Mumbai : ಬಾಲಿವುಡ್(Madhavan spokes son’s Achievement) ಚಿತ್ರರಂಗದ ಅತ್ಯುತ್ತಮ ನಟ ಆರ್. ಮಾಧವನ್ ತಮ್ಮ ಮಗನ ಸಾಧನೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದು,
ನನ್ನ ಮಗನೇ ನನಗೆ ಸ್ಫೂರ್ತಿ ಎಂದು ಹೇಳಿಕೊಂಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್ ಆಗಿದೆ.
ನಟ ಆರ್.ಮಾಧವನ್( R Madhavan) ಅವರು ಸಿನಿಮಾ ರಂಗದಲ್ಲಿ ಅನೇಕ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿ, ಜನರನ್ನು ಮನರಂಜಿಸಿದ್ದಾರೆ.
ಉತ್ತಮ ಪಾತ್ರಗಳ ಮೂಲಕ ಜನರ ಮನ ಗೆದ್ದ ನಟ ಮಾಧವನ್ ತಮ್ಮ ಸಿನಿ ಜೀವನವನ್ನು ಬದಿಗಿಟ್ಟು, ರಿಯಲ್ ಜೀವನದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಮಾಧವನ್ ಅವರು ತಮ್ಮ ಮಗ ವೇದಾಂತ್ ಮಾಧವನ್(Madhavan spokes son’s Achievement) ಅವರ ಹೆಮ್ಮೆಯ ತಂದೆಯಾಗಿದ್ದು, ಮಗನ ಸಾಧನೆ ಬಗ್ಗೆ ಬಹಳ ಕೊಂಡಾಡಿದ್ದಾರೆ.
ಹೌದು, ನಟ ಮಾಧವನ್ ಅವರ ಮಗ ಈಜುವ ಸ್ಪರ್ಧೆಯಲ್ಲಿ ಸಾಧನೆಯ ಮೇಲೆ ಸಾಧನೆಯನ್ನು ಮಾಡಿ ತಮ್ಮ ಸಾಮರ್ಥ್ಯವನ್ನು ತಂದೆಗೆ ಸಾಬೀತುಪಡಿಸುತ್ತಿರುವುದು ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಈ ಬಗ್ಗೆ ಇನ್ಸ್ಟಾಗ್ರಾಂ(Instagram) ಖಾತೆಯಲ್ಲಿ ಮಗನ ಸಾಧನೆ ಹಾಗೂ ಮಗನ ಕುರಿತು ಕಿರಿದಾದ ಸಂತಸವನ್ನು ಬರೆದು ಪೋಸ್ಟ್ ಮಾಡಿರುವ ಅವರು,
ಆಗಾಗ್ಗೆ ನನ್ನ ಮಗುವಿನ ಸಾಧನೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ನನ್ನ ಮಗ ವೇದಾಂತ್ ನನಗೆ ನಿಜವಾದ ಸ್ಫೂರ್ತಿ ಎಂದು ಹೇಳಿದ್ದಾರೆ.
ನನಗೆ ಈಗ ಮಗನಿಂದ ಕಲಿಯುವ ಸಮಯ ಎಂದು ಒಂದು ವೀಡಿಯೋ ತುಣುಕಿನೊಂದಿಗೆ ಪೋಸ್ಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೋ ಹಂಚಿಕೊಂಡ ಬಳಿಕ, ನೆಟ್ಟಿಗರು ಆರ್.ಮಾಧವನ್ ಅವರ ಮಗನ ಸಾಧನೆಯನ್ನು ಮೆಚ್ಚಿ ಕಮೆಂಟ್ ಮಾಡಿದ್ದು, 93,000 ಜನರು ಇಷ್ಟಪಟ್ಟಿದ್ದಾರೆ ಮತ್ತು ಹಲವಾರು ಜನರು ಅಭಿನಂದನೆ ಸಂದೇಶಗಳನ್ನು ಕಳಿಸಿದ್ದಾರೆ.
https://vijayatimes.com/siddaramaiah-vs-state-bjp/
ಇನ್ಸ್ಟಾಗ್ರಾಂ ನಲ್ಲಿ ನೆಟ್ಟಿಗರೊಬ್ಬರು, “ಇದು ನಿಜವಾದ ಹೆಮ್ಮೆ. ನೀವು ನಿಮ್ಮ ಮಗನನ್ನು ಬೆಳಸುತ್ತಿರುವುದನ್ನು ನೋಡಲು ನನಗೆ ಸಂತೋಷವಾಗಿದೆ,
ಅವರಲ್ಲಿ ಅನೇಕರಿಗೆ ಅಗತ್ಯತೆಗಳ ಬಗ್ಗೆ ತಿಳುವಳಿಕೆ ಇಲ್ಲ ಮತ್ತು ಅವರ ಗುರಿಯನ್ನು ತಲುಪಲು ಈ ವೀಡಿಯೋ ಸಹಾಯ ಮಾಡುತ್ತದೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ.” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ನಟ ಆರ್.ಮಾಧವನ್ ಅವರು 2022 ರಲ್ಲಿ ನೈಜ ಘಟನೆ ಆಧಾರಿತ ರಾಕೆಟ್ರಿ(Rocketry) ಸಿನಿಮಾದಲ್ಲಿ ಭಾರತದ ಅತ್ಯುತ್ತಮ ವಿಜ್ಞಾನಿ ನಂಬಿ ನಾರಾಯಣ್(Nambi Narayan) ಅವರ ಪಾತ್ರದಲ್ಲಿ ಅಭಿನಯಿಸಿ
ಜನರ ಮೆಚ್ಚುಗೆಗೆ ಪಾತ್ರರಾದರು ಮತ್ತು ಈ ಸಿನಿಮಾ ತಿಳಿಯದ ಒಂದು ನೈಜ ಘಟನೆ, ಸ್ಥಿತಿ-ಗತಿಯನ್ನು ಚಿತ್ರದ ರೂಪದಲ್ಲಿ ವಿವರಿಸಿದ ಪರಿಗೆ ಚಿತ್ರತಂಡಕ್ಕೆ ಭಾರಿ ಮೆಚ್ಚುಗೆಗಳು ಹರಿದುಬಂದಿತ್ತು.