Karnataka : ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಇದೀಗ ತೀವ್ರ ತಾರಕಕ್ಕೇರಿದೆ. ಮಹಾರಾಷ್ಟ್ರ ಸರ್ಕಾರ, ಕರ್ನಾಟಕ ಸರ್ಕಾರ (Maharashtra-Karnataka dispute) ವಿರುದ್ಧ ನೀಡಿದ ಕೆಲ ಹೇಳಿಕೆಗಳು ಇದೀಗ ಕನ್ನಡಿಗರನ್ನು ಮತ್ತಷ್ಟು,
ಮಗದಷ್ಟು ಕೆರಳಿಸಿದೆ. ಈ ಹಿಂದೆಯಿಂದಲೂ ಇರುವ ಕರ್ನಾಟಕ – ಮಹಾರಾಷ್ಟ್ರ (Maharashtra) ಗಡಿ ವಿಚಾರಣೆಯ ವಿವಾದ,

ಈಗ ಸುಪ್ರೀಂಕೋರ್ಟಿನಲ್ಲಿ (Supreme Court) ಪ್ರಮುಖ ವಿಚಾರಣೆಯಾಗಿ ನಡೆಯುತ್ತಿದೆ.
ಈ ಒಂದು ವಿಚಾರಣೆಯ ಭಾಗವಾಗಿ ಮಾತನಾಡಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ (Eknath Shinde) ನಾವು ಕರ್ನಾಟಕದಲ್ಲಿರುವ ನಮ್ಮ ಗ್ರಾಮಗಳನ್ನು ಮಹಾರಾಷ್ಟ್ರ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಮಹಾರಾಷ್ಟ್ರ ಸಿಎಂ ಹೇಳಿಕೆ ನೀಡುತ್ತಿದ್ದಂತೆ, ಉಪ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ (Devendra Fadnavis) ಕೂಡ ಮಾತನಾಡಿ, ಕರ್ನಾಟಕದಲ್ಲಿರುವ ಮರಾಠಿ ಮಾತನಾಡುವ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಹೇಳಿದರು.
ಈ ಒಂದು ಹೇಳಿಕೆ ಹೊರಬೀಳುತ್ತಿದ್ದಂತೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : https://vijayatimes.com/confusion-of-assembly-elections/
ಈ ಬಗ್ಗೆ ಕರ್ನಾಟಕ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಅವರು ಮಾತನಾಡಿ, ಯಾವುದೇ ಕಾರಣಕ್ಕೂ ಮಹಾರಾಷ್ಟ್ರದ ಸಿಎಂ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ,
ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ನಮ್ಮ ಪರ ವಕೀಲರು ಸಿದ್ಧತೆಗಳನ್ನು (Maharashtra-Karnataka dispute) ಬಲಿಷ್ಠವಾಗಿ ಮಾಡಿಕೊಂಡಿದ್ದಾರೆ ಎಂದು ಸಿಎಂ ಈ ಹಿಂದೆ ಹೇಳಿದ್ದರು.
ಸದ್ಯ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಈಗ ಭುಗಿಲೆದ್ದಿದ್ದು, ಕನ್ನಡಿಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯದ ಯಾವ ಗ್ರಾಮವನ್ನು ಕೂಡ ಮಹಾರಾಷ್ಟ್ರಕ್ಕೆ ಕೊಡಬಾರದು ಎಂದು ಕನ್ನಡಿಗರು ರಾಜ್ಯ ಸರ್ಕಾರವನ್ನು (State Government) ಒತ್ತಾಯಿಸಿದೆ.

ಸದ್ಯ ಈ ಬೆನ್ನಲ್ಲೇ ಮಹಾರಾಷ್ಟ್ರ ಸಚಿವರು, ಶಾಸಕರು ಕರ್ನಾಟಕ ಗಡಿ ಜಿಲ್ಲೆಯಾದ ಬೆಳಗಾವಿಗೆ (Belagavi) ಆಗಮಿಸುತ್ತಾರೆ
ಎಂಬುದನ್ನು ತಿಳಿದಿದ್ದೇ ತಡ ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ) ಸಿಡಿದೆದ್ದು, ಬೆಳಗಾವಿಗೆ ಆಗಮಿಸಿ ಪ್ರತಿಭಟನೆ ನಡೆಸಿದೆ.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ತೀವ್ರತೆಗೆ ತೆರಳಿದ ಹಿನ್ನೆಲೆ ರಾಜ್ಯ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಇದನ್ನೂ ನೋಡಿ : https://fb.watch/hddduJyLLi/ ಸಂಪಿಗೆ ರಸ್ತೆ ದುಸ್ಥಿತಿ! ಇದು ಏನು ಫುಟ್ ಪಾತ್ ಅಥವಾ ಬಿಬಿಎಂಪಿ ಕಸದ ತೊಟ್ಟಿಯ?