ನವದೆಹಲಿ, ಡಿ. 17: ಇಂದು ಎಲ್‍ಪಿಜಿ ಸಿಲಿಂಡರ್ ಮೇಲೆ 50 ರೂ. ಏರಿಕೆಯಾಗಿದೆ. ತಿಂಗಳಿನಲ್ಲಿ 2ನೇ ಬಾರಿ ಅಡುಗೆ ಅನಿಲ ಬೆಲೆ ಏರಿಕೆಯಾಗಿದ್ದು, ಇದರಿಂದ ಕೇಂದ್ರ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಏಕೆಂದರೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನೆಕರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಇದೆಲ್ಲದರ ನಡುವೆ ಈ ರೀತಿಬೆಲೆ ಹೆಚ್ಚಳ ಜನರಿಗೆ ಗಾಐದ ಮೇಲೆ ಬರೆ ಎಳೆದಂತಾಗಿದೆ. ಇದೆಲ್ಲದರ ಜತೆಗೆ ವಿಮಾನ ಇಂಧನ ಬೆಲೆ ಶೆ. 63ರಷ್ಟು ಏರಿಕೆಯಾಗಿದೆ.
ಹಣದ ಮೂಲಗಳು ಇಲ್ಲದಂತಾದ ಈ ಸಂದರ್ಭದಲ್ಲೀಗ ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನರ ಪರಿಸ್ಥಿತಿ ಇನ್ನೂ ಆರ್ಥಿಕವಾಗಿ ಕುಸಿಯುವ ಭೀತಿಯನ್ನು ಜನರು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಬ್ಸಿಡಿ ರಹಿತ 14. 2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ರೂ. 644ರಿಂದ 694ಕ್ಕೇರಿದೆ. ಜುಲೈ ತಿಂಗಳಿನಲ್ಲಿ ರೂ. 594 ಆಗಿದ್ದ ಸಿಲಿಂಡರ್ ಬೆಲೆ ಡಿಸೆಂಬರ್ 1 ರಂದು ರೂ. 50 ಏರಿಕೆಯಾಗಿತ್ತು ಸಬ್ಸಿಡಿ ಹೊಂದಿದ ಎಲ್‌ಪಿಜಿ ಸಿಲಿಂಡರ್ ಕೂಡ ಇದೇ ಬೆಲೆಯಲ್ಲಿ ಮಾರಾಟವಾಗುತ್ತಿತ್ತು. ಅಣತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿತ ಮತ್ತು ರಿಫಿಲ್ ದರ ಏರಿಕೆಯಾದ ಕಾರಣ ಮೇ ತಿಗಳಿನಿಂದ ಗ್ರಾಹಕರಿಗೆ ಸಬ್ಸಿಡಿ ಸಿಕ್ಕಿರಲಿಲ್ಲ.
ದೆಹಲಿಯಲ್ಲಿ ಅಡುಗೆ ಅನಿಲ ಸಬ್ಸಿಡಿ ಇರುವ ಎಲ್‍ಪಿಜಿ ಸಿಲಿಂಡರ್ ಬೆಲೆ 2019 ರಲ್ಲಿ 497 ರೂ. ಆಗಿತ್ತು, ನಂತರ ಇಲ್ಲಿಯವರೆಗೆ 147 ರೂ.ಏರಿಕೆಯಾಗಿದೆ. ಅದಾಗ್ಯೂ ಅನಿಲ ದರ ಹೆಚ್ಚಾಗಿರುವಾಗ ಸರ್ಕಾರ ಗ್ರಾಹಕರಿಗೆ ಸಬ್ಸಿಡಿ ಪಾವತಿಸಬೇಕಾಗುತ್ತದೆ. 15 ದಿನಗಳಿಗೊಮ್ಮೆ ಎಲ್‌ಪಿಜಿ ದರವನ್ನು ಪರಿಷ್ಕರಿಸಲಾಗುತ್ತದೆ.