- ಅನುಮತಿ ಇಲ್ಲದ ಡೈಮೆಫ್ಲುಥ್ರಿನ್ ಬಳಕೆಯ (Maharashtra bans comfort mosquito repellent) ಆರೋಪ, ಮಹಾರಾಷ್ಟ್ರದಲ್ಲಿ ಮಾರಾಟ–ಉತ್ಪಾದನೆ ನಿಷೇಧ
- ಹರ್ಬಲ್ ಎಂಬ ಹೆಸರಿನ ಹಿಂದೆ ವಿಷಕಾರಿ ಸತ್ಯ: ಸೊಳ್ಳೆ ನಿವಾರಕ ಅಗರಬತ್ತಿಗಳ ಮೇಲೆ ಸರ್ಕಾರದ ಕಣ್ಣು
- CIBRC ಅನುಮತಿ ಇಲ್ಲದೇ ಮಾರಾಟ, ಕೀಟನಾಶಕ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ
ಮನೆಗಳಲ್ಲಿ ಸಾಯಂಕಾಲವಾದರೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಈ ಸಮಸ್ಯೆಯಿಂದ (Maharashtra bans comfort mosquito repellent) ತಪ್ಪಿಸಿಕೊಳ್ಳಲು ಅನೇಕರು ಸೊಳ್ಳೆ ನಿವಾರಕ ಅಗರಬತ್ತಿಗಳನ್ನು ಬಳಸುತ್ತಾರೆ.
ಅದರಲ್ಲಿ ‘ಕಂಫರ್ಟ್’ (Comfort) ಅಗರಬತ್ತಿಯು ಜನಪ್ರಿಯವಾಗಿತ್ತು. ಆದರೆ ಇತ್ತೀಚೆಗೆ ಈ ಅಗರಬತ್ತಿಗೆ ಸಂಬಂಧಿಸಿದಂತೆ ಗಂಭೀರವಾದ ವಿಷಯವೊಂದು ಬಹಿರಂಗವಾಗಿದ್ದು, ಸಾರ್ವಜನಿಕ ಆರೋಗ್ಯದ ಬಗ್ಗೆ ಆತಂಕ ಉಂಟಾಗಿದೆ.
ಮಹಾರಾಷ್ಟ್ರ ಸರ್ಕಾರ ನಡೆಸಿದ ತನಿಖೆಯಲ್ಲಿ, ‘ಕಂಫರ್ಟ್’ ಸೊಳ್ಳೆ ನಿವಾರಕ ಅಗರಬತ್ತಿಯಲ್ಲಿ ಅನುಮತಿ ಇಲ್ಲದ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಭಾರತದಲ್ಲಿ ಗೃಹ ಬಳಕೆಯ ಕೀಟನಾಶಕಗಳ ಸುರಕ್ಷಿತ ಬಳಕೆಗೆ ಪ್ರೋತ್ಸಾಹ ನೀಡುವ (Maharashtra bans comfort mosquito repellent) ಲಾಭರಹಿತ ಸಂಸ್ಥೆಯಾದ ಹೋಮ್ ಇನ್ಸೆಕ್ಟ್ ಕಂಟ್ರೋಲ್ ಅಸೋಸಿಯೇಷನ್ (HICA), ಸರ್ಕಾರ ಕೈಗೊಂಡಿರುವ ಈ ಕ್ರಮವನ್ನು ಸ್ವಾಗತಿಸಿದೆ.
‘ಕಂಫರ್ಟ್’ ಅಗರಬತ್ತಿಯ ಮಾರಾಟ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ನಡೆಯುತ್ತಿತ್ತು.
ಈ ಉತ್ಪನ್ನವನ್ನು ‘ಧೂಪ್ ಛಾವ್ ಕಂಪನಿ’ ಉತ್ಪಾದಿಸುತ್ತಿದ್ದು, ಯಾವುದೇ ಸರಿಯಾದ ಅನುಮತಿಯಿಲ್ಲದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ನಿರ್ಲಕ್ಷ್ಯವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರ ಕೃಷಿ ಇಲಾಖೆಯ ಪ್ರಯೋಗಾಲಯ ಪರೀಕ್ಷೆಗಳಲ್ಲಿ ‘ಕಂಫರ್ಟ್’ ಅಗರಬತ್ತಿಯಲ್ಲಿ ಡೈಮೆಫ್ಲುಥ್ರಿನ್ (Dimefluthrin) ಎಂಬ ರಾಸಾಯನಿಕ ಪತ್ತೆಯಾಗಿದೆ.
ಈ ರಾಸಾಯನಿಕವನ್ನು ಕೀಟನಾಶಕವಾಗಿ ಬಳಸಲು ಸರ್ಕಾರದ ಸ್ಪಷ್ಟ ಅನುಮತಿ ಅಗತ್ಯವಿದ್ದು, ಸಂಬಂಧಿತ ಕಂಪನಿಗೆ ಯಾವುದೇ ಪರವಾನಗಿ ಇರಲಿಲ್ಲ.
ಮುಂಬೈನಲ್ಲಿ ನಡೆದ ದಾಳಿಯ ವೇಳೆ ಅಧಿಕಾರಿಗಳು ಈ ಅಗರಬತ್ತಿಗಳ ಹಲವಾರು ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ, CIBRC (ಕೇಂದ್ರ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ) ಯಿಂದಲೂ ಯಾವುದೇ ಅನುಮೋದನೆ ಪಡೆದಿರಲಿಲ್ಲ. ಹೀಗಾಗಿ ಕೀಟನಾಶಕ ಕಾಯ್ದೆ 1968 ಮತ್ತು ಕೀಟನಾಶಕ ನಿಯಮಗಳು 1971ರ ಅಡಿಯಲ್ಲಿ ಈ ಉತ್ಪನ್ನದ ಉತ್ಪಾದನೆ ಮತ್ತು ಮಾರಾಟವನ್ನು ಕಾನೂನುಬಾಹಿರವೆಂದು ಘೋಷಿಸಲಾಗಿದೆ.
ಇನ್ನೊಂದು ಆತಂಕಕಾರಿ ಅಂಶವೆಂದರೆ, ಹಲವಾರು ಸೊಳ್ಳೆ ನಿವಾರಕ ಅಗರಬತ್ತಿಗಳನ್ನು ‘ಹರ್ಬಲ್’ ಅಥವಾ ‘ಸಾವಯವ’ ಎಂದು ಜಾಹೀರಾತು ಮಾಡಿ ಗ್ರಾಹಕರನ್ನು ದಾರಿಗೆಳೆಯಲಾಗುತ್ತಿದೆ.
ವಾಸ್ತವದಲ್ಲಿ ಇವುಗಳಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯದ ಅಪಾಯಕಾರಿ ರಾಸಾಯನಿಕಗಳು ಸೇರಿವೆ. ‘ಕಂಫರ್ಟ್’, ‘ಸ್ಲೀಪ್‌ವೆಲ್’ (Sleepwell), ‘ರಿಲ್ಯಾಕ್ಸ್’ (Relax) ಮುಂತಾದ ಹೆಸರಿನಲ್ಲಿ ಮಾರಾಟವಾಗುತ್ತಿರುವ ಕೆಲವು ಉತ್ಪನ್ನಗಳು ಈ ಪಟ್ಟಿಯಲ್ಲಿ ಸೇರಿವೆ.
ಇದರಿಂದ ದೇಶಾದ್ಯಂತ ಕಾನೂನುಬಾಹಿರ ಸೊಳ್ಳೆ ನಿವಾರಕ ಉತ್ಪನ್ನಗಳ ವಿರುದ್ಧ ಸರ್ಕಾರದ ನಿಗಾವಹಣೆ ಮತ್ತು ಕಾರ್ಯಾಚರಣೆ ಮತ್ತಷ್ಟು ತೀವ್ರವಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ CIBRC ಕಾರ್ಯದರ್ಶಿ ಜಯಂತ್ ದೇಶಪಾಂಡೆ (Jayant Deshpande), “ಸೊಳ್ಳೆ ನಿವಾರಕ ಅಗರಬತ್ತಿಗಳಲ್ಲಿ ಡೈಮೆಫ್ಲುಥ್ರಿನ್‌ನಂತಹ ಅನುಮತಿ ಇಲ್ಲದ ರಾಸಾಯನಿಕಗಳ ಬಳಕೆ ಜನರ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ.
ಇಂತಹ ಉತ್ಪನ್ನಗಳನ್ನು ಜಾಣ್ಮೆಯಿಂದ ತಪ್ಪು ಮಾಹಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ” ಎಂದು ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಕಾನೂನು ಉಲ್ಲಂಘಿಸುವ ಉತ್ಪಾದಕರು ಮತ್ತು ವಿತರಕರಿಗೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಗ್ರಾಹಕರು ಮುಂದಿನ ದಿನಗಳಲ್ಲಿ ಕೇವಲ ಮಾನ್ಯ CIBRC ನೋಂದಣಿ ಸಂಖ್ಯೆಯಿರುವ ಸೊಳ್ಳೆ ನಿವಾರಕ ಉತ್ಪನ್ನಗಳನ್ನೇ ಖರೀದಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ಓದಿ : https://vijayatimes.com/state-government-green-signal-to-ai/