ಚೆನ್ನೈ,- “ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕುವುದು ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ಯಾವುದೇ ವೈವಾಹಿಕ ಹಕ್ಕು ಇಲ್ಲ,” ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಲಿವಿಂಗ್ ಟುಗೆದರ್‌ನಲ್ಲಿ ಒಟ್ಟಿಗೆ ವಾಸಿಸುವುದರಿಂದ ಕೌಟುಂಬಿಕ ನ್ಯಾಯಾಲಯದ ಮುಂದೆ ವೈವಾಹಿಕ ವಿವಾದವನ್ನು ಎತ್ತುವ ಯಾವುದೇ ಕಾನೂನು ಹಕ್ಕನ್ನು ಕಕ್ಷಿದಾರರಿಗೆ ನೀಡುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಕೊಯಮತ್ತೂರಿನ ಆರ್ ಕಲೈಸೆಲ್ವಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಜಾಗೊಳಿಸಿ ನ್ಯಾಯಮೂರ್ತಿಗಳಾದ ಎಸ್ ವೈದ್ಯನಾಥನ್ ಮತ್ತು ಆರ್ ವಿಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ದೀರ್ಘ ಸಮಯದವರೆಗೆ ಜೊತೆಯಾಗಿ ಬದುಕುವುದು ಅಥವಾ ಲಿವಿಂಗ್ ಟುಗೆದರ್‌ನಲ್ಲಿ ಇರುವವರು ನ್ಯಾಯಾಲಯದ ಮುಂದೆ ಯಾವುದೇ ವೈವಾಹಿಕ ವಿವಾದದ ಬಗ್ಗೆ ಅರ್ಜಿ ಸಲ್ಲಿಸಲು ಆಗದು. ಲಿವಿಂಗ್ ಟುಗೆದರ್‌ನಲ್ಲಿ ಇರುವವರಿಗೆ ವೈವಾಹಿಕ ಹಕ್ಕುಗಳು ಇರುವುದಿಲ್ಲ. ಕಾನೂನು ಪ್ರಕಾರವಾಗಿ ವಿವಾಹವಾಗಿದ್ದರೆ ಮಾತ್ರ ವೈವಾಹಿಕ ಹಕ್ಕು ಇರಲಿದೆ,” ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಮೂಲತಃ, ಕಲೈಸೆಲ್ವಿ ವಿಚ್ಛೇದನ ಕಾಯಿದೆ 1869 ರ ಸೆಕ್ಷನ್ 32 ರ ಅಡಿಯಲ್ಲಿ ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಲು ಕೊಯಮತ್ತೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮತ್ತು ಕುಟುಂಬ ನ್ಯಾಯಾಲಯವು ಫೆಬ್ರವರಿ 14, 2019 ರಂದು ಮನವಿಯನ್ನು ತಿರಸ್ಕರಿಸಿತು.
ಇದನ್ನು ಕಲೈಸೆಲ್ವಿ ಹೈಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ್ದರು, ಕಾನೂನಿನ ಅಡಿಯಲ್ಲಿ ವಿವಾಹವನ್ನು ನೆರವೇರಿಸದಿದ್ದಲ್ಲಿ, ದೀರ್ಘ ಸಹಬಾಳ್ವೆ ಅಥವಾ ಲಿವಿಂಗ್ ಟುಗೆದರ್ ನಡೆಸುತ್ತಿರುವವರು ಕಾನೂನು ಪ್ರಕಾರ ವೈವಾಹಿಕ ಹಕ್ಕುಗಳಿಗಾಗಿ ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿಹೈಕೋರ್ಟ್ನಲ್ಲಿಯೂ ಕೂಡಾ ಅರ್ಜಿ ರದ್ದಾಗಿದೆ.