Ayodhya: ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಿರುವ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ @NarendraModi ಅವರು ಉದ್ಘಾಟಿಸಿದ್ದು, ಅಯೋಧ್ಯಧಾಮ ಎಂದು ಹೆಸರಿಡಲಾಗಿದೆ. ಇನ್ನು ಈ ಅಯೋಧ್ಯೆ ವಿಮಾನ ನಿಲ್ದಾಣವು ಇಂದಿನಿಂದ ಕಾರ್ಯನಿರ್ವಹಿಸಲು ಸಿದ್ಧವಾಗಿದೆ.

ಪ್ರಸ್ತುತ ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ (Indigo And Air India Express) ಇಂದಿನಿಂದ ಹಾರಾಟ ನಡೆಸಲಿದ್ದು, ವಿಮಾನ ನಿಲ್ದಾಣದ ಮೊದಲ ಹಂತದ ನಿರ್ಮಾಣಕ್ಕೆ ಅಂದಾಜು 1,450 ಕೋಟಿ ರೂ. ಖರ್ಚಾಗಿದೆ. ವಿಮಾನ ನಿಲ್ದಾಣವು 2200 ಮೀಟರ್ ಉದ್ದದ ರನ್ ವೇ ಹೊಂದಿದೆ ಮತ್ತು A-321 ಮಾದರಿಯ ವಿಮಾನಗಳಿಗೆ ಸೂಕ್ತವಾಗಿದೆ.
6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ (Terminal) ಕಟ್ಟಡವು 600 ಪೀಕ್-ಅವರ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದ್ದು, ವಾರ್ಷಿಕ 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಂತ 2ರ ಅಡಿಯಲ್ಲಿ, 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.

ವಿಮಾನಗಳ ವಿವರಗಳು:
೧. ಇಂಡಿಗೋ ಜನವರಿ 15 ರಿಂದ ಮುಂಬೈ (Mumbai) ಮತ್ತು ಅಯೋಧ್ಯೆ ನಡುವೆ ದೈನಂದಿನ ವಿಮಾನ ಸಂಚಾರ ನಡೆಸಲಿದೆ.
೨. ಮುಂಬೈನಿಂದ ವಿಮಾನವು ಮಧ್ಯಾಹ್ನ 12:30 ಕ್ಕೆ ಹೊರಟು ಮಧ್ಯಾಹ್ನ 2:45 ಕ್ಕೆ ಅಯೋಧ್ಯೆಯನ್ನು ತಲುಪುತ್ತದೆ.
೩. ಅಯೋಧ್ಯೆಯಿಂದ ವಿಮಾನವು 3:15 ಕ್ಕೆ ಹೊರಟು ಸಂಜೆ 5:40 ಕ್ಕೆ ಮುಂಬೈಗೆ ಇಳಿಯಲಿದೆ ಎಂದು ಇಂಡಿಗೋ ವೇಳಾಪಟ್ಟಿ ಹಂಚಿಕೊಂಡಿದೆ.
೪. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಡಿಸೆಂಬರ್ (December) 30 ರಂದು ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳನ್ನು ನಿರ್ವಹಿಸುತ್ತದೆ. ೫. ಜನವರಿ 17 ರಿಂದ ವಿಮಾನಯಾನವು ಎರಡು ಪ್ರಮುಖ ಮೆಟ್ರೋಗಳಾದ ಬೆಂಗಳೂರು ಮತ್ತು ಕೋಲ್ಕತ್ತಾದಿಂದ (Bengaluru And Kolkata) ಅಯೋಧ್ಯೆಗೆ ನೇರ ವಿಮಾನಯಾನವನ್ನು ಪ್ರಾರಂಭಿಸುತ್ತದೆ.
ಬೆಂಗಳೂರಿನಿಂದ ಪ್ರಯಾಣಿಸುವವರು ಗಮನಿಸಬೇಕಾದ ಅಂಶ:
ರಾಜ್ಯ ರಾಜಧಾನಿ ಬೆಂಗಳೂರಿನಿಂದ#Bengaluru ಪ್ರಯಾಣಿಸುವವರಿಗೆ ಮೊದಲ ವಿಮಾನವು ಜನವರಿ 17 ರಂದು ಬೆಳಿಗ್ಗೆ 8.05 ಕ್ಕೆ ಹೊರಡಲಿದ್ದು, 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಹಿಂದಿರುಗುವ ವಿಮಾನವು ಮಧ್ಯಾಹ್ನ 3.40ಕ್ಕೆ ಅಯೋಧ್ಯೆಯಿಂದ ಹೊರಟು ಸಂಜೆ 6.10ಕ್ಕ ಬೆಂಗಳೂರು ತಲುಪಲಿದೆ. ಕೋಲ್ಕತ್ತಾದಿಂದ ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಟೇಕ್ ಆಫ್ ಆಗಲಿದ್ದು, ಮಧ್ಯಾಹ್ನ 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ. ಕೋಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25 ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10 ಕ್ಕೆ ಅಯೋಧ್ಯೆಯನ್ನು ತಲುಪಲಿದೆ.
ಏರ್‌ಲೈನ್‌ನ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ airindiaexpress.com ಮತ್ತು ಇತರ ಪ್ರಮುಖ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ದೊರೆಯಲಿದೆ.
ಭವ್ಯಶ್ರೀ ಆರ್ ಜೆ