ಚೆನ್ನೈ : ಕ್ರಿಶ್ಚಿಯನ್(Christians) ಫಾದರ್ರ್ಗಳು ಮತ್ತು ಚರ್ಚ್ಗಳು(Church) ಇಲ್ಲದಿದ್ದರೆ ತಮಿಳುನಾಡು ರಾಜ್ಯ(Tamilnadu State) ಬಿಹಾರದಂತೆ ಆಗುತ್ತಿತ್ತು. ನಾನು ಇಂದು ಈ ಸ್ಥಾನಕ್ಕೆ ಬೆಳೆಯಲು ಕ್ಯಾಥೋಲಿಕ್ ಫಾದರ್ ಮತ್ತು ಚರ್ಚ್ಗಳು ಕಾರಣ ಎಂದು ತಮಿಳುನಾಡು ವಿಧಾನಸಭಾ ಅಧ್ಯಕ್ಷ ಹಾಗೂ ಡಿಎಂಕೆ ನಾಯಕ(DMK Leader) ಎಂ.ಅಪ್ಪಾವು(M. Appavu) ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತೆ(Bihar) ಆಗುತ್ತಿತ್ತು. ಕ್ರಿಶ್ಚಿಯನ್ನರ ಪ್ರಾರ್ಥನೆ ಮತ್ತು ಉಪವಾಸವೇ ಡಿಎಂಕೆ ಸರ್ಕಾರ ರಚನೆಗೆ ಕಾರಣ. ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಸಾಮಾಜಿಕ ನ್ಯಾಯ ಮತ್ತು ತಮಿಳುನಾಡಿನಲ್ಲಿ ದ್ರಾವಿಡ ಮಾದರಿ ಸರ್ಕಾರ ರಚಿಸಲು ಮುಖ್ಯ ಕಾರಣರಾಗಿದ್ದಾರೆ. ಅವರು ಈ ರಾಜ್ಯಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದಿದ್ದಾರೆ.
ಇನ್ನು ಕ್ಯಾಥೋಲಿಕ್ ಕ್ರಿಶ್ಚಿಯನ್ನರು ನೇರವಾಗಿ ಮುಖ್ಯಮಂತ್ರಿ ಸ್ಟಾಲಿನ್(M Stalin) ಅವರಿಗೆ ನಿಮ್ಮ ಸಮಸ್ಯೆಗಳ ಪಟ್ಟಿಯನ್ನು ನೀಡಿ, ಅವರು ಯಾವುದನ್ನೂ ನಿರಾಕರಿಸುವುದಿಲ್ಲ. ಏಕೆಂದರೆ ಡಿಎಂಕೆ ಸರ್ಕಾರ ರಚನೆಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಕಾರಣ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಗೊತ್ತಿದೆ. ಇನ್ನು ತಮಿಳುನಾಡಿನಿಂದ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಹೊರಹಾಕಿದರೆ ರಾಜ್ಯ ಅಭಿವೃದ್ಧಿಯಾಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಮುಖ್ಯ ಕಾರಣ ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಎಂದು ತಿಳಿಸಿದ್ದಾರೆ.
ವಿಧಾನಸಭಾ ಸ್ಪೀಕರ್ನ ಈ ಹೇಳಿಕೆಯ ವಿರುದ್ಧ ಬಿಜೆಪಿ(BJP) ವಾಗ್ದಾಳಿ ನಡೆಸಿದ್ದು, ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಈಗ ಸಾಬೀತಾಗಿದೆ. ಅವರು ಮೇಲ್ನೋಟಕ್ಕೆ ನಾವು ಜಾತ್ಯಾತೀತರು ಎನ್ನುತ್ತಾರೆ. ಆದರೆ ಅಂತರಂಗದಲ್ಲಿ ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಇದೀಗ ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದೆ. ಇನ್ನು ವಿಧಾನಸಭಾ ಸ್ಪೀಕರ್ನ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral) ಆಗಿದ್ದು, ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.