download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

`ಯಾವುದೇ ಜಾತಿ ಧರ್ಮಕ್ಕೆ ನಾನು ಸೇರಿಲ್ಲ’ ಎಂದು ಪ್ರಮಾಣಪತ್ರ ಪಡೆದ ಏಕೈಕ ಮಹಿಳೆ ಎಂ.ಎ ಸ್ನೇಹ!

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸರ್ಟಿಫಿಕೇಟ್ ಪಡೆಯುವಾಗ ಅಥವಾ ಕೆಲಸಕ್ಕೆ ಅಥವಾ ಇತರ ಕಾರಣಗಳಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಒಂದು ಕಾಲಂ ಭರ್ತಿ ಮಾಡಬೇಕಾಗುತ್ತದೆ. ಅದೇ ಜಾತಿಯ ಕಾಲಂ.
ma sneha

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸರ್ಟಿಫಿಕೇಟ್ ಪಡೆಯುವಾಗ ಅಥವಾ ಕೆಲಸಕ್ಕೆ ಅಥವಾ ಇತರ ಕಾರಣಗಳಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಒಂದು ಕಾಲಂ ಭರ್ತಿ ಮಾಡಬೇಕಾಗುತ್ತದೆ. ಅದೇ ಜಾತಿಯ ಕಾಲಂ.

ma sneha

ಆ ಕಾಲಂನಲ್ಲಿ ನಾವು ಜಾತಿಯ(Caste) ಜೊತೆ ಧರ್ಮವನ್ನೂ(Religion) ಕೂಡ ಬರೆಯಬೇಕಾಗುತ್ತದೆ. ಜಾತಿ ಹಾಗೇ ಧರ್ಮದ ಕಾಲಂ ಅನ್ನು ತುಂಬದೇ ಇದ್ದರೆ, ಅಂತಹ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸಲಾಗುತ್ತದೆ. ಕೆಲವು ಕಾನೂನಿನ ಕಾರಣಗಳಿಗಾಗಿ ನಾವು ಈ ಕಾಲಂ ಅನ್ನು ಭರ್ತಿ ಮಾಡಲೇಬೇಕಾಗುತ್ತದೆ. ಆದರೆ ತಮಿಳುನಾಡಿನ(Tamilnadu) ತಿರುಪತುರ್(Thirupathar) ಮಹಿಳೆಯೊಬ್ಬರು ಚಿಕ್ಕವರಿದ್ದಾಗಿನಿಂದಲೂ ಜಾತಿಯ ಕಾಲಂನಲ್ಲಿ ತಮ್ಮ ಜಾತಿಯನ್ನೇ ನಮೂದಿಸಿಲ್ಲ ಅಂದ್ರೆ ನಂಬ್ತೀರಾ?

ಇದಕ್ಕಿಂತಲೂ ಸ್ವಾರಸ್ಯಕರ ವಿಷಯ ಎಂದ್ರೆ, ಇದೀಗ ಈ ಮಹಿಳೆ ತಹಶೀಲ್ದಾರ್ ಬಳಿ “ನನಗೆ ಯಾವುದೇ ಜಾತಿ, ಧರ್ಮವಿಲ್ಲ’ ಎಂಬ ಪ್ರಮಾಣ ಪತ್ರವನ್ನೂ ಸಹಾ ಪಡೆದುಕೊಂಡಿದ್ದಾರೆ. ಹೌದು, ಅಷ್ಟಕ್ಕೂ ಈ ಮಹಿಳೆ ಯಾರು? ಈ ಮಹಿಳೆಯ ಹೆಸರೇನು? ಎಂಬ ವಿವರ ತಿಳಿಯುವುದಾದರೆ ಮುಂದೆ ಓದಿ. ಎಂ.ಎ.ಸ್ನೇಹಾ, 35 ವರ್ಷದ ಮಹಿಳೆ ಇವರು ವೃತ್ತಿಯಲ್ಲಿ ವಕೀಲೆ. ಬಹಳ ಸಮಯದಿಂದ ಈ ರೀತಿ ಪ್ರಮಾಣಪತ್ರ ಪಡೆಯಬೇಕೆಂದುಕೊಂಡಿದ್ದ ಸ್ನೇಹಾಗೆ ಕೊನೆಗೂ ತಿರುಪಟ್ಟೂರಿನ ತಹಶೀಲ್ದಾರ್ ಟಿ.ಎಸ್‌.ಸತ್ಯಮೂರ್ತಿಯವರಿಂದ ಈ ಪ್ರಮಾಣ ಪತ್ರ ಸಿಕ್ಕಿದೆ. ಈ ಮೂಲಕ ಇಂತಹದೊಂದು ಪ್ರಮಾಣ ಪತ್ರ ಪಡೆದುಕೊಂಡ ದೇಶದ ಮೊದಲ ಪ್ರಜೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ ಸ್ನೇಹಾ.

M.A Sneha


ಸ್ನೇಹ ಅವರ ಈ ಮನಸ್ಥಿತಿಗೇ ಕಾರಣವೂ ಇದೆ. ಸ್ನೇಹಾ ಕುಟುಂಬದವರು ಮೊದಲಿನಿಂದಲೂ ಜಾತಿ ಮತ್ತು ಧರ್ಮದ ವಿರೋಧಿಗಳು. ಅವರು ಬೆಳೆದು ಬಂದ ಮನೆಯ ವಾತವರಣವೂ ಹಾಗೆಯೇ ಇತ್ತು. ಅತ್ತೆ, ಮಾವ ಕೂಡ ವಕೀಲ ವೃತ್ತಿ ಮಾಡುತ್ತಿದ್ದಾರೆ. ಮತ್ತೆ ಅವರಿಬ್ಬರೂ ಬೇರೆ ಬೇರೆ ಜಾತಿಯವರು. ಎಲ್ಲಕ್ಕಿಂತ ಹೆಚ್ಚಾಗಿ ವಿಚಾರವಾದಿಗಳು ಮತ್ತು ಎಡಪಂಥೀಯರು ಎಂದು ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ ಸ್ನೇಹಾ.

ಸ್ನೇಹಾ ಮತ್ತು ಅವರ ಪತಿ ಕೆ.ಪ್ರತಿಭಾ ರಾಜ್ ಒಂದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ ಎಂಬುದು ವಿಶೇಷ. ತಮ್ಮ ಮೂರು ಜನ ಮಕ್ಕಳಿಗೂ ಕೂಡ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಹೆಸರಿಟ್ಟಿದ್ದಾರೆ. ಆಧಿರೈ ನಾಸ್ರೀನ್, ಆದಿಲಾ ಐರೀನ್ ಮತ್ತು ಆರಿಫಾ ಜೆಸ್ಸಿ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳ ಶಾಲಾ ಪ್ರಮಾಣ ಪತ್ರಗಳಲ್ಲೂ ಜಾತಿ, ಧರ್ಮದ ಜಾಗವನ್ನು ಭರ್ತಿ ಮಾಡಿಲ್ಲ ಎಂದು ಸ್ನೇಹ ಅವರ ಪತಿ ತಿಳಿಸಿದ್ದಾರೆ.

tamilnadu

ಇನ್ನು ಕೆಲವೇ ದಿನಗಳಲ್ಲಿ ತಮ್ಮ ಮೂರು ಜನ ಮಕ್ಕಳು ಹಾಗೂ ತಮ್ಮ ಸಹೋದರಿಯರು ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ ಎಂಬ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ ಎಂಬ ವಿಷಯವನ್ನು ಸಂತಸದಿಂದ ಹಂಚಿಕೊಂಡಿದ್ದಾರೆ ಸ್ನೇಹಾ. ಜಾತಿ, ಧರ್ಮವನ್ನು ಹೊರತುಪಡಿಸಿ ನನಗೊಂದು ಗುರುತು ಬೇಕಿತ್ತು. 2010 ರಿಂದಲೂ ಜಾತಿ, ಧರ್ಮವಿಲ್ಲದ ಗುರುತು ಪಡೆಯಲು ಪ್ರಯತ್ನಿಸ್ತಾ ಇದ್ದೆ. ಆದರೆ, ಅಧಿಕಾರಿಗಳು ಇದಕ್ಕೆ ಕೆಲವು ಕಾರಣಗಳನ್ನು ನೀಡಿ ತಿರಸ್ಕರಿಸುತ್ತಿದ್ದರು.

ಕೆಲವರಂತೂ ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದೂ ಸಾರಾಸಗಟಗಿ ತಿರಸ್ಕರಿಸುತ್ತಿದ್ದರು. ನಾನು ಯಾವುದೇ ಜಾತಿಗೆ ಸೇರಿಲ್ಲ ಎಂದಾಗ ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು, ಆಡಿಕೊಂಡು ನಗುತ್ತಿದ್ದರು ಎನ್ನುವ ವಿಷಯವನ್ನು ಸ್ನೇಹ ಬೇಸರದಿಂದ ಹಂಚಿಕೊಂಡಿದ್ದಾರೆ. 2017 ರಲ್ಲಿ ನಾನು ಯಾವುದೇ ಸರಕಾರಿ ಯೋಜನೆಗಳು ಅಥವಾ ಮೀಸಲಾತಿಯನ್ನು ಪಡೆದುಕೊಂಡಿಲ್ಲ. ಆದ್ದರಿಂದ ಮನವಿಯನ್ನು ಸ್ವೀಕರಿಸಿ ಎಂದು ಹೇಳಿದ್ದೆ ಎಂದು ಸ್ನೇಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ಪವಿತ್ರ ಸಚಿನ್

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article