ಸ್ಯಾಂಡಲ್ ವುಡ್ ಪ್ರಿನ್ಸ್ ದ್ರುವ ಸರ್ಜಾ ಫ್ಯಾಮಿಲಿಗೆ ಈ ವರ್ಷ ಬ್ಯಾಡ್ ಇಯರ್ .. ಆದ್ರೆ ಇಂದು ದ್ರುವ ಪಾಲಿಗೆ ಗುಡ್ ಡೇ .. ಯಾಕಂದ್ರೆ ಇಂದು ದ್ರುವ ದಾಂಪತ್ಯಕ್ಕೆ ಒಂದು ವರ್ಷದ ಸಂಭ್ರಮ.. ಕಳೆದ ನವೆಂಬರ್ ೨೪ ಕ್ಕೆ ತಾರೀಖಿಗೆ ದ್ರುವ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಕುತ್ತಿಗೆಗೆ ತಾಳಿ ಕಟ್ಟೋದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು..
ಇದೀಗ ಒಂದು ವರ್ಷದ ಮದುವೆ ಸಂಭ್ರಮದಲ್ಲಿರೋ ದ್ರುವ ಆಂಡ್ ಪ್ರೇರಣಾಗೆ ಅಭಿಮಾನಿಗಳು ಶುಭಾಷಯಗಳ ಮಹಾಪುರವನ್ನೇ ಹರಿಸಿದ್ದಾರೆ . ಇವರಿಬ್ಬರು ಸಂತೋಷವಾಗಿ ಹೀಗೆ ಖುಷಿ ಖುಷಿಯಾಗಿ ಜೀವನ ಸಾಗಿಸಲಿ ಅಂತ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕುತ್ತಿದ್ದಾರೆ .
ದ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್ ೧೫ ವರ್ಷಗಳಿಂದ ಇಬ್ಬರು ಪ್ರೀತಿ ಮಾಡುತ್ತಿದ್ದು ೮ ನೇ ತರಗತಿಯಲ್ಲೇ ದ್ರುವ ಪ್ರೇರಣಾ ಅವರನ್ನು ಲವ್ ಮಾಡಲು ಶುರುಮಾಡಿದ್ದು; ಕುಟುಂಬದವರ ಸಮ್ಮತಿ ಮೇರೆಗೆ ಕಳೆದ ವರ್ಷಇಬ್ಬರು ದಾಂಪತ್ಯಜೀವಕ್ಕೆ ಕಾಲಿರಿಸಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ .
ಇನ್ನೊಂದೆಡೆ ಈಗಾಗಲೇ ಹಲವಾರು ಸಿನಿಮಾ ಪ್ರಾಜೆಕ್ಟ್ ಗಳನ್ನು ಮಾಡುತ್ತಿರುವ ದ್ರುವ, ಸದ್ಯ ಟ್ರೆಂಡ್ ಕ್ರಿಯೇಟ್ ಮಾಡಿರೋ ಪೊಗರು ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ . ಇದರ ಜೊತೆಗೆ ದ್ರುವ ತಮ್ಮ ಕೂದಲಿಗೆ ಕತ್ತರಿ ಹಾಕೋದರ ಮೂಲಕ ಸುದ್ದಿ ಮಾಡಿದ್ರು ..