Prayag Raj : ಮಹಾಕುಂಭ ಮೇಳದ (Mahakumbha Mela) ಮೌನಿ ಅಮಾವಾಸ್ಯೆ ಯಂದು ಕುಂಭಮೇಳದಲ್ಲಿ ಕಾಲ್ತುಳಿತ (Stampede at Kumbamela) ಸಂಭವಿಸಿದ್ದು ಹಲವರು ಸಾ*ನ್ನಪ್ಪಿದ್ದು, ಸಾಕಷ್ಟು ಜನರು ಗಾಯಗೊಂಡಿದ್ದಾರೆ (Injured) . ಇನ್ನು ಮೌನಿ ಅಮಾವಾಸ್ಯೆಯಂದು (New moon) ಪವಿತ್ರ ಸ್ನಾನ ಮಾಡಲು ಸಾಕಷ್ಟು ಭಕ್ತರು ಆಗಮಿಸಿದ್ದು,ಈ ವೇಳೆ ನೂಕು ನುಗ್ಗಲು ಉಂಟಾಗಿ (Cause a rush) ಕಾಲ್ತುಳಿತ ಸಂಭವಿಸಿದೆ.ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ (Injured to hospital) ದಾಖಲಿಸಲಾಗಿದೆ.
ಜನವರಿ 13 ರಿಂದ ಮಹಾಕುಂಭಮೇಳ ಆರಂಭವಾಗಿದೆ (Mahakumbha Mela has started) .ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತ ಸಾಗರವೇ ಹರಿದು ಬರುತ್ತಾ ಇದಾರೆ.ಮೌನಿ ಅಮವಾಸ್ಯೆಯಂದು (Amavasya day) ಅಮೃತ ಸ್ನಾನವು ಮಹಾ ಕುಂಭದ ಅತ್ಯಂತ ಮಹತ್ವದ (Mahakumbha) ಆಚರಣೆಯಾಗಿದೆ.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದಂಡು (Crowd of devotees) ಹರಿದು ಬಂದರಿಂದ ಕಾಲ್ತುಳಿತ ಉಂಟಾಗಿದೆ.ಇನ್ನು ಕಾಲ್ತುಳಿತದಲ್ಲಿ ಗಾಯಗೊಂಡವರನ್ನ ಕರೆದ್ಯೋಯಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.ಕಾಲ್ತುಳಿತದಲ್ಲಿ ಸಿಲುಕಿ (Stuck in a stampede) ಕೊಂಡವರಿಗಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ.

ಕಾಲ್ತುಳಿತ ಘಟನೆ ಸಂಭವಿಸಿದ ಬೆನ್ನಲ್ಲೇ ಪುಣ್ಯಸ್ನಾನಕ್ಕೆ ತಾತ್ಕಾಲಿಕ (Temporary for baptism) ತಡೆ ನೀಡಲಾಗಿದೆ.ಕಾಲ್ತುಳಿತದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಮುರಿದು ಹಾಕಿದ್ದಾರೆ.ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮಹಾಕುಂಭಮೇಳದ ಪರಿಸ್ಥಿತಿಯನ್ನುಅವಲೋಕಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಅವರಿಂದ ಮಾಹಿತಿ ಪಡೆದು ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.ಇನ್ನು ಕೇಂದ್ರ ಸರ್ಕಾರದಿಂದ (The Central Govt) ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಗಂಗಾನದಿ ಸಮೀಪದಲ್ಲಿರುವ ಘಾಟ್ನಲ್ಲಿ ಸ್ನಾನ ಮಾಡುವಂತೆ ಭಕ್ತರಿಗೆ ಯೋಗಿ ಆದಿತ್ಯನಾಥ್ (Yogi Adityanath) ಮನವಿ ಮಾಡಿದ್ದಾರೆ.