ಜಾನಪದ ಕಲಾವಿದ ಎಂ.ಮಹಾದೇವಸ್ವಾಮಿ ಅವರಿಗೆ ರಾಜ್ಯದ ಪ್ರಥಮ ಹಾಗೂ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ(Mysuru Universitry) ಗೌರವ ಡಾಕ್ಟರೇಟ್(Doctrate) ಪ್ರಕಟಿಸಿದೆ. ಇದೇ ಮಾರ್ಚ್ 22 ರಂದು ಮೈಸೂರಿನಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ತಮ್ಮದೆ ಆದ ಗ್ರಾಮೀಣ ಶೈಲಿಯಲ್ಲಿ ಜನಪದವನ್ನು ಕಟ್ಟಿ ಹಾಡುವ ಮೂಲಕ ಜಾನಪದ ಸೊಗಡಿನ ಜೊತೆಗೆ ಮಹದೇಶ್ವರ, ಚಾಮುಂಡೇಶ್ವರಿ, ಬಿಳಿಗಿರಿ ರಂಗಸ್ವಾಮಿ, ಸಿದ್ದಪ್ಪಾಜಿ, ಮಂಟೇಸ್ವಾಮಿ, ಶನಿಮಹಾತ್ಮ ಮುಂತಾದ ದೇವಾನು ದೇವತೆಗಳು ಹಾಗೂ ಪವಾಡ ಪುರುಷರ ಕಥೆಗಳನ್ನ ಹೇಳಿ ಜಾನಪದ ಗೀತೆಗಳನ್ನು ಮನೆ ಮನೆಗೆ ತಲುಪಿದ ಕೀರ್ತಿ ಮಳವಳ್ಳಿ ಮಹಾದೇವಸ್ವಾಮಿ ಅವರಿಗೆ ಸಲ್ಲುತ್ತದೆ.

ನಮ್ಮ ನೆಲಮೂಲದ ಸಂಸ್ಕೃತಿಯನ್ನು ತಮ್ಮ ಸಾಂಸ್ಕೃತಿಕ ಪ್ರತಿಭೆಯ ಮೂಲಕ ಜನರ ಮನೆಮನಕ್ಕೆ ತಲುಪಿಸುವ ಕಾರ್ಯ ಮಾಡುತ್ತಿರುವ ನಮ್ಮ ಹೆಮ್ಮೆಯ ಜಾನಪದ ಗಾಯಕರಾದ ಶ್ರೀ ಮಳವಳ್ಳಿ ಮಹಾದೇವಸ್ವಾಮಿ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು.
- Source Credits : ಪರಿಸರಪರಿವಾರ