ನಿರ್ದೇಶನ: ಎಸ್. ನಾಗೇಂದ್ರ ಪ್ರಸಾದ್
ನಿರ್ಮಾಣ: ಪಿ.ಆರ್. ಮೀನಾಕ್ಷಿ ಸುಂದರಂ, ಆರ್. ಸುಂದರ ಕಾಮರಾಜ್
ಪಾತ್ರವರ್ಗ: ಪುನೀತ್ ರಾಜ್ಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್, ಸಾಧು ಕೋಕಿಲ, ನಾಗಭೂಷಣ್, ರಂಗಾಯಣ ರಘು ಮುಂತಾದವರು.
ಸ್ಟಾರ್: 4/5
LuckyMan : ಪವರ್ ಸ್ಟಾರ್(Power star) ಪುನೀತ್ ರಾಜ್ ಕುಮಾರ್(Puneeth Rajkumar) ಅಭಿನಯದ ಕೊನೆಯ ಚಿತ್ರ, ಬಹುನಿರೀಕ್ಷಿತ ಲಕ್ಕಿ ಮ್ಯಾನ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಲವ್ ಮಾಕ್ಟೇಲ್(Love Mocktail) ಖ್ಯಾತಿಯ ಡಾರ್ಲಿಂಗ್ ಕೃಷ್ಣ(Darling Krishna), ಸಂಗೀತಾ ಶೃಂಗೇರಿ(Sangeetha Sringeri) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್ ನೂರಾರು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.
ಅಪ್ಪುವನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
ದೇವರ ಪಾತ್ರದಲ್ಲಿ ಪುನೀತ್ ಅವರನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್ ಅವರ ಸಮಾಜ ಸೇವೆ, ಮಾನವೀಯ ಗುಣಕ್ಕಾಗಿ ಇಡೀ ಕರ್ನಾಟಕದ ಜನತೆ ಅವರಿಗೆ ದೇವರ ಸ್ಥಾನ ನೀಡಿದೆ.
ಆದರೆ ತಮ್ಮ ಕೊನೆಯ ಸಿನಿಮಾದಲ್ಲಿ ಪುನೀತ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಕತಾಳೀಯವೇ ಸರಿ.

ಪುನೀತ್ ನಿಧನದ ಬಳಿಕ ಸಿನಿಮಾ ರಿಲೀಸ್ ಆಗಿರುವ ಕಾರಣ, ದೇವರ ಪಾತ್ರ ಅವರಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಆ ಕಾರಣದಿಂದಾಗಿ ಪ್ರೇಕ್ಷಕರಿಗೆ ಈ ಚಿತ್ರ ಇನ್ನಷ್ಟು ಹತ್ತಿರವಾಗಿದೆ.
ಇನ್ನು, ಸಿನಿಮಾ ಕಥೆಯ ಎಳೆ ಹೀಗಿದೆ. ಬಾಲ್ಯದ ಸ್ನೇಹಿತೆಯನ್ನೇ ಮದುವೆ ಆಗುವ ಡಾರ್ಲಿಂಗ್ ಕೃಷ್ಣಗೆ, ವೈವಾಹಿಕ ಜೀವನ ಕಠಿಣವೆನಿಸಿ ಡಿವೋರ್ಸ್ಗಾಗಿ ಆತ ಕೋರ್ಟ್ ಮೆಟ್ಟಿಲು ಏರುತ್ತಾನೆ.
ದೇವರಾದ ಅಪ್ಪು ಎಂಟ್ರಿ ಬಳಿಕ, ಕಥಾನಾಯಕನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಮತ್ತು ಬೆಳವಣಿಗೆಯಾಗುತ್ತದೆ ಎನ್ನೋದನ್ನ ನೀವು ಥಿಯೇಟರ್ಗೆ ಬಂದು ನೋಡಬೇಕು.
ಕಥೆಯಲ್ಲಿ ದೇವರು ಕೊಟ್ಟ ಎರಡನೇ ಅವಕಾಶವನ್ನು ಕಥಾನಾಯಕ ಸರಿಯಾಗಿ ಉಪಯೋಗಿಸಿಕೊಳ್ಳುತ್ತಾನಾ? ಎರಡನೇ ಅವಕಾಶದಲ್ಲಿ ಆತ ಯಾರನ್ನು ಮದುವೆ ಆಗ್ತಾನೆ?
ಇದನ್ನೂ ಓದಿ : https://vijayatimes.com/nia-enters-to-mangaluru/
ಅಂತಿಮವಾಗಿ ಅವನಿಗೆ ಡಿವೋರ್ಸ್ ಸಿಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಉತ್ತರವಿದೆ. ಅಪ್ಪು ಮತ್ತು ಪ್ರಭುದೇವ (Prabhudeva) ಅವರ ನೃತ್ಯ ಮನಸೂರೆಗೊಳಿಸುತ್ತದೆ.
ಇದನ್ನು ನೀವು ತೆರೆಯ ಮೇಲೆಯೇ ನೋಡಿ ಕಣ್ತುಂಬಿಕೊಳ್ಳಬೇಕು. ಇನ್ನು, ಚಿತ್ರದಲ್ಲಿ ಪ್ರೀತಿ, ಸ್ನೇಹ, ಮದುವೆ, ನಂಬಿಕೆಯ ಬಗ್ಗೆ ಮನಮುಟ್ಟುವಂತೆ ಹೇಳಲಾಗಿದೆ.
ಚಿತ್ರ ಎಲ್ಲೂ ಬೋರ್ ಎನಿಸುವುದಿಲ್ಲ. ಕಾಮಿಡಿ ಸನ್ನಿವೇಶಗಳು ಸಹ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತವೆ. ಕಥಾನಾಯಕ ಎರಡು ಡಿಫರೆಂಟ್ ಲವ್ ಸ್ಟೋರಿಗಳಲ್ಲಿ ಕಾಣಿಸಿಕೊಂಡಿದ್ದು,
ಪ್ರೇಕ್ಷಕರಿಗೆ ಮಜಾ ನೀಡುತ್ತವೆ. ಭರಪೂರ ನಗು ತರಿಸುವಲ್ಲಿ ರಂಗಾಯಣ ರಘು ಯಶಸ್ವಿಯಾಗಿದ್ದಾರೆ.

ನಾಗಭೂಷಣ್ ಕೂಡ ಸಿಕ್ಕಾಪಟ್ಟೆ ಕಾಮಿಡಿ ಕಚಗುಳಿ ಇಡುತ್ತಾರೆ. ದೇವರಾಗಿ ಕಾಣಿಸಿಕೊಂಡಿರುವ ಪುನೀತ್ ರಾಜ್ಕುಮಾರ್ ಅವರಿಗೆ ಸಾಧುಕೋಕಿಲ ಸಾಥ್ ನೀಡಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬಂದ ಕಾಮಿಡಿ ದೃಶ್ಯಗಳು ಚೆನ್ನಾಗಿವೆ. ಪುನೀತ್ ಬಹಳಷ್ಟು ನಗಿಸುತ್ತಾರೆ ಎನ್ನುವುದೇನೋ ನಿಜ,
ಆದರೆ ಅವರನ್ನು ಪರದೆ ಮೇಲೆ ನೋಡಿದ ಪ್ರೇಕ್ಷಕರು ಕಣ್ಣೊರೆಸಿಕೊಂಡು ಹೊರಬರುವುದು ಮಾತ್ರ ಖಂಡಿತ. ದೇವರೇ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಕಣ್ಣಂಚನ್ನು ಒದ್ದೆ ಮಾಡುತ್ತದೆ.
- ಪವಿತ್ರ