ಚಾಮರಾಜನಗರ, ನ. 12: ರಾಜ್ಯಾದ್ಯಂತ ದಂಡ ಹಾಕುವ ಕಾನೂನು ಜಾರಿಯಾಗಿದೆ. ಸರಿ, ಆದರೆ ಅನಾವಶ್ಯಕವಾಗಿ, ಸಿಕ್ಕಸಿಕ್ಕ ಕಡೆ ವಾಹನಗಳನ್ನು ನಿಲ್ಲಿಸಿ ಹಣ ವಸೂಲಿ ಮಾಡುವುದು ಕಾನೂನು ಬಾಹಿರ. ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ.
ಚಾಮರಾಜ ನಗರದ ಮಾದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಗುವ ಪ್ರಯಾಣಿಕರ ವಾಹನಗಳನ್ನು ನಿಲ್ಲಿಸಿ ಕಾನೂನು ಬಾಹೀರವಾಗಿ ದಂಡ ವಸೂಲಿ ಮಾಡುವ ನೆಪದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕಾನೂನಿನ ಪ್ರಕಾರ ಇನ್‌ಸ್ಪೆಕ್ಟರ್ ದಂಡ ವಸೂಲಿ ಮಾಡಬೇಕೆನ್ನುವುದು ಇಲಾಖೆ ನಿಯಮ ಆದರೆ ಇಲ್ಲಿ ಹೋಮ್ ಗಾರ್ಡ್‌ಗಳು ವಾಹನಗಳನ್ನು ನಿಲ್ಲಿಸಿ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ. ಅದಲ್ಲದೇ ಸರಿಯಾದ ದಾಖಲೆಗಳು ಇದ್ದರೂ ೧೦೦೦ ರೂಪಾಯಿ ದಂಡ ಹಾಕಿ 200 ರೂಪಾಯಿಯ ರಶೀದಿ ನೀಡುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಪೋಲೀಸ್ ಇಲಾಖೆಯು ಈ ಕಾನೂನು ಬಾಹಿರ ಕ್ರಮದ ವಿರುದ್ಧ ಸರಿಯಾದ ಕ್ರಮಗಳನ್ನು ಕೈಗೊಳಬೇಕು.