Bengaluru : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪಣ ತೊಟ್ಟಿದ್ದ ಪ್ರತಿಪಕ್ಷಗಳ ಒಗ್ಗಟ್ಟಿಗೆ ಇದೀಗ ಮೊದಲ (Maharashtra Political Crisis) ಹೊಡೆತ ಬಿದ್ದಿದೆ. ದೊಡ್ಡರಾಜ್ಯ
ಮಹಾರಾಷ್ಟ್ರದಲ್ಲೇ ವಿಪಕ್ಷ ಶಕ್ತಿ ಇಬ್ಬಾಗವಾಗಿದ್ದು, ಇದು ಬಿಜೆಪಿಗೆ ಭಾರೀ ಲಾಭ ತಂದು ಕೊಡುವ ಸಾಧ್ಯತೆಗಳಿವೆ.

ಕಳೆದ ತಿಂಗಳು ಬಿಹಾರದ ಪಾಟ್ನಾದಲ್ಲಿ ಸಭೆ ಸೇರಿ ಬಿಜೆಪಿ ವಿರುದ್ದ ಒಗ್ಗಟ್ಟಾಗಿ ಸ್ಪರ್ಧೆ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದ ಪ್ರತಿಪಕ್ಷಗಳಿಗೆ ಪ್ರಾದೇಶಿಕ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವುದು ಮತ್ತು ಸೀಟು ಹಂಚಿಕೆ
ಮಾಡಿಕೊಳ್ಳುವುದು ಬಹುದೊಡ್ಡ ಸವಾಲಾಗಿದೆ. ಪ್ರಾದೇಶಿಕವಾಗಿ ಹೊಂದಾಣಿಕೆಯಾಗದ ಹೊರತು ಲೋಕಸಭಾ ಚುಣಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಪ್ರತಿಪಕ್ಷಗಳು ಅರಿತುಕೊಳ್ಳಬೇಕಿದೆ.
ಇದನ್ನು ಓದಿ: ಭಾನುವಾರ, ಸೋಮವಾರ ಪ್ರವಾಸಿಗರಿಗೆ ನಂದಿಬೆಟ್ಟ ಮತ್ತು ಸ್ಕಂದಗಿರಿಗೆ 2 ದಿನ ಪ್ರವೇಶ ಇಲ್ಲ
ಇನ್ನು ಬಿಜೆಪಿ ವಿರುದ್ದ ವಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದ ಮುಖ್ಯಸ್ಥ ಶರದ್ ಪವಾರ್ ಅವರ ಎನ್ಸಿಪಿ ಪಕ್ಷವೇ ಈಗ ಇಬ್ಭಾಗವಾಗಿದ್ದು, ಅಜಿತ್ ಪವಾರ ನೇತೃತ್ವದ ಒಂದು ಬಣ ಬಿಜೆಪಿಯೊಂದಿಗೆ
ಮೈತ್ರಿ ಮಾಡಿಕೊಂಡಿದೆ. ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಬಿಜೆಪಿಯನ್ನು ಬೆಂಬಲಿಸಿ ಡಿಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ. ಹೀಗಾಗಿ ಇದೀಗ ಮಹಾರಾಷ್ಟ್ರದಲ್ಲಿ ತ್ರಿಬಲ್
ಇಂಜಿನ್ ಸರ್ಕಾರ ರಚನೆಯಾಗಿದೆ. ಇನ್ನು 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್ಸಿಪಿ 54, ಕಾಂಗ್ರೆಸ್ 44, ಇತರರು 29 ಸ್ಥಾನಗಳಲ್ಲಿ ಜಯಗಳಿಸಿದ್ದರು.
ಆದರೆ ಶಿವಸೇನೆ ಮುಖ್ಯಮಂತ್ರಿ ಪಟ್ಟಕ್ಕೆ ಹಠ ಹಿಡಿದ ಪರಿಣಾಮ,

ಬಿಜೆಪಿ ಮತ್ತು ಶಿವಸೇನೆ ನಡುವಿನ ಮೈತ್ರಿ ಮುರಿದು ಬಿದ್ದಿತು. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಮಾಡಿಕೊಂಡು, ಮಹಾ ವಿಕಾಸ್ ಅಘಾಡಿ ಸರ್ಕಾರ
ರಚನೆ ಮಾಡಿದ್ದರು. ಆದರೆ 2022ರಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದಲ್ಲಿ 40 ಮಂದಿ ಶಾಸಕರು ಉದ್ಧವ್ ನಿರ್ಧಾರಕ್ಕೆ ಬೇಸತ್ತು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ
ನಿರ್ಧಾರ ಕೈಗೊಂಡರು. ಇದರ ಪರಿಣಾಮ ಮಹಾ ವಿಕಾಸ್ ಅಘಾಡಿ ಸರ್ಕಾರ (Maharashtra Political Crisis) ಪತನವಾಯಿತು.
ಅಜಿತ್ ಪವಾರ್ 2019ರಲ್ಲೇ ಬಿಜೆಪಿಗೆ ಬೆಂಬಲ ನೀಡಿದ್ದರು. ಆಗ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಅಜಿತ್ ಪವಾರ್ ಡಿಸಿಎಂ ಪಟ್ಟ ಅಲಂಕರಿಸಿದ್ದರು.
ಆದರೆ ಈ ಈ ಮೈತ್ರಿಗೆ ಬಹುಮತ ಇಲ್ಲದ ಕಾರಣ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ವಿತ್ವಕ್ಕೆ ಬಂದಿತ್ತು. ನಂತರ ಅಜಿತ್ ಪವಾರ ಮತ್ತೆ ಎನ್ಸಿಪಿ ಸೇರಿದ್ದರು.