Mysore: ನಂಜನಗೂಡು ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ನಮ್ಮ ಬೆಂಬಲಿಗರು ಟಿಕೆಟ್ ವಿಷಯವನ್ನು ಮರು ಪರಿಶೀಲಿಸಿ ಮಹದೇವಪ್ಪನವರಿಗೇ ಟಿಕೆಟ್ ನೀಡಬೇಕೆಂದು ಪತ್ರಿಕಾಗೋಷ್ಠಿಯನ್ನು ನಡೆಸಿರುವುದು ನನ್ನ ಗಮನಕ್ಕೆ(mahadevappa supports dhruvanarayan son) ಬಂದಿರುತ್ತದೆ.
ಆತ್ಮೀಯ ಬಂಧುಗಳೇ, ರಾಜಕೀಯದ ಆಚೆಗೂ ಕೂಡಾ ಮಾನವೀಯತೆ ಎಂಬುದು ಅತಿ ಮುಖ್ಯವಾದ ಸಂಗತಿಯಾಗಿರುವ ಕಾರಣ ಶ್ರೀ ಧೃವ ನಾರಾಯಣ್(Dhruva Narayan) ಅವರ ಅಗಲಿಕೆಯ ಈ ಸಂದರ್ಭದಲ್ಲಿ ರಾಜಕೀಯಕ್ಕಿಂತಲೂ ಮಾನವೀಯತೆ
ಮುಖ್ಯವೆಂದು ನಂಜನಗೂಡು ಕ್ಷೇತ್ರದಲ್ಲಿ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸಿರುತ್ತೇನೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪನವರು (H.C.Madevappa) ನಂಜನಗೂಡು ಟಿಕೆಟ್ರೇಸ್ನಿಂದ ಹಿಂದೆ ಸರಿದಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಂಜನಗೂಡು ಟಿಕೆಟ್ ವಿಚಾರದಲ್ಲಿ ದಯಮಾಡಿ ಯಾರೂ ಕೂಡಾ ಗೊಂದಲ ಸೃಷ್ಟಿ ಮಾಡದೇ ಸಮಚಿತ್ತತೆಯಿಂದ (mahadevappa supports dhruvanarayan son) ವರ್ತಿಸಬೇಕೆಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಹಾಗೂ ನಂಜನಗೂಡು ಟಿಕೆಟ್ ವಿಷಯದಲ್ಲಿ ನಾನು ನನ್ನ ಆತ್ಮ ಸಾಕ್ಷಿಗೆ ಅನುಗುಣವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದು,
ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಮಾನವೀಯತೆ ಮೊದಲು ರಾಜಕಾರಣ ನಂತರ ಎಂದು ಧೃವ ನಾರಾಯಣ ಪುತ್ರನಿಗೆ ಟಿಕೆಟ್ನೀಡಲು ಬೆಂಬಲ ಸೂಚಿಸಿದ್ದಾರೆ.
ತಮ್ಮ ಅಗಲಿದ ಸ್ನೇಹಿತನಿಗಾಗಿ ತಾವು ಹಿಂದೆ ಸರಿದಿದ್ದಾರೆ.
ಇದಕ್ಕೂ ಮುನ್ನ ಒಬ್ಬ ಹಿರಿಯ ನಾಯಕನನ್ನು ಕಳೆದುಕೊಂಡು ನಾವೆಲ್ಲರೂ ಬೇಸರದಲ್ಲಿ ಇದ್ದೇವೆ. ಇಂತಹ ಅಘಾತಕಾರಿ ಸಂದರ್ಭದಿಂದ ಹೊರ ಬರಲು ಅವರ ಕುಟುಂಬದ ಜೊತೆ ನಾವೆಲ್ಲರೂ ಕೂಡಾ ನಿಲ್ಲಬೇಕಿದೆ.
ಆದರೆ ಕೆಲವು ಕಾಮನ್ ಸೆನ್ಸ್(Common Sense) ಇಲ್ಲದ ಜನರು ಒಂದು ಅಮೂಲ್ಯವಾದ ಪ್ರಾಣ ಹೋದಂತಹ ಸಂದರ್ಭದಲ್ಲೂ ರಾಜಕೀಯವನ್ನು ಮಾತನಾಡುತ್ತಿರುವುದು ನನ್ನಲ್ಲಿ ಅತ್ಯಂತ ಬೇಸರವನ್ನು ಉಂಟು ಮಾಡಿದೆ.
ಜೀವಕ್ಕಿಂತಲೂ ಪದವಿ ಆಗಲೀ, ಅಧಿಕಾರವಾಗಲೀ ಖಂಡಿತಾ ದೊಡ್ಡದಲ್ಲ. ಈ ಸಂಗತಿ ಜಗತ್ತಿಗೇ ತಿಳಿದಿದೆ. ಹೀಗಿರುವಾಗ ಈ ಸಂಕಷ್ಟದ ಸಂದರ್ಭದಲ್ಲಿ ಟಿಕೆಟು, ಪದವಿ ಎಂದೆಲ್ಲಾ ಅಸಂಬದ್ಧವಾಗಿ ಮಾತನಾಡುವುದನ್ನು ವ್ಯಕ್ತಿಗಳು ಹಾಗೂ ಮಾಧ್ಯಮಗಳ ಆದಿಯಾಗಿ ಎಲ್ಲರೂ ನಿಲ್ಲಿಸಿ ನೊಂದ ನೋವಿನಲ್ಲಿರುವ ಕುಟುಂಬಕ್ಕೆ ಧೈರ್ಯ ತುಂಬಬೇಕು.
ವೈದ್ಯಕೀಯ ಶಿಕ್ಷಣವನ್ನು ಪಡೆದಿರುವ ನನಗೆ Life is paramount important than anything ಎನ್ನುವ ಸಂಗತಿಯು ತುಸು ಚೆನ್ನಾಗೇ ತಿಳಿದಿದೆ.
ಹೀಗಾಗಿ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳನ್ನು ಪಕ್ಷವು ನೋಡಿಕೊಳ್ಳುತ್ತದೆ, ಈಗ ನಾವೆಲ್ಲರೂ ನೋವಿನಲ್ಲಿರುವ ಕುಟುಂಬದತ್ತ ಗಮನಹರಿಸೋಣ ಅಷ್ಟೇ ಎಂದು ಫೇಸ್ಬುಕ್ ಮುಖಪುಟದಲ್ಲಿ ಸ್ಪಷ್ಟನೆ ನೀಡಿದ್ದರು.