English English Kannada Kannada

ಮಾಫಿಯಾಕ್ಕೆ ಶಿಕ್ಷಣ ಬಲಿ ! ಬೀದರ್‌ನ ಔರಾದ್‌ನಲ್ಲಿ ಗಣ್ಯ ವ್ಯಕ್ತಿಗಳಿಂದಲೇ ಮರಳು ಮಾಫಿಯಾ. ಮಾಫಿಯಾ ಅಬ್ಬರಕ್ಕೆ ಬಲಿಯಾಗಿದೆ ಬದುಕು. ರಸ್ತೆ ಕತೆ ಕೇಳುವವರೇ ಇಲ್ಲ

ಎಲ್ಲಿ ಕಣ್ಣು ಹಾಯಿಸಿದ್ರೂ ಮರಳಿನ ರಾಶಿ. ಕೃಷಿ ಭೂಮಿ ತುಂಬಾ ಗುಡ್ಡದೆತ್ತರಕ್ಕೆ ಹಬ್ಬಿರೋ ಮರಳ ದಿಬ್ಬಗಳು. ಹೂಂಕರಿಸುತ್ತಾ, ಬೊಬ್ಬಿರಿಯುತ್ತಾ ಓಡಾಡೋ ರಕ್ಕಸ ಗಾತ್ರದ ಲಾರಿಗಳು ಸ್ಳಳೀಯರ ನಿದ್ದೆಗೆಡಿಸಿದೆ. ಇದು ಬೀದರ್‌ ಜಿಲ್ಲೆಯ ಔರಾದ್‌ ಪಟ್ಟಣದ ಹೋರವಲಯದಲ್ಲಿ ಬರುವ ನರಸಿಂಗ್ ತಾಂಡದ ಬಳಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ದೃಶ್ಯಗಳು.

ಔರಾದ್‌ ಪಟ್ಟಣದಲ್ಲಿ ಅಕ್ರಮ ಮರಳುಗಾರಿಕೆಯ ಅಬ್ಬರ ಹೆಚ್ಚಿದೆ. ಈ ದಂಧೆಕೋರರು ತಾವು ಕಾನೂನು ಬಾಹಿರವಾಗಿ ತೆಗೆಯುವ ಮರಳನ್ನ ನರಸಿಂಗ್‌ ತಾಂಡದ ಬಳಿ ಇರುವ ಕೃಷಿ ಭೂಮಿಯಲ್ಲಿ ತಂದು ಅನಧಿಕೃತವಾಗಿ  ಸಂಗ್ರಹಿಸುತ್ತಿದ್ದಾರೆ. ಇಲ್ಲಿ ಸಂಗ್ರಹ ಮಾಡಿ ಮತ್ತೆ ಮಾರಾಟ ಮಾಡುತ್ತಿದ್ದಾರೆ.

ಪ್ರತಿನಿತ್ಯ ನೂರಾರು ಲೋಡ್‌ ಲಾರಿಗಳು ಗ್ರಾಮದ ರಸ್ತೆಯಲ್ಲಿ ಓಡಾಡುತ್ತಿರೋದ್ರಿಂದ ರಸ್ತೆಯೆಲ್ಲಾ ಸರ್ವನಾಶ ಆಗಿದೆ. ರಸ್ತೆ ತುಂಬಾ ಬರೀ ಹೊಂಡ ಗುಂಡಿಗಳಿಂದಲೇ ತುಂಬಿದೆ. ಗುಂಡಿಗಳಲ್ಲಿ ಲಾರಿ ಬಿಟ್ರೆ ಬೇರೆ ವಾಹನಗಳು ಓಡಾಡೋದೇ ಕಷ್ಟ ಸಾಧ್ಯ ಆಗಿದೆ. ಹಾಗಾಗಿ ಇಲ್ಲಿನ ಜನ ಈ ರಸ್ತೆಯಲ್ಲಿ ಓಡಾಡೋದಕ್ಕೆ ಭಯ ಬೀಳುತ್ತಿದ್ದಾರೆ.

ಇನ್ನೊಂದು ನೋವಿನ ಸಂಗತಿ ಅಂದ್ರೆ ಈ ರಸ್ತೆ ಅವ್ಯವಸ್ಥೆಯಿಂದ ತಾಂಡದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವೇ ಆಗುತ್ತಿಲ್ಲ. ಕೊರೋನಾದಿಂದ ಎರಡು ವರ್ಷ ಮಕ್ಕಳು ಶಾಲೆಗೇ ಹೋಗಲಿಲ್ಲ. ಈಗ ಶಾಲೆ ಪ್ರಾರಂಭ ಆಗಿದೆ ಆದ್ರೆ ಈ ರಸ್ತೆ ಹಾಳಾಗಿರುವುದರಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ

ರಸ್ತೆ ಸಂಪೂರ್ಣ ಹಾಳಾಗಿ ಹೋಗಿರುವುದರಿಂದ  ಹೆತ್ತವರು ತಮ್ಮ  ಖಾಸಗಿ ವಾಹನಗಳಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಡ್ರಾಪ್‌ ಮಾಡಲು ಭಯ ಬೀಳುತ್ತಿದ್ದಾರೆ. ಎಲ್ಲಿ ರಸ್ತೆ ಗುಂಡಿಗಳಿಂದ ರಸ್ತೆ ಅಪಘಾತವಾಗಿ ಮಕ್ಕಳು ಬಲಿಯಾಗ್ತಾರೋ ಅನ್ನೋ ಭಯ ತಂದೆ ತಾಯಿಯನ್ನು ಕಾಡುತ್ತಿದೆ. ಹಾಗಾಗಿ ತಾಂಡಾದ ಮಕ್ಕಳು‌ ಶಾಲಾ‌ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ದುರಂತ ಅಂದ್ರೆ ಈ ಅಕ್ರಮ ಮರಳುಗಾರಿಕೆ ದಂಧೆಯನ್ನು ಗ್ರಾಮದ ಪ್ರಭಾವಿಗಳೇ ಮಾಡುತ್ತಿದ್ದಾರೆ. ಹಾಗಾಗಿ ಪಂಚಾಯತ್‌ ಸದಸ್ಯರು ಇವರ ವಿರುದ್ಧ ಕ್ರಮಕೈಗೊಳ್ಳಲು ಭಯ ಬೀಳುತ್ತಿದ್ದಾರೆ. ಹಾಗಾಗಿ ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾದ  ಪ್ರಭು ಚವ್ಹಾಣ ಅವರು ಮಧ್ಯಪ್ರವೇಶಿಸಿ ಅಕ್ರಮದಾರರ ವಿರುದ್ಧ ಕ್ರಮ ಕೈಗೊಳ್ಳಲಿ. ಜಿಲ್ಲಾಧಿಕಾರಿಗಳು ಹಾಳಾದ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ವಾಹನ ಗಳನ್ನು ಓಡಾಡಲು ಅನುಕೂಲ ಮಾಡಿ ಶಿಕ್ಷಣ ದಿಂದ ವಚಿತರಾದ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದಾಗಬೇಕು ಅನ್ನೋದು ಸ್ಥಳೀಯರ ಕಳಕಳೀಯ ಮನವಿ

ಔರಾದ್‌ನಿಂದ ಶಿವಾನಂದ ಬೇದ್ರೆ, ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article