• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹೇಶ್ ಬಾಬುಗೆ ಸಂಕಷ್ಟ: ED ನೋಟಿಸ್!

Neha M by Neha M
in ಪ್ರಮುಖ ಸುದ್ದಿ, ಮನರಂಜನೆ, ರಾಜ್ಯ, ವಿಜಯ ಟೈಮ್ಸ್‌
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹೇಶ್ ಬಾಬುಗೆ ಸಂಕಷ್ಟ: ED ನೋಟಿಸ್!
0
SHARES
80
VIEWS
Share on FacebookShare on Twitter
  • ಮಹೇಶ್ ಬಾಬುಗೆ ನೋಟಿಸ್ ನೀಡಿದ ಜಾರಿ ನಿರ್ದೇಶನಾಲಯ
  • ಏಪ್ರಿಲ್ 27ರಂದು ವಿಚಾರಣೆಗೆ ಬರುವಂತೆ ಮಹೇಶ್ ಬಾಬುಗೆ ಸಮನ್ಸ್
  • ಚೆಕ್, ಕ್ಯಾಶ್​​ನಲ್ಲಿ ಕೋಟ್ಯಂತರ ರೂ. ಹಣ ಪಡೆದಿದ್ದ ಟಾಲಿವುಡ್ ಪ್ರಿನ್ಸ್

Hyderabad : ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ (Mahesh Babu) ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, (Mahesh Babu in trouble) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ (Notice) ನೀಡಿದೆ.ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್​ನ ಸ್ಟಾರ್ ನಟ ಮಹೇಶ್ ಬಾಬುಗೆ ಜಾರಿ ನಿರ್ದೇಶನಾಲಯ (ED) ನೋಟಿಸ್ ಕೊಟ್ಟಿದೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ಸುರಾನ ಗ್ರೂಪ್ (Surana Group) ಮತ್ತು ಸಾಯಿಸೂರ್ಯ ಡೆವಲಪರ್ಸ್ ಪ್ರಕರಣದಲ್ಲಿ (Saisurya Developers case) ಇದೇ 28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಏಪ್ರಿಲ್ 16ರಂದು ಇಡಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ (Hyderabad) ಶೋಧ ನಡೆಸಿದ್ದರು. ಸುರಾನ ಗ್ರೂಪ್ ಮತ್ತು ಸಾಯಿಸೂರ್ಯ ಡೆವಲಪರ್ಸ್ ಕಚೇರಿಗಳು ಹಾಗೂ ಈ ಕಂಪನಿಗಳ ಮುಖ್ಯಸ್ಥರ ಮನೆಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬೆನ್ನಲ್ಲೇ ಇಡಿ ಆಧಿಕಾರಿಗಳು ಮಹೇಶ್ ಬಾಬುಗೆ ನೋಟಿಸ್ ಜಾರಿ ಮಾಡಿದ್ದು,

ಏಪ್ರಿಲ್ 27ರ ಬೆಳಿಗ್ಗೆ 10:30ಕ್ಕೆ ಮಹೇಶ್ ಬಾಬು ಹೈದರಾಬಾದ್​ನಲ್ಲಿ (Mahesh Babu in Hyderabad) ವಿಚಾರಣೆಗೆ ಹಾಜರಾಗಬೇಕಿದೆ.ಮಹೇಶ್ ಬಾಬು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ (wife and children) ಸಾಯಿಸೂರ್ಯ ಡೆವಲಪರ್ಸ್ ಜಾಹೀರಾತಿನಲ್ಲಿ ನಟಿಸಿದ್ದರು. ಇದೇ ಜಾಹಿರಾತು ವಿಚಾರವಾಗಿ ಇದೀಗ ಮಹೇಶ್ ಬಾಬು ಅವರಿಗೆ ಸಂಕಷ್ಟ ಎದುರಾಗಿದೆ.

ರಿಯಲ್‌ ಎಸ್ಟೇಟ್‌ ಗುಂಪುಗಳಾದ ಸುರಾನಾ ಗ್ರೂಪ್‌ (Surana Group) ಡೆವಲಪರ್ಸ್‌ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ (Sai Surya Developers) ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ನಟ ಮಹೇಶ್‌ ಬಾಬು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದೆ. ಮಹೇಶ್‌ ಬಾಬು ಈ ಸಂಸ್ಥೆಯ ಜಾಹೀರಾತುಗಳಲ್ಲಿ (Advertisements) ಕಾಣಿಸಿಕೊಂಡಿದ್ದಕ್ಕಾಗಿ 5.9 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆದರೆ ಸಂಸ್ಥೆಗಳ ಶೋಧನೆಯಲ್ಲಿ 100 ಕೋಟಿ ರೂಪಾಯಿಗಳ (100 crore rupees) ಅಕ್ರಮ ವಹಿವಾಟು ಪತ್ತೆಯಾಗಿದೆ. ರಿಯಲ್‌ ಎಸ್ಟೇಟ್‌ ಗುಂಪುಗಳಾದ ಸುರಾನಾ ಗ್ರೂಪ್‌ ಮತ್ತು ಸಾಯಿ ಸೂರ್ಯ ಡೆವಲಪರ್ಸ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (Illegal money transfer) ಪ್ರಕರಣದಲ್ಲಿ ಮಹೇಶ್‌ ಬಾಬು ಅವರು ತನಿಖೆ ಎದುರಿಸುತ್ತಿದ್ದಾರೆ.ಈ ಇಬ್ಬರು ಅನಧಿಕೃತ ಲೇಔಟ್‌ಗಳಲ್ಲಿ (Unofficial layouts) ಪ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ, ಒಂದೇ ಪ್ಲಾಟ್‌ಗಳನ್ನು ಹಲವು ಬಾರಿ ಮರುಮಾರಾಟ ಮಾಡುವ ಮೂಲಕ ಮತ್ತು ನೋಂದಣಿಗಳ ಬಗ್ಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ ಎಂಬ ಆರೋಪವಿದೆ.

ಅಷ್ಟಕ್ಕೂ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಮಹೇಶ್‌ ಬಾಬು ಅವರಿಗೆ 5.9 ಕೋಟಿ ರೂಪಾಯಿಗಳ ಸಂಭಾವನೆ ನೀಡಲಾಗಿದೆ. ಈ ಪೈಕಿ 3.4 ಕೋಡಿ ರೂಪಾಯಿ ಚೆಕ್‌ ಮೂಲಕ (By cheque) ಮತ್ತು 2.5 ಕೋಟಿ ರೂಪಾಯಿ ನಗದು ಮೂಲಕ ಪಾವತಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಮಹೇಶ್‌ ಬಾಬು ಅವರಿಗೆ ಇಡಿ ಸಮನ್ಸ್‌ ಜಾರಿ (ED summons issued) ಮಾಡಿದೆ. ಈಗಾಗಲೇ ಸುರಾನಾ ಗ್ರೂಪ್‌ ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ದೊಡ್ಡ ವಂಚನೆ ಮಾಡಿದೆ ಎಂದು ಇಡಿ ಹೇಳಿದೆ.

ಹೈದರಾಬಾದ್‌ ಮತ್ತು ಸೆಕೆಂದರಾಬಾದ್‌ನಲ್ಲಿ (Hyderabad and Secunderabad) ನಾಲ್ಕು ಕಡೆ ಶೋಧ ನಡೆಸಲಾಗಿದೆ. ತೆಲಂಗಾಣ ಪೊಲೀಸರು (Telangana Police) ದಾಖಲಿಸಿದ ಎಫ್‌ಐಆರ್‌ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ನರೇಂದ್ರ ಸುರಾನಾ, ಕೆ ಸತೀಶ್‌ ಚಂದ್ರ ಗುಪ್ತಾ ಮತ್ತು ಇತರರ ವಿರುದ್ಧ ಇವರು ಹೂಡಿಕೆದಾರರಗಿಗೆ ಮೋಸ ಮಾಡಿದ್ದಾರೆ ಎಂಬ ಆರೋಪದಡಿ ಎಫ್‌ಐಆರ್‌ ದಾಖಲಾಗಿದೆ.

ಇದನ್ನು ಓದಿ : http://ಕರ್ನಾಟಕ ಮಾಜಿ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಆತ್ಮರಕ್ಷಣೆಗಾಗಿ ಕೊಲೆ ಮಾಡಿರೋದಾಗಿ ಪತ್ನಿ ಪಲ್ಲವಿ ತಪ್ಪೊಪ್ಪಿಗೆ

ಸದ್ಯ ಈ ಪ್ರಕರಣ ಟಾಲಿವುಡ್‌ನಲ್ಲಿ (Tollywood) ಸಂಚಲನ ಸೃಷ್ಟಿಸಿದ್ದು, ಮಹೇಶ್‌ ಬಾಬು ಅವರ ಅಭಿಮಾನಿಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಮಹೇಶ್‌ ಬಾಬು ಅವರು ಇಡಿ ವಿಚಾರಣೆಗೆ ಹಾಜರಾಗಬೇಕಿದ್ದು, ಇದರಲ್ಲಿ ಮಹೇಶ್‌ ಬಾಬು ಅವರು ಶಾಮೀಲಾಗಿದ್ದಾರಾ ಎಂಬ ಬಗ್ಗೆ ತನಿಖೆ ನಡೆಯಲಿದೆ. (Mahesh Babu in trouble) ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

Tags: EDHyderabadMahesh babuTelangana PoliceTollywood

Related News

ಮ್ಯೂಚುವಲ್ ಫಂಡ್ : ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಯಾವುದು ಬೆಸ್ಟ್
ಪ್ರಮುಖ ಸುದ್ದಿ

ಮ್ಯೂಚುವಲ್ ಫಂಡ್ : ಮಲ್ಟಿಕ್ಯಾಪ್, ಫ್ಲೆಕ್ಸಿಕ್ಯಾಪ್ ಮತ್ತು ಮಲ್ಟಿ ಅಸೆಟ್ ಫಂಡ್‌ಗಳಲ್ಲಿ ಯಾವುದು ಬೆಸ್ಟ್

January 21, 2026
ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ
ಪ್ರಮುಖ ಸುದ್ದಿ

ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ

January 21, 2026
ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.