- ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣ ಕನ್ನಡದಿಂದ ಗಡಿಪಾರು
- ಕರ್ನಾಟಕ ರಾಜ್ಯ ಪೊಲೀಸ್ ಕಾಯಿದೆಯ ಸೆಕ್ಷನ್ 55 ಅಡಿಯಲ್ಲಿ ಹೊರಡಿಸಲಾದ ಆದೇಶ
- ಒಂದು ವರ್ಷದವರೆಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು (Mahesh Shetty Timarodi exiled from Dakshina Kannada)
Dakshina Kannada: ಧರ್ಮಸ್ಥಳ ಪ್ರಕರಣದಲ್ಲಿ ಮುಂದಾಳತ್ವ ವಹಿಸಿದ್ದ ಹಾಗೂ ಸೌಜನ್ಯ ಅ*ಚಾರ ಪ್ರಕರಣದಲ್ಲಿ ಮತ್ತು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಅಧ್ಯಕ್ಷ
ಮಹೇಶ್ ಶೆಟ್ಟಿ ತಿಮರೋಡಿ(Mahesh Shetty Timarodi) ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್(Stella Varghese) ಅವರು ಪ್ರಮುಖ ಆದೇಶ ಹೊರಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡದಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಲಾಗಿದೆ. ಈಗಾಗಲೇ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡದ ಹಲವು ಪೊಲೀಸ್ ಠಾಣೆಗಳಲ್ಲಿ
ಒಟ್ಟು 32 ಪ್ರಕರಣಗಳು ದಾಖಲಾಗಿದ್ದವು. ಬೆಳ್ತಂಗಡಿ ಪೊಲೀಸರ ವರದಿಯನ್ನು ಆಧರಿಸಿ ಸಹಾಯಕ ಆಯುಕ್ತೆ ಈ ಗಡಿಪಾರು ಆದೇಶಕ್ಕೆ ಸಹಿ ಹಾಕಿದ್ದಾರೆ.
ಪೊಲೀಸ್ ಇಲಾಖೆಯ(Police Department) ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯ ಪೊಲೀಸ್ ಕಾಯಿದೆ ಸೆಕ್ಷನ್ 55 ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಕಳುಹಿಸಲಾಗಿದೆ. ಒಂದು ವರ್ಷದವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಅವರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ಇನ್ನು ಮಹೇಶ್ ಶೆಟ್ಟಿ ತಿಮರೋಡಿ ಸದ್ಯ ಬೆಳ್ತಂಗಡಿಯಲ್ಲಿಯೇ(Belthangady) ಇದ್ದರೂ, ಅವರ ಕೈಗೆ ಇನ್ನೂ ಆದೇಶದ ಅಧಿಕೃತ ಪ್ರತಿಯನ್ನು ಹಸ್ತಾಂತರಿಸಿಲ್ಲ.
ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿಗೆ ಆದೇಶ ತಲುಪಿದ ಕೂಡಲೇ ಗಡಿಪಾರು ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾವುದೇ ಕ್ಷಣದಲ್ಲಿ ಅವರು ಜಿಲ್ಲೆಯ ಹೊರಗೆ ತೆರಳಬೇಕಾಗುತ್ತದೆ.
ತಿಮರೋಡಿ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಕೆಲವು ಪೊಲೀಸರೇ ದಾಖಲಿಸಿದವು, ಇನ್ನು ಕೆಲವು ಸಾಮಾನ್ಯ ನಾಗರಿಕರ ದೂರುಗಳ ಮೇರೆಗೆ ದಾಖಲಾಗಿದವು.
ಕಳೆದ ಕೆಲವು ವರ್ಷಗಳಿಂದ ಅವರು ಹಲವು ವಿಚಾರಣೆಗಳಿಗೆ ಹಾಜರಾಗಬೇಕಾಯಿತು. ಬಂಧನಕ್ಕೂ ಒಳಗಾಗಿದ್ದರು.ಇತ್ತೀಚೆಗೆ ‘ಮಾಸ್ಕ್‌ಮ್ಯಾನ್ ಚಿನ್ನಯ್ಯ’ ಪ್ರಕರಣದ ಬಳಿಕ ತಿಮರೋಡಿ ಮೇಲೆ
ಇನ್ನಷ್ಟು ಪ್ರಕರಣಗಳು ದಾಖಲಾದವು. ಜೊತೆಗೆ ಎರಡು ವರ್ಷಗಳ ಹಿಂದಿನ ಸಿಎನ್ ಚಿನ್ನಯ್ಯ(CN Chinnaiah) ಅವರೊಂದಿಗೆ ನಡೆದ ಸಂಭಾಷಣೆಯ ವಿಡಿಯೋ ಭಾಗಗಳು ಮತ್ತೆ ಹೊರಬಿದ್ದಿದ್ದು,
ಈ ಘಟನೆ ಹೆಚ್ಚಿನ ಚರ್ಚೆಗೆ ಕಾರಣವಾಯಿತು. ಇದೇ ಸಮಯದಲ್ಲಿ ಗಡಿಪಾರು ಆದೇಶ ಹೊರಬೀಳುವುದು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಕುತೂಹಲ ಹುಟ್ಟಿಸಿದೆ.
ಇನ್ನು ಗಡಿಪಾರು ಎಂದರೆ ಶಿಕ್ಷೆಯಲ್ಲ. ಇದು ಆಡಳಿತಾತ್ಮಕ ಕ್ರಮ, ಸಾರ್ವಜನಿಕ ಶಾಂತಿ ಕಾಪಾಡಲು ಮತ್ತು ಮುಂದಿನ ಅಪರಾಧಗಳನ್ನು ತಡೆಯಲು ತೆಗೆದುಕೊಳ್ಳುವ ತುರ್ತು ನಿರ್ಧಾರ.
ಗಡಿಪಾರು ಆದೇಶದಂತೆ, ತಿಮರೋಡಿ ದಕ್ಷಿಣ ಕನ್ನಡ ಜಿಲ್ಲೆಯ ಭೌಗೋಳಿಕ ವ್ಯಾಪ್ತಿಗೆ ಪ್ರವೇಶಿಸಬಾರದು. ಆದರೆ, ಅವರ ವಾಕ್ ಸ್ವಾತಂತ್ರ್ಯಕ್ಕೆ ಯಾವುದೇ ನಿರ್ಬಂಧವಿಲ್ಲ.
ಅಂದರೆ, ಅವರು ಮಾನ್ವಿ ಅಥವಾ ಬೇರೆ ಜಿಲ್ಲೆಯಲ್ಲಿ ಇದ್ದು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು, ವಿಡಿಯೋಗಳನ್ನು ಬಿಡುಗಡೆ ಮಾಡಬಹುದು.
ಆದರೆ, ಆ ಹೇಳಿಕೆಗಳು ಅಥವಾ ಕಾರ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದರೆ, ಹೊಸ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇರುತ್ತದೆ.
ತಿಮರೋಡಿ ಅವರು ಗಡಿಪಾರು ಅವಧಿಯಲ್ಲಿ ದಕ್ಷಿಣ ಕನ್ನಡ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಸಾಧ್ಯ. ಆದರೆ, ಅವರು ಜಿಲ್ಲೆಯ ಗಡಿ ಮೀರುವಂತಿಲ್ಲ.
ಒಂದು ವರ್ಷದ ನಂತರ ಪರಿಸ್ಥಿತಿ ಶಾಂತವಾಗಿದೆ ಎಂಬ ನಿರ್ಧಾರ ಬಂದರೆ ಗಡಿಪಾರು ಅವಧಿ ಕೊನೆಗೊಳ್ಳುತ್ತದೆ. ಇಲ್ಲವಾದರೆ, ಅಗತ್ಯವಿದ್ದರೆ ಇನ್ನಷ್ಟು ಅವಧಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ.
ಇದನ್ನು ಓದಿ : ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ತಿರುವು: ಬಂಗ್ಲೆಗುಡ್ಡ ಶೋಧದಲ್ಲಿ ಅಸ್ಥಿಪಂಜರ-ತಲೆಬುರುಡೆ ಪತ್ತೆ
ಇದಕ್ಕೆ ತಿಮರೋಡಿ ಅವರು ಮುಂದಿನ ದಿನಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ, ಹಾಗೂ ಅವರ ಮೇಲೆ ದಾಖಲಾಗಿರುವ ಪ್ರಕರಣಗಳು ಯಾವ ಹಂತ ತಲುಪುತ್ತವೆ ಎಂಬುದು ಕಾದು ನೋಡಬೇಕಾಗಿದೆ. (Mahesh Shetty Timarodi exiled from Dakshina Kannada)