Chikkamagalauru: ನನಗೆ ಕನ್ನಡ (Kannada) ಸರಿಯಾಗಿ ಬರೋದಿಲ್ಲ ಅಂದಿದ್ದಕ್ಕೆ ಕಂಡಕಂಡಲ್ಲಿ ಟ್ರೋಲ್ ಮಾಡ್ತಿರಲ್ಲ ನಿಮ್ಮ ಮೋದಿ (Modi) ಗೆ ಕನ್ನಡ ಬರುತ್ತಾ? ಮೊದಲು ತಿಳ್ಕೊಳ್ಳಿ. ಇಲ್ಲಿ ಬಂದು ಕನ್ನಡದಲ್ಲಿ ಮಾತಾಡ್ತಾರೆ, ತಮಿಳನಾಡಿಗೆ ಹೋಗಿ ತಮಿಳು ಮಾತಾಡ್ತಾರೆ. ಅವರಿಗೆ ಯಾರೋ ಬರೆದುಕೊಟ್ಟಿರ್ತಾರೆ ಮಾತಾಡ್ತಾರೆ . ನನಗೂ ನೋಡಿ ಮಾತಾಡೋಕೆ ಬರತ್ತೆ ಎನ್ನುವ ಮೂಲಕ ಸಚಿವ ಮಧು ಬಂಗಾರಪ್ಪ (Madhu Bangarappa) ಗೆ ಕನ್ನಡ ಬರೊಲ್ಲ ಎಂದು ಟ್ರೋಲ್ (Troll) ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.
ಚಿಕ್ಕಮಗಳೂರಲ್ಲಿ (Chikkamagaluru) ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, ನನಗೆ ಓದೋದು ಸ್ವಲ್ಪ ಕಷ್ಟ. ಆದರೆ ಮಾತಾಡುವಾಗ ಕನ್ನಡ ಚೆನ್ನಾಗಿಯೇ ಮಾತಾಡ್ತಿನಿ. ಟ್ರೋಲ್ ಮಾಡುವವರಿಗೆ ಬೇರೆ ಕೆಲಸ ಇಲ್ಲ. ಎಲ್ಲಾದರು ಏನಾದ್ರೂ ಸಿಗತ್ತಾ ಎಂದೇ ಕಾಯುತ್ತಿರುತ್ತಾರೆ. ಈ ಹಿಂದೆ ಪಾಪ ಟ್ರೋಲ್ ಮಾಡೋರಿಗೆ ಸುಮ್ಮನೆ ಶಾಪ ಹಾಕ್ತಿವಿ ಅಂದಿದ್ದೆ, ಅನಿವಾರ್ಯವಾಗಿ ಮತ್ತೆ ಹೇಳಬೇಕಾಗುತ್ತೆ ಎಂದು ಟ್ರೋಲ್ ಮಾಡುವವರ ವಿರುದ್ಧ ಹರಿಹಾಯ್ದರು.
ನಿಂದಕರು ಇರ್ಬೇಕು. ಸೋಷಿಯಲ್ ಮೀಡಿಯಾದಲ್ಲಿ (Social Media) ಒಳ್ಳೆಯದು ಇದೆ ಅದನ್ನ ಟ್ರೋಲ್ ಮಾಡಿ. ನಾನೇನು ಕನ್ನಡ ಹೇಳಿಕೊಡಲ್ಲ, ನನ್ನ ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವುದೇ ಪೋಷಕರು, ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಈ ಟ್ರೋಲ್‌ನಿಂದ ಯಾವನ ಹೊಟ್ಟೆನೂ ತುಂಬೊಲ್ಲ. ನನ್ನ ಹೆಸರನ್ನು ಹಾಳು ಮಾಡೋಕಾಗಲ್ಲ.ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.