- ವಿಜಯಟೈಮ್ಸ್‌ನಿಂದ ಲಕ್ಕೀ ಸ್ಕೀಮ್‌ಗಳ ಅಸಲಿ ಬಯಲು (Lucky Scheme Golmaal)
- ಲಕ್ಕೀ ಡ್ರಾ ಆದ ಹಾಗೆ ಡ್ರಾಮಾ ಮಾಡುತ್ತಿರುವ ಕಂಪೆನಿಗಳು
- ಜನರಿಗೆ ಭರ್ಜರಿ ಮೋಸ ಮಾಡುತ್ತಿರೋ ಲಕ್ಕೀ ಸ್ಕೀಮ್‌ಗಳು
- ಲಕ್ಕೀ ಸ್ಕೀಮ್ ನಂಬಿದ್ರೆ ಉಂಡೆನಾಮ ಗ್ಯಾರಂಟಿ
ಲಕ್ಕೀ ಸ್ಕೀಮ್ ಗೋಲ್‌ಮಾಲ್ ಬಯಲು! ವಿಜಯಟೈಮ್ಸ್ ಬಯಲು ಮಾಡ್ತೀದೆ ಈ ಲಕ್ಕೀ ಸ್ಕೀಮ್‌ಗಳ(Lucky Scheme) ಅಸಲಿಯತ್ತು.
ಪ್ರಸಿದ್ಧ ಸತ್ಯವಂತ ಸಂಸ್ಥೆ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕೆಲ ಲಕ್ಕೀ ಸ್ಕೀಮ್ ಕಂಪೆನಿಗಳ ಅಸಲಿಯತ್ತನ್ನು ಬಯಲು ಮಾಡ್ತಿದೆ ವಿಜಯಟೈಮ್ಸ್.
ಅಮಾಯಕರಿಗೆ ಮೋಸ ಮಾಡಿ ಅವರ ಬದುಕು ಬೀದಿಗೆ ತರುವ ಈ ಲಕ್ಕೀ ಸ್ಕೀಮ್‌ಗಳ ಬಗ್ಗೆ ಎಚ್ಚರ !

ನಂಬಿದ್ರೆ ಉಂಡೆನಾಮ ಗ್ಯಾರಂಟಿ. ಇದು ನಮ್ಮ ಕರಾವಳಿ ಹಾಗೂ ಬಯಲು ಸೀಮೆಯ ಜಿಲ್ಲೆಗಳಲ್ಲಿ ತಲೆ ಎತ್ತಿರುವ ಲಕ್ಕೀ ಸ್ಕೀಮ್‌ಗಳು ಜನರಿಗೆ ಮಾಡುತ್ತಿರೋ ಮೋಸ.
ಲೈವಲ್ಲೇ ತಮಗೆ ಬೇಕಾದವರ ಹೆಸರಿನ ಚೀಟಿಯನ್ನು ಬೆರಳಿನ ಸಂದಿಯಲ್ಲಿ ಬಚ್ಚಿಟ್ಟು ಅವರಿಗೆ ಲಕ್ಕೀ ಡ್ರಾ ಆದ ಹಾಗೆ ಡ್ರಾಮಾ ಮಾಡುತ್ತಿವೆ.
ಈ ಲಕ್ಕೀ ಸ್ಕೀಮ್‌ಗಳು ಇದೇ ರೀತಿ ತಮಗೆ ಬೇಕಾದವರಿಗೆ ದೊಡ್ಡ ದೊಡ್ಡ ಬಹುಮಾನವನ್ನು(Big prize) ಕೊಟ್ಟು ನಿಯತ್ತಾಗಿ ದುಡ್ಡು ಕಟ್ಟಿ ಬಹುಮಾನ ಬರುತ್ತೆ ಅಂತ ಕಾದು ಕುಳಿತವರಿಗೆ ನೀಟಾಗಿ ಉಂಡೆನಾಮ ಹಾಕುತ್ತಿವೆ.
ಆದ್ರೆ ನಮ್ಮ ದಡ್ಡ ಜನರಿಗೆ ಈ ಸ್ಕೀಮ್‌ಗಳ ಅಸಲಿತ್ತೇ ಗೊತ್ತಾಗುತ್ತಿಲ್ಲ. ಅದಕ್ಕಾಗಿಯೇ ವಿಜಯಟೈಮ್ಸ್ ಈ ಲಕ್ಕೀ ಸ್ಕೀಮ್‌ಗಳ ಬೆನ್ನತ್ತಿ ಅವುಗಳ ಅಸಲಿಯತ್ತು ಬಯಲು ಮಾಡುತ್ತಿದೆ.
ಈ ಲಕ್ಕೀ ಡ್ರಾ ಮಡೋಕೆ ಬಂದವ ಸ್ಕೀಮ್ ಕಂಪೆನಿಗಳ ಗ್ಯಾಂಗ್‌ನ ಸದಸ್ಯ. ಮೊದಲಿಗೆ ಈತನ ಕೈನಲ್ಲಿ ಯಾವುದೇ ಉಡುಗೊರೆ ಚೀಟಿ(Gift card) ಇರೋದಿಲ್ಲ,
ಆದ್ರೆ ಪಕ್ಕದಲ್ಲಿರುವಾತ ಆತನ ಕೈನ ಡಬ್ಬಿ ಒಳಗೆ ಹಾಕೋಕೂ ಮುನ್ನ ಚೀಟಿನೀಡ್ತಾನೆ. ಆ ಬಳಿಕ ಆ ಚೀಟಿ ತೆಗೆದು ತಮ್ಮದೇ ಗ್ಯಾಂಗ್‌ನ ಸದಸ್ಯರಿಗೆ ಕಾರು, ಪ್ಲಾಟ್, ಚಿನ್ನ, ಬೈಕ್ ಬಂದ ಹಾಗೆ ನಾಟಕ ಮಾಡುತ್ತಾರೆ.
ಇದನ್ನು ನಂಬೋ ಜನ ಪಾಪ ತಾವು ದುಡಿದ ಹಣವನ್ನು ಕಷ್ಟಪಟ್ಟು ಕೂಲಿ ನಾಲಿ ಮಾಡಿದ ಹಣವನ್ನು ಇವರಿಗೆ ಸುರಿದು ಬೀದಿಗೆ ಬೀಳುತ್ತಾರೆ ಅನ್ನೋದು ಈ ಸ್ಕೀಮ್ ನಂಬಿ ಹಣ ಕಳೆದುಕೊಂಡವರ ನುಡಿ.
ಜನರನ್ನ ನಂಬಿಸಲು ನಾನಾ ಅಡ್ಡ ದಾರಿ ಹಿಡಿದಿರುವ ಈ ವಂಚಕರು ಯಾರು ಫೇಮಸ್ ಇರ್ತಾರೋ ಅಂತಾ ನಟ, ನಟಿ ಹಾಗೂ ಸೋಷಿಯಲ್ ಇನ್‌ಫ್ಲೂಯನ್ಸರ್‌ಗಳಿಗೆ(Social Influencer) ಹಣ ನೀಡಿ ಜಾಹಿರಾತು ಕೊಡಿಸ್ತಾರೆ.
ಅಲ್ಲದೆ ಆರಂಭದಲ್ಲಿ ಜನರಿಗೆ ಸಣ್ಣ ಪುಟ್ಟ ಉಡುಗೊರೆ ಕೊಟ್ಟು ಯಾಮಾರಿಸ್ತಾರೆ. ಆಮೇಲೆ ಜನ ಜಾಯಿನ್ ಆಗ್ತಾ ಇದ್ದ ಹಾಗೆ ನಕರಾ ತೋರಿಸ್ತಾರೆ,
ಯಾವ ಬಹುಮಾನನೂ ಕೊಡಲ್ಲ. ಆಮೇಲೆ ಒಂದು ದಿನ ಬಾಗಿಲು ಮುಚ್ಚಿಕೊಂಡು ಉಂಡೆ ನಾಮ ಹಾಕಿ ಪರಾರಿ ಆಗ್ತಾರೆ.
ಇದನ್ನು ಓದಿ : ಬೆಂಗಳೂರಿನಲ್ಲಿ ವಿದೇಶಿ ಕರೆಗಳ ಕನ್ವರ್ಟ್ ಜಾಲ, ಸಿಸಿಬಿ ಸೈಬರ್ ಕ್ರೈಂ ಪೊಲೀಸರ ಭರ್ಜರಿ ಬೇಟೆ,ಇಬ್ಬರ ಬಂದನ
ಇಂಥಾ ಫ್ರಾಡ್ ಕಂಪೆನಿಗಳು(Fraud companies) ಸಾಕಷ್ಟು ಇವೆ ಇಂಥಾ ವಂಚಕ ಸ್ಕೀಮ್ ಕಂಪೆನಿಗಳು ರಾಜ್ಯದಲ್ಲಿ ಬ್ಯಾನ್ ಆಗಬೇಕು, ಇಲ್ಲವಾದ್ರೆ ಉಗ್ರ ಹೋರಾಟ ಮಾಡ್ತೀವಿ ಅನ್ನೋದು ಮೋಸ ಹೋದವರ ಎಚ್ಚರಿಕೆ. (Lucky Scheme Golmaal)