Visit Channel

ಮಗಳ ಹುಟ್ಟುಹಬ್ಬಕ್ಕೆ ಹಾಡೊಂದನ್ನು ರಿಕ್ರಿಯೇಟ್ ಮಾಡಿದ ಸ್ಟಾರ್ ನಟ

5f47ad376a9bb

ಅಂಜಲಿ.. ತಮಿಳಿನ ಸೂಪರ್ ಹಿಟ್ ಸಿನಿಮಾ.. ೧೯೯೦ರಲ್ಲಿ ಮಣೀರತ್ನಂ ನಿರ್ದೇಶನದಲ್ಲಿ ರಿಲೀಸ್ ಆಗಿರೋ ಈ ಸಿನಿಮಾ.. ಸೌಂಡ್ ಮಾಡೋದರ ಜೊತೆಗೆ ಪೈಸಾ ವಸೂಲಿ ಮಾಡಿದ ಸಿನಿಮಾವಾಗಿತ್ತು. ಈ ಅಂಜಲಿ ಸಿನಿಮಾ ಬುದ್ದಿಮಾಂದ್ಯ ಮಗುವಿನ ಸುತ್ತ ನಡೆಯೋ ಕಥೆಯಾಗಿದ್ದು ; ಹಿಂದಿ ಹಾಗೂ ತೆಲುಗಿಗೆ ಡಬ್ ಆಗೋದರ ಜೊತೆಗೆ ೩ ನ್ಯಾಷ್ ನಲ್ ಅವಾರ್ಡ್ ಗಳನ್ನು ಗಿಟ್ಟಿಸಿಕೊಂಡಿತ್ತು. ಚಿತ್ರದಲ್ಲಿ ಬೇಬಿ ಶ್ಯಾಮಿಲಿ ಮಗುವಿನ ಪಾತ್ರದಲ್ಲಿ ಮಿಂಚಿದ್ರು..

ಅಯ್ಯೋ ಇದೆಲ್ಲಾ ಓಲ್ಡ್ ಸ್ಟೋರಿ ಅಂತ ಯೋಚನೆ ಮಾಡ್ಬೇಡಿ.. ಯಾಕಂದ್ರೆ ಸದ್ಯ ಈ ಸಿನಿಮಾದ ಆಂಜಲಿ ಹಾಡು ರಿ ಕ್ರಿಯೇಟ್ ಆಗಿದೆ ಅನ್ನೋದೆ ಲೇಟೆಸ್ಟ್ ಸ್ಡೋರಿ.. ಹೌದು ಖ್ಯಾತ ನಟರೊಬ್ಬರು ಈ ಅಂಜಲಿ ಸಿನಿಮಾದ ಹಾಡೊಂದನ್ನು ರಿಕ್ರಿಯೇಟ್ ಮಾಡಿದ್ದಾರೆ ..ಈ ರೀತಿ ಸೂಪರ್ ಹಿಟ್ ಸಿನಿಮಾ ಅಂಜಲಿಯ ಹಾಡನ್ನು ರಿಕ್ರಿಯೇಟ್ ಮಾಡಿದ್ದು ತೆಲುಗಿನ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ .. ತಮ್ಮ ಮಗಳ ಸ್ಪೆಷಲ್ ಡೇಗೆ ಸ್ಪೆಷಲ್ ಆಗೆ ಈ ಗಿಫ್ಟ್ ಕೊಟ್ಟಿದ್ದಾರೆ .

ಅಲಾ ವೈಕುಂಠಪುರಮುಲೋ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಮಗಳು ಅರ್ಹಾಳ ೪ ನೇ ವರ್ಷದ ಬರ್ತಡೇಯನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ .ಅಲ್ಲು ಅರ್ಜನ್ ಮನೆಯಲ್ಲೇ ಮಗಳ ಹುಟ್ಟು ಹಬ್ಬ ಆಚರಿಸಿದ್ದು ಕೆಂಪು ಬಣ್ಣದ ಬಾಕ್ಸ್ ಒಂದರಲ್ಲಿ ಮಗಳಿಗೆ ಗಿಫ್ಟ್ ಕೊಟ್ಟಿದ್ದು.ಮಗಳು ಕೂಡ ಖುಷಿಯಿಂದ ಗಿಫ್ಟ್ ಸ್ವೀಕರಿಸಿದ್ದಾಳೆ .. ಈ ಫೋಟೋ ಇನ್ಸಾಟಾಗ್ರಾಂ ನಲ್ಲಿ ಅಪ್ ಲೋಡ್ ಆಗಿದೆ . ಅಂಜಲಿ ಅಂಜಲಿ ಅಂಜಲಿ ಚಿಲಿಕೆ ನವ್ವುಲ ಪೂವುಲ ಜಾಬಿಲಿ ಹಾಡು ಮರುಸೃಷ್ಟಿಗೊಂಡಿದ್ದು .ಈ ಹಾಡಿನಲ್ಲಿ ಮಗಳು ಅರ್ಹಾ, ಮಗ ಅಯಾನ್ ಹಾಗೂ ಕೆಲವೊಂದು ಮಕ್ಕಳು ಕಾಣಿಸಿಕೊಂಡಿದ್ದು ಹಾಡನ್ನು ಎಂಜಾಯ್ ಮಾಡ್ತಾ ನಟಿಸಿದ್ದಾರೆ ..ಜೊತೆಗೆ ಕೊನೆಯಲ್ಲಿ ಅಲ್ಲು ಅರವಿಂದ್ ಹಾಗೂ ಅಲ್ಲು ಅರ್ಜನ್ ಕೂಡ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ . ಅಂದಹಾಗೆ ಅಂಜಲಿ ಸಿನಿಮಾದಲ್ಲಿ ೩ ವರ್ಷದ ಬೇಬಿ ಶಾಮಿಲಿ ಯಾವ ರೀತಿ ಕಾಣಿಸಕೊಂಡಿದ್ರೋ ಅದೇ ರೀತಿ ತನ್ನ ಮಗಳು ಅರ್ಹಾಳ ಬಟ್ಟೆ ಹೇರ್ ಸ್ಟೈ ಲನ್ನು ರಿಕ್ರಿಯೇಟ್ ಮಾಡಿದ್ದಾರೆ ..

  • ದೀಪಿಕಾ

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.