೂ. ಕುಸಿದಿದೆ. ಚೆನ್ನೈನಲ್ಲಿ (Chennai) 2,192 ರೂ.ನಿಂದ 2,021 ರೂ.ಗೆ ಇಳಿದಿದೆ.